ಕೋಟಿ ಕೋಟಿ ಆಸ್ತಿಯ ಒಡತಿ ಸುಶ್ಮಿತಾ ಸೇನ್! ಮಾಸಿಕ ಆದಾಯ ಎಷ್ಟು ಗೊತ್ತಾ?

Tue, 19 Jul 2022-11:21 am,

ಸುಶ್ಮಿತಾ 1996 ರಲ್ಲಿ ಮಹೇಶ್ ಭಟ್ ಅವರ ಥ್ರಿಲ್ಲರ್ ದಸ್ತಕ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ಸಿರ್ಫ್ ತುಮ್, ಬಿವಿ ನಂ.1, ಮೈನೆ ಪ್ಯಾರ್ ಕ್ಯೂ ಕಿಯಾ?, ಮೈ ಹೂ ನಾ ಮತ್ತು ಮುಂತಾದ ಹಲವಾರು ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡರು. ಇತರ ಅನೇಕ ಸೆಲೆಬ್ರಿಟಿಗಳಂತೆ ಸುಶ್ಮಿತಾ ಕೂಡ ಐಷಾರಾಮಿ ಜೀವನಶೈಲಿಯನ್ನು ಗಳಿಸಲು ಸಾಕಷ್ಟು ಶ್ರಮಪಟ್ಟಿದ್ದಾರೆ. 

ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಸುಶ್ಮಿತಾ ಸೇನ್‌ ಅವರ ನಿವ್ವಳ ಆಸ್ತಿ 74 ಕೋಟಿ ರೂ. ಅವರು ವಾರ್ಷಿಕವಾಗಿ ಸುಮಾರು 9 ಕೋಟಿ ರೂ. ಮತ್ತು ತಿಂಗಳಿಗೆ 60 ಲಕ್ಷ ರೂ. ಸಂಪಾದಿಸುತ್ತಾರೆ. 

ಸುಶ್ಮಿತಾ ಸೇನ್‌ ಪ್ರತಿ ಚಲನಚಿತ್ರಕ್ಕೆ 3-4 ಕೋಟಿ ರೂ.ಗಳ ಸಂಭಾವನೆ ಪಡೆಯುತ್ತಾರೆ. ಇದು ಅವರ ಆದಾಯದ ಮುಖ್ಯ ಮೂಲಗಳಲ್ಲಿ ಒಂದಾಗಿದೆ. ಒಂದು ಜಾಹೀರಾತಿನಿಂದ ಸುಮಾರು 1.5 ಕೋಟಿ ಅಥವಾ ಅದಕ್ಕಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ.

ಬಾಲಿವುಡ್‌ ನಟಿ ಸುಶ್ಮಿತಾ ಸೇನ್ ಅವರ ಬಳಿ BMW 7 ಸಿರೀಸ್ 730Ld ಕಾರಿದೆ. ಇದರ ಬೆಲೆ 1.42 ಕೋಟಿ ರೂ. ಆಗಿದೆ. ಉಳಿದಂತೆ BMW X6 ಅನ್ನು ಹೊಂದಿದ್ದಾರೆ, ಅದರ ಬೆಲೆ 1 ಕೋಟಿ ರೂ. ಇದಲ್ಲದೆ, Audi Q7 ಬೆಲೆ ಸುಮಾರು 89.90 ಲಕ್ಷ ಮತ್ತು ಲೆಕ್ಸಸ್ LX 470 35 ಲಕ್ಷ ಬೆಲೆಯ ಕಾರುಗಳನ್ನು ಹೊಂದಿದ್ದಾರಂತೆ. 

ಇದಲ್ಲದೇ ವರದಿಯ ಪ್ರಕಾರ, ಸುಶ್ಮಿತಾ ಸೇನ್‌ 2005 ರಲ್ಲಿ ಪ್ರಾರಂಭಿಸಿದ Tantra Entertainmentನ ಮಾಲೀಕರಾಗಿದ್ದಾರೆ. ಮುಂಬೈನ ವರ್ಸೊವಾ ಪ್ರದೇಶದಲ್ಲಿ ಅತಿರಂಜಿತ ಮತ್ತು ಬೆಲೆಬಾಳುವ ಮನೆಯನ್ನು ಹೊಂದಿದ್ದು, ಅಲ್ಲಿ ಅವರು ತಮ್ಮ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link