ಇವರೇ ನೋಡಿ ಕನ್ನಡದ ಖ್ಯಾತ ನಟ ಅರುಣ್ ಸಾಗರ್ ಪುತ್ರ: ಈತ ನಟನಲ್ಲ… ಬದಲಾಗಿ ಭಾರತದ ಖ್ಯಾತ ಕ್ರೀಡಾಪಟು

Thu, 20 Jun 2024-4:15 pm,

ಕನ್ನಡ ಖ್ಯಾತ ನಟ, ಕಲಾ ನಿರ್ದೇಶಕ ಮತ್ತು ಹಾಸ್ಯನಟ ಅರುಣ್ ಸಾಗರ್ ಪುತ್ರನ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.

ಅರುಣ್ ಸಾಗರ್ ಮತ್ತು ಮೀರಾ ಅವರ ಪುತ್ರನ ಹೆಸರು ಸೂರ್ಯ ಸಾಗರ್‌. ಮುವಾಯ್‌ ಥಾಯ್‌ ಫೈಟಿಂಗ್‌’ನಲ್ಲಿ ಗೆಲ್ಲುವ ಕನಸು ಕಂಡಿದ್ದ ಸೂರ್ಯಗೆ ಚಿಕ್ಕಂದಿನಲ್ಲಿ ಲರ್ನಿಂಗ್ ಡಿಸೇಬಿಲಿಟಿ ಇತ್ತು.

ಅಂದರೆ ಕಲಿಕೆ ಮೇಲೆ ಎಲ್ಲಾ ಮಕ್ಕಳಂತೆ ಗಮನ ಕೊಡುವುದಕ್ಕೆ ಆಗುತ್ತಿರಲಿಲ್ಲ. ಇದೇ ಕಾರಣದಿಂದ ಸುಮಾರು 13 ಶಾಲೆ ಬದಲಿಸಿದ್ದರಂತೆ ಸೂರ್ಯ. ಅದಾದ ಬಳಿಕ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್‌ ಸ್ಕೂಲಿಂಗ್ ಸೇರಿದರು. ಕೊನೆಯ ಪರೀಕ್ಷೆಯಲ್ಲಿ ಫೇಲಾದರು.

ಎರಡನೇ ಬಾರಿ ಪರೀಕ್ಷೆ ಬರೆಯಲು ಹೋದ ಸೂರ್ಯ, ಪರೀಕ್ಷೆ ಬರೆಯದೆಯೇ ಅಲ್ಲಿಂದ ಹೊರಬಂದರು. ಅಂದಿನಿಂದ ಮತ್ತೆ ಸ್ಕೂಲ್‌ ಮೆಟ್ಟಿಲು ಹತ್ತಲೇ ಇಲ್ಲ.

ಹೀಗಿರುವಾಗ ಸೂರ್ಯ ಒಲವು ತೋರಿದ್ದು ಮುವಾಯ್‌ ಥಾಯ್‌ ಮೇಲೆ. 2015ರಲ್ಲಿ ಮುವಾಯ್‌ ಥಾಯ್‌ ಸ್ಪರ್ಧೆಯಲ್ಲಿ ಭಾಗವಹಿಸಿ ಸೋತರು. ಆದರೆ ಮುನ್ನಡೆಯುವ ಹಂಬಲ ಕುಗ್ಗಿರಲಿಲ್ಲ.

2019ರಲ್ಲಿ ಪಟ್ಟಾಯದಲ್ಲಿ ಮ್ಯಾಕ್ಸ್ ಮುವಾಯ್ ಥಾಯ್ ಸ್ಟೇಡಿಯಂನಲ್ಲಿ ಫೈಟ್‌ ಗೆದ್ದರು. ಬಳಿಕ 2022ರ ಜುಲೈ 15ರಂದು ರಾಜ ದಾಮ್ನರ್ನ್ ಮುವಾಯ್‌ ಥಾಯ್‌ ಸ್ಟೇಡಿಯಂನಲ್ಲಿ ಸತತವಾಗಿ ಹೋರಾಡಿ ಗೆದ್ದರು. ಈ ಬಳಿಕ ಸೂರ್ಯ ಹೆಸರು ಎಲ್ಲೆಡೆ ಪ್ರಸಿದ್ಧಿ ಪಡೆಯಿತು,

ಇನ್ನು ಇದೇ ವರ್ಷ ಜೂನ್ 1ರಂದು ಥಾಯ್‌ಲ್ಯಾಂಡಿನ ಅತಿದೊಡ್ಡ ಮುವಾಯ್‌ ಥಾಯ್‌ ಸ್ಟೇಡಿಯಂ ಲುಂಪಿನಿಯಲ್ಲಿ ಇಂಡಿಯಾದ ಸೂರ್ಯ ಸಾಗರ್‌ ಮತ್ತು ಲಿಥುವೇನಿಯಾದ ದೇವಿದಾಸ್‌ ಡೇನಿಯಲ್‌ ಮಧ್ಯೆ ಫೈಟ್ ನಡೆದಿತ್ತು. ಅದಾಗಲೇ ಸಾಕಷ್ಟು ಹೆಸರು ಗಳಿಸಿದ್ದ ದೇವಿದಾಸ್‌ ವಿರುದ್ಧ ಕನ್ನಡದ ಮಣ್ಣಿನ ಮಗ ಸೂರ್ಯ ಗೆಲುವು ಸಾಧಿಸಿದ್ದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link