ಪುಷ್ಯ ನಕ್ಷತ್ರದಲ್ಲಿ ಸೂರ್ಯನ ಗೋಚರ, 4 ರಾಶಿಗಳ ಜನರಿಗೆ ಅಷ್ಟಶ್ವರ್ಯ ಪ್ರಾಪ್ತಿ ಯೋಗ!
ಮೇಷ ರಾಶಿ: ನಿಮ್ಮ ರಾಶಿಯ ಪುಷ್ಯ ನಕ್ಷತ್ರದಲ್ಲಿ ಗೋಚರಿಸಿ ಸೂರ್ಯ ಚತುರ್ಥಭಾವದಲ್ಲಿರಲಿದ್ದಾನೆ. ಹೀಗಿರುವಾಗ ನಿಮ್ಮ ಜಾತಕದ ಮೇಲೆ ಸೂರ್ಯನ ಜೊತೆಗೆ ಗುರುವಿನ ವಿಶೇಷ ಕೃಪೆ ಇರಲಿದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸುವುದರ ಜೊತೆಗೆ ಗೃಹ ಕಲಹದಿಂದ ಮುಕ್ತಿ ಸಿಗಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಮತ್ತೆ ಆರಂಭಗೊಳ್ಳಲಿವೆ. ಆಕಸ್ಮಿಕ ಧನಲಾಭದ ಜೊತೆಗೆ ವ್ಯಾಪಾರದಲ್ಲಿಯೂ ಕೂಡ ಸಂಪೂರ್ಣ ಲಾಭ ಸಿಗುವ ಸಾಧ್ಯತೆ ಇದೆ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ.
ಮಿಥುನ ರಾಶಿ: ಪುಷ್ಯ ನಕ್ಷತ್ರದಲ್ಲಿ ಗೋಚರಿಸಲಿರುವ ಸೂರ್ಯ ನಿಮ್ಮೆ ಜಾತಕದ ದ್ವಿತೀಯ ಭಾವದಲ್ಲಿ ವಿರಾಜಮಾನನಾಗಲಿದ್ದಾನೆ. ಹೀಗಿರುವಾಗ ಈ ರಾಶಿಯ ಜಾತಕದವರಿಗೆ ಅವರ ಪರಿಶ್ರಮದ ಸಂಪೂರ್ಣ ಫಲ ಪ್ರಾಪ್ತಿಯಾಗಲಿದೆ. ಇಂತಹ ಸಂದರ್ಭದಲ್ಲಿ ಕುಟುಂಬ ಸದಸ್ಯರ ಸಂಪೂರ್ಣ ಬೆಂಬಲ ನಿಮಗೆ ಪ್ರಾಪ್ತಿಯಾಗಲಿದೆ. ವ್ಯಾಪಾರದಲ್ಲಿ ಆಕಸ್ಮಿಕ ಧನಲಾಭದ ಸಾಧ್ಯತೆ ಇದೆ. ಹೂಡಿಕೆ ಕೂಡ ನಿಮಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಎದುರಾಳಿಗಳ ಜೊತೆಗೆ ತೀವ್ರ ಪ್ರತಿಸ್ಪರ್ಧೆ ಏರ್ಪಡಲಿದೆ. ಆದರೆ ವಿಜಯಲಕ್ಷ್ಮಿ ನಿಮ್ಮ ಕೊರಳಿಗೆ ಮಾಲೆ ಹಾಕುವಳು.
ಕರ್ಕ ರಾಶಿ: ಪುಷ್ಯ ನಕ್ಷತ್ರದಲ್ಲಿ ಗೋಚರಿಸುವ ಸೂರ್ಯ ನಿಮ್ಮ ಗೋಚರ ಜಾತಕದ ಪ್ರಥಮ ಭಾವದಲ್ಲಿ ಸ್ಥಿತನಾಗಲಿದ್ದಾನೆ. ಹೀಗಿರುವಾಗ ಸರ್ಕಾರಿ ನೌಕರಿಯ ಸಿದ್ಧತೆಯಲ್ಲಿ ತೊಡಗಿರುವವರಿಗೆ ಯಶಸ್ಸು ಸಿಗಲಿದೆ. ಸರ್ಕಾರಿ ಹಾಗೂ ರಾಜಕೀಯ ವ್ಯಕ್ತಿಗಳಿಗೆ ಇದರಿಂದ ಲಾಭ ಉಂಟಾಗುವ ಎಲ್ಲಾ ಸಾಧ್ಯತೆಗಳು ಇವೆ. ಆತ್ಮ ವಿಶ್ವಾಸದಲ್ಲಿ ಬದಲಾವಣೆ ಕಂಡುಬರಲಿದೆ. ಇದರಿಂದ ನೀವು ಯಾವುದಾದರೊಂದು ದೊಡ್ಡ ನಿರ್ಧಾರ ಕೈಗೊಳ್ಳುವಿರಿ. ಸಮಾಜದಲ್ಲಿ ಘನತೆ ಗೌರವ ಹೆಚ್ಚಾಗಲಿದೆ.
ಧನು ರಾಶಿ: ಪುಷ್ಯ ನಕ್ಷತ್ರದಲ್ಲಿ ಪ್ರವೇಶಿಸಿರುವ ಸೂರ್ಯ ನಿಮ್ಮ ಗೋಚರ ಜಾತಕದ ಆಷ್ಟಮ ಭಾವದಲ್ಲಿರಲಿದ್ದಾನೆ. ಹೀಗಿರುವಾಗ ಈ ರಾಶಿಯ ಜಾತಕದವರಿಗೆ ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಬಲವಾಗಿರಲಿದೆ. ಅನಾವಶ್ಯಕ ವೆಚ್ಚದ ಮೇಲೂ ಕೂಡ ನಿಯಂತ್ರಣ ಹೇರುವಲ್ಲಿ ಯಶಸ್ವಿಯಾಗುವಿರಿ. ಕುಟುಂಬ ಸದಸ್ಯರ ಜೊತೆಗೆ ಅಥವಾ ಬಂಧು-ಮಿತ್ರರ ಜೊತೆಗೆ ಪ್ರವಾಸದ ಯೋಜನೆಯನ್ನು ನೀವು ಯೋಜಿಸುವ ಸಾಧ್ಯತೆ ಇದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)