Surya Gochar: ವಾರದ ಬಳಿಕ ಈ ಆರು ರಾಶಿಯವರ ಜೀವನದಲ್ಲಿ ಸವಾಲಿನ ಸಮಯ
ಜ್ಯೋತಿಷ್ಯ ಶಾಸ್ತ್ರದಲ್ಲಿ, ಸೂರ್ಯ ದೇವನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯನು ಶಕ್ತಿ, ರಾಜಕೀಯ ಗುಣಗಳು ಮತ್ತು ತತ್ವಗಳನ್ನು ಪ್ರತಿನಿಧಿಸುತ್ತಾನೆ. ಯಾವುದೇ ವ್ಯಕ್ತಿಯ ಜಾತಕದಲ್ಲಿ ಸೂರ್ಯ ಬಲವಾಗಿದ್ದರೆ ವ್ಯಕ್ತಿಗೆ ಉತ್ತಮ ಆರೋಗ್ಯ ಮತ್ತು ಜೀವನದಲ್ಲಿ ತೀಕ್ಷ್ಣವಾದ ಬುದ್ಧಿವಂತಿಕೆಯನ್ನು ನೀಡುತ್ತದೆ. ಅದೇ ರೀತಿ ಜಾತಕದಲ್ಲಿ ಸೂರ್ಯನ ಅಶುಭ ಸ್ಥಾನವು ನಾನಾ ರೀತಿಯ ಸಂಕಷ್ಟಗಲನು ತರಲಿದೆ ಎಂದು ಹೇಳಲಾಗುತ್ತದೆ.
ಸದ್ಯ ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿರುವ ಸೂರ್ಯನು ಇನ್ನೊಂದು ವಾರದಲ್ಲಿ ಎಂದರೆ ಅಕ್ಟೋಬರ್ 18, 2023 ರಂದು ಮಧ್ಯಾಹ್ನ 01:18 ಕ್ಕೆ ತುಲಾ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಸೂರ್ಯ ರಾಶಿ ಪರಿವರ್ತನೆಯು ಎಲ್ಲಾ ರಾಶಿಯವರ ಮೇಲ್ ಧನಾತ್ಮಕ- ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಅಕ್ಟೋಬರ್ 18ರಂದು ಸೂರ್ಯ ಸಂಚಾರವು ಆರು ರಾಶಿಯವರ ಜೀವನದಲ್ಲಿ ಸಂಕಷ್ಟದ ಸರಮಾಲೆಯನ್ನೇ ಸೃಷ್ಟಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ನೋಡುವುದಾದರೆ...
ಅಕ್ಟೋಬರ್ 18ರ ಸೂರ್ಯ ರಾಶಿ ಪರಿವರ್ತನೆಯು ಮೇಷ ರಾಶಿಯವರಿ ಅಷ್ಟು ಶುಭಕರವಲ್ಲ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಉದ್ಯೋಗದಲ್ಲಿ ಸಮಸ್ಯೆಗಳು ಉಲ್ಬಣಿಸಬಹುದು. ಪ್ರವಾಸದಿಂದ ನಷ್ಟ ಉಂಟಾಗಬಹುದು.
ಸೂರ್ಯ ಸಂಚಾರವು ಮಿಥುನ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಅಡೆತಡೆಯನ್ನು ಉಂಟು ಮಾಡಲಿದೆ. ಇದು ನಿಮ್ಮ ಮನಸ್ಸಿನಲ್ಲಿ ಚಂಚಳತೆಗೆ ಕಾರಣವಾಗಲಿದೆ. ಈ ಅವಧಿಯಲ್ಲಿ, ನಿಮ್ಮ ಉದ್ಯೋಗ ಸ್ಥಳದಲ್ಲಿ ಬಹಳ ಎಚ್ಚರಿಕೆಯಿಂದ ಮುಂದುವರೆಯಿರಿ.
ಸೂರ್ಯನ ರಾಶಿ ಬದಲಾವಣೆಯು ಕನ್ಯಾ ರಾಶಿಯವರ ಬದುಕಿನಲ್ಲಿ ಉದ್ಯೋಗ, ವ್ಯವಹಾರದಲ್ಲಿ ಮಾತ್ರವಲ್ಲದೆ ಕುಟುಂಬದಲ್ಲಿಯೂ ಸಮಸ್ಯೆಗಳನ್ನು ಹೆಚ್ಚಿಸಲಿದೆ. ಹಾಗಾಗಿ, ಒತ್ತಡ ಹೆಚ್ಚಾಗಬಹುದು.
ಸ್ವ ರಾಶಿಯಲ್ಲಿ ಸೂರ್ಯ ಸಂಕ್ರಮಣವು ತುಲಾ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಅಡ್ಡಿ ಉಂಟು ಮಾಡಲಿದೆ. ಈ ಸಮಯದಲ್ಲಿ, ವೃತ್ತಿ ಬದುಕಿನಲ್ಲಿ ಎದುರಾಗುವ ಸಮಸ್ಯೆಗಳು ನಿಮ್ಮನ್ನು ಚಿಂತೆಗೆ ದೂಡಬಹುದು.
ಸೂರ್ಯ ರಾಶಿ ಪರಿವರ್ತನೆಯ ಪರಿಣಾಮವಾಗಿ ಮಕರ ರಾಶಿಯವರಿಗೆ ವೃತ್ತಿ ರಂಗದಲ್ಲಿ ಒತ್ತಡ ಹೆಚ್ಚಾಗಬಹುದು. ವ್ಯಾಪಾರ-ವ್ಯವಹಾರದಲ್ಲಿ ಭಾರಿ ನಷ್ಟ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಮುಂದುವರೆಯಿರಿ.
ಅಕ್ಟೋಬರ್ ಮಾಸದಲ್ಲಿ ಗ್ರಹಗಳ ರಾಜ ಸೂರ್ಯನ ರಾಶಿ ಪರಿವರ್ತನೆಯು ಮೀನ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ನಿಮ್ಮ ಆದಾಯದ ಮೂಲಗಳು ಕಡಿಮೆಯಾಗುವ ಸಾಧ್ಯತೆ ಇದ್ದು, ಆರೋಗ್ಯವೂ ಅಷ್ಟು ಉತ್ತಮವಾಗಿರುವುದಿಲ್ಲ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.