Surya Gochar 2024: ಸೂರ್ಯ ಗೋಚಾರದಿಂದ ಈ 6 ರಾಶಿಯವರಿಗೆ ತೆರೆಯಲಿದೆ ಭಾಗ್ಯದ ಬಾಗಿಲು

Wed, 08 May 2024-7:10 am,

ಗ್ರಹಗಳ ರಾಜ ಸೂರ್ಯದೇವನು 2024ರ  ಮೇ 14 ರಂದು ಸಂಜೆ 06:05 ಕ್ಕೆ ಶುಕ್ರನ ರಾಶಿಚಕ್ರ ಚಿಹ್ನೆಯಾದ ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರಿಂದ 6 ರಾಶಿಯವರ ಜೀವನವೇ ಬದಲಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಸೂರ್ಯ ರಾಶಿ ಸಂಚಾರವು ಮೇಷ ರಾಶಿಯವರಿಗೆ ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ವೃತ್ತಿಯಲ್ಲಿ ಯಶಸ್ಸನ್ನು ಪಡೆಯುವಿರಿ. 

ಸ್ವ ರಾಶಿಯಲ್ಲಿ ಸೂರ್ಯ ಸಂಚಾರವು ವೃಷಭ ರಾಶಿ ಅನುಕೂಲಕರ ಸಮಯ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಕಾರ್ಯಸಿದ್ದಿ, ಹೊಸ ವ್ಯವಹಾರ ಆರಂಭಿಸಲು ಒಳ್ಳೆಯ ಸಮಯ. 

ಸೂರ್ಯ ರಾಶಿ ಪರಿವರ್ತನೆಯು ಕರ್ಕಾಟಕ ರಶಾಹಿಯವರಿಗೆ ಭಾಗ್ಯದ ಬಾಗಿಲುಗಳನ್ನು ತೆರೆಯಲಿದೆ. ಈ ವೇಳೆ ಉದ್ಯೋಗಸ್ಥರಿಗೆ ಬಡ್ತಿ, ವ್ಯಾಪಾರದಲ್ಲಿ ಬಂಪರ್ ಲಾಭ ಸಾಧ್ಯತೆ ಇದೆ. 

ಸೂರ್ಯ ಗೋಚಾರದ ಫಲವಾಗಿ ಸಿಂಹ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಬಾಲ ಹೆಚ್ಚಾಗಲಿದೆ. ಇದರಿಂದ ಸಮಾಜದಲ್ಲಿ ಕೀರ್ತಿ, ಪ್ರಗತಿಯನ್ನು ಕಾಣಬಹುದು. 

ವೃಷಭ ರಾಶಿಯಲ್ಲಿ ಸಂಚರಿಸುವ ಸೂರ್ಯನು ಕನ್ಯಾ ರಾಶಿಯ ಉದ್ಯೋಗಷ್ಟರಿಗೆ ಒಳ್ಳೆಯ ಫಲಗಳನ್ನು ನೀಡಲಿದ್ದಾನೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭವನ್ನು ಕಾಣಬಹುದು. 

ಸೂರ್ಯ ಸಂಕ್ರಮಣವು ಧನು ರಾಶಿಯ ಜನರಿಗೆ ವೃತ್ತಿ ಬದುಕಿನಲ್ಲಿ ಹೊಸ ಎತ್ತರಕ್ಕೆ ಏರುವ ಅವಕಾಶಗಳನ್ನು ಒದಗಿಸಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವನ್ನು ಅನುಭವಿಸುವರು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link