Surya Budha Yuti: ಈ ರಾಶಿಯವರಿಗೆ ಬಂಪರ್ ಲಾಭ

Fri, 26 May 2023-3:29 pm,

ಮೇ 15ರಂದು ಗ್ರಹಗಳ ರಾಜ ಸೂರ್ಯ ರಾಶಿಪರಿವರ್ತನೆ ಮಾಡಿದ್ದಾನೆ. ಜೂನ್ 7 ರಂದು ಇದೇ ರಾಶಿಗೆ ಗ್ರಹಗಳ ರಾಜಕುಮಾರನಾದ ಬುಧ ಕೂಡ ಪ್ರವೇಶಿಸಲಿದ್ದಾನೆ. ಒಂದೇ ರಾಶಿಯಲ್ಲಿ ಸೂರ್ಯ ಬುಧ ಸಂಯೋಜನೆಗೊಂಡಾಗ ಶುಭಕರ ಬುಧಾದಿತ್ಯ ಯೋಗ ನಿರ್ಮಾಣಗೊಳ್ಳುತ್ತದೆ. ಅತ್ಯಂತ ಶಕ್ತಿಯುತವಾದ ಬುಧಾದಿತ್ಯ ಯೋಗವು ಕೆಲವು ರಾಶಿಯವರಿಗೆ ಹಣದ ಹೊಳೆಯನ್ನೇ ಹರಿಸಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಬುಧಾದಿತ್ಯ ಯೋಗವು ವೃಷಭ ರಾಶಿಯವರರ ಜೀವನದ್ಲಲಿ ಧನಾತ್ಮಕ ಬದಲಾವಣೆಗಳನ್ನು ತರಲಿದೆ. ಇದು ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಕೆಲವು ಒಳ್ಳೆಯ ಫಲಗಳನ್ನು ನೀಡಲಿದೆ. ಜೊತೆಗೆ ಹಣಕಾಸಿನ ಸ್ಥಿತಿಯೂ ಉತ್ತಮಗೊಳ್ಳಲಿದೆ. 

ಬುಧಾದಿತ್ಯ ಯೋಗವು ಕರ್ಕಾಟಕ ರಾಶಿಯವರ ಜೀವನದಲ್ಲಿಯೂ ಕೂಡ ಒಳ್ಳೆಯ ಬದಲಾವಣೆಗಳನ್ನು ತರಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದ್ದು ನಿಮ್ಮ ಆರ್ಥಿಕ ಸಮಸ್ಯೆಗಳು ಬಗೆಹರಿಯಲಿವೆ. 

ಬುಧಾದಿತ್ಯ ಯೋಗವು ಸಿಂಹ ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಈ ಸಮಯದಲ್ಲಿ ಸಿಂಹ ರಾಶಿಯವರು ವೃತ್ತಿ ರಂಗದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಸಾಧ್ಯತೆ ಇದೇ. ಮಾತ್ರವಲ್ಲ, ಹಣಕಾಸಿನ ಸ್ಥಿತಿ ಬಲಗೊಳ್ಳಲಿದ್ದು ಸುಖ-ಸಂತೋಷದ ಜೀವನವನ್ನು ಅನುಭವಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link