Surya Gochar: ಮಕರ ರಾಶಿಯಲ್ಲಿ ಸೂರ್ಯನ ಸಂಚಾರ, ಯಾರಿಗೆ ಲಾಭ? ಯಾರಿಗೆ ನಷ್ಟ?

Tue, 16 Jan 2024-8:26 am,

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಕರೆಯಲ್ಪಡುವ ಸೂರ್ಯದೇವ ಜನವರಿ 15, 2024 ರಂದು ಧನು ರಾಶಿಯಿಂದ ಹೊರಬಂದು ಮಕರ ರಾಶಿಯನ್ನು ಪ್ರವೇಶಿಸಿದ್ದಾನೆ.  ಫೆಬ್ರವರಿ 13, 2024 ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿರುವ ಸೂರ್ಯ ದ್ವಾದಶ ರಾಶಿಗಳ ಮೇಲೆ ಏನು ಪ್ರಭಾವ ಬೀರಲಿದ್ದಾನೆ ತಿಳಿಯೋಣ... 

ಮೇಷ ರಾಶಿ:   ಸೂರ್ಯ ರಾಶಿ ಪರಿವರ್ತನೆಯಿಂದ ಮೇಷ ರಾಶಿಯವರಿಗೆ ಸುಖ-ಸಂಪತ್ತು ಪ್ರಾಪ್ತಿಯಾಗಲಿದೆ. 

ವೃಷಭ ರಾಶಿ:   ಈ ಸಮಯದಲ್ಲಿ ವೃಷಭ ರಾಶಿಯ ಜನರು ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೀರ್ತಿ, ಪ್ರಗತಿಯನ್ನು ಹೊಂದುತ್ತಾರೆ. 

ಮಿಥುನ ರಾಶಿ:    ಮಿಥುನ ರಾಶಿಯವರಿಗೆ ಹಣಕಾಸಿನ ಮೂಲಗಳು ಹೆಚ್ಚಾಗಲಿದೆ, ಹಠಾತ್ ಧನಾಲಾಭದಿಂದ ಮನೋಲ್ಲಾಸ. 

ಕರ್ಕಾಟಕ ರಾಶಿ:  ಕರ್ಕಾಟಕ ರಾಶಿಯವರಿಗೆ ಸೂರ್ಯ ಸಂಚಾರದ ಫಲವಾಗಿ ಕೌಟುಂಬಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗಲಿದೆ. 

ಸಿಂಹ ರಾಶಿ:    ಸಿಂಹ ರಾಶಿಯ ವಿದ್ಯಾರ್ಥಿಗಳಿಗೆ ಸೂರ್ಯ ದೇವ ಉತ್ತಮ ಫಲಗಳನ್ನು ನೀಡಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ ಸಾಧಿಸುವಿರಿ. 

ಕನ್ಯಾ ರಾಶಿ:  ಕನ್ಯಾ ರಾಶಿಯವರಿಗೆ ಈ ಸಮಯದಲ್ಲಿ ನಿಮ್ಮ ಕೆಲಸ-ಕಾರ್ಯಗಳಿಗೆ ಮೇಲಾಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. 

ತುಲಾ ರಾಶಿ:   ಸೂರ್ಯ ರಾಶಿ ಪರಿವರ್ತನೆಯ ಫಲವಾಗಿ ಟ್ಲಾ ರಾಶಿಯ ಜನರಿಗೆ  ಅನಿರೀಕ್ಷಿತ ಸವಾಲುಗಳು ಹೆಚ್ಚಾಗಬಹುದು. ದುಡ್ಡಿನ ವಿಷಯದಲ್ಲಿ ಯಾರನ್ನೂ ನಂಬಬೇಡಿ. 

ವೃಶ್ಚಿಕ ರಾಶಿ:    ಸೂರ್ಯ ಸಂಚಾರದಿಂದಾಗಿ ವೃಶ್ಚಿಕ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು, ಆಸ್ತಿ, ಭೂಮಿಯಿಂದ ಲಾಭವಾಗಲಿದೆ.  

ಧನು ರಾಶಿ:   ಸೂರ್ಯ ರಾಶಿ ಪರಿವರ್ತನೆಯು ಧನು ರಾಶಿಯವರಿಗೆ ಮಂಗಳಕರ ಫಲಗಳನ್ನು ನೀಡಲಿದೆ. ಆದರೂ, ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. 

ಮಕರ ರಾಶಿ:   ಸ್ವ ರಾಶಿಯಲ್ಲಿ ಸೂರ್ಯನ ಸಂಚಾರದಿಂದಾಗಿ ಮಕರ ರಾಶಿಯವರಿಗೆ ಸ್ಥಗಿತಗೊಂಡ ಕೆಲಸಗಳು ವೇಗವನ್ನು ಪಡೆಯಲಿವೆ.

ಕುಂಭ ರಾಶಿ:   ಈ ಸಮಯದಲ್ಲಿ ಕುಂಭ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಳಿವೆ. ದಾಂಪತ್ಯದಲ್ಲಿ ಬಿರುಕುಂಟಾಗಬಹುದು. 

ಮೀನ ರಾಶಿ:   ಸೂರ್ಯ ಸಂಚಾರವು ಮೀನ ರಾಶಿಯವರಿಗೆ ಹಣಕಾಸಿನ ಲಾಭನ್ನು ತರಲಿದೆ. ಭೂಮಿ-ಆಸ್ತಿ ಖರೀದಿ ಯೋಗವೂ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link