Surya Nakshtra Gochar: ಶನಿ ಜಯಂತಿ ಬಳಿಕ ಸೂರ್ಯ ಸಂಚಾರ ಬದಲಾವಣೆ, ಈ ರಾಶಿಯವರಿಗೆ ಧನವೃಷ್ಟಿ

Wed, 05 Jun 2024-6:47 am,

ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಬಣ್ಣಿಸಲ್ಪಡುವ ಸೂರ್ಯ ದೇವನು ವ್ಯಕ್ತಿಯ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮೂಲಕ ಕೀರ್ತಿ, ಯಶಸ್ಸು, ಗೌರವವನ್ನು ನೀಡುತ್ತಾನೆ ಎನ್ನಲಾಗುತ್ತದೆ. 

ಇದೀಗ ಶನಿ ಜಯಂತಿ ಬಳಿಕ ಸೂರ್ಯನು ಜೂನ್ 08ರಂದು ಮಧ್ಯಾಹ್ನ 1:16 ಕ್ಕೆ  ರೋಹಿಣಿ ನಕ್ಷತ್ರವನ್ನು ಬಿಟ್ಟು ಮೃಗಶಿರಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಜೂನ್ 22ರವರೆಗೆ ಇದೇ ನಕ್ಷತ್ರದಲ್ಲಿ ಸಂಚರಿಸುವ ಸೂರ್ಯ ಕೆಲವು ರಾಶಿಯವರ ಅದೃಷ್ಟವನ್ನು ಬೆಳಗಲಿದ್ದಾನೆ. ಆ ಅದೃಷ್ಟದ ರಾಶಿಗಳೆಂದರೆ... 

ಮೇಷ ರಾಶಿಯ ಉದ್ಯೋಗಿಗಳಿಗೆ ಪ್ರಮೋಷನ್ ಸಾಧ್ಯತೆ, ವ್ಯಾಪಾರ ವೃದ್ಧಿ. ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. 

ಮೃಗಶಿರಾ ನಕ್ಷತ್ರದಲ್ಲಿರುವ ಸೂರ್ಯ ಕರ್ಕ ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯುತ್ತಾನೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಬಹುದು. 

ಸೂರ್ಯ ಸಂಚಾರವು ತುಲಾ ರಾಶಿಯ ಜನರ ಬದುಕಿನಲ್ಲಿ ಅದೃಷ್ಟದ ಹೊಸ ಬೆಳಕನ್ನು ನೀಡಲಿದೆ. ಒತ್ತಡ ದೂರವಾಗಿ, ಮಕ್ಕಳಿಂದಲೂ ಶುಭ ಸುದ್ದಿ ನಿರೀಕ್ಷಿಸುವ ಸಾಧ್ಯತೆ ಇದೆ. 

ಮೃಗಶಿರಾ ನಕ್ಷತ್ರದಲ್ಲಿರುವ ಸೂರ್ಯ ವೃಶ್ಚಿಕ ರಾಶಿಯವರಿಗೆ ಶುಭ ಫಲ್ಗಳನ್ನು ನೀಡಲಿದ್ದಾನೆ. ಆದಾಯದ ಹೊಸ ಮೂಲಗಳು ಹೆಚ್ಚಾಗಲಿವೆ. ಉದ್ಯೋಗಸ್ಥರಿಗೆ ಬಡ್ತಿ, ಕುಟುಂಬದಲ್ಲಿ ಸಮೃದ್ಧಿ ಇರುತ್ತದೆ. 

ಸೂರ್ಯ ಸಂಚಾರವು ಕುಂಭ ರಾಶಿಯವರಿಗೆ ವರದಾನವಿದ್ದಂತೆ, ಈ ವೇಳೆ ಹೊಸ ಕೆಲಸ ಪ್ರಾರಂಭಿಸಲು ಸಮಯ ಅದ್ಭುತವಾಗಿದೆ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link