ಚಿನ್ನದಿಂದ ತಯಾರಾದ ವಿಶ್ವದ ಮೊಟ್ಟಮೊದಲ Gold Hotel, ಒಂದು ರಾತ್ರಿ ತಂಗಲು ಎಷ್ಟು ಶುಲ್ಕ ನೀಡಬೇಕು ಗೊತ್ತಾ?

Sun, 05 Jul 2020-1:56 pm,

ರಾಯಿಟರ್ಸ್ ನಲ್ಲಿ ಪ್ರಕಟಗೊಂಡ ಮಾಹಿತಿ ಪ್ರಕಾರ ಈ ಹೋಟೆಲ್ ನಲ್ಲಿ ತಂಗಲು ನೀವು ಕನಿಷ್ಠ ಅಂದರೆ ರೂ.250 ಡಾಲರ್ ವೆಚ್ಚ ಮಾಡಬೇಕು. ಈ ಹೋಟೆಲ್ ನಲ್ಲಿರುವ ಅಪಾರ್ಟ್ಮೆಂಟ್ ಅನ್ನು ಕೂಡ ನೀವು ಬಾಡಿಗೆಗೆ ಪಡೆಯಬಹುದು. ಇದಕ್ಕಾಗಿ ಕನಿಷ್ಠ ಅಂದರೆ 6500 ಡಾಲರ್ ಪ್ರತಿ ಚದರ ಮೀಟರ್ ಹಣ ನೀಡಬೇಕು.

The Dolce Hanoi Golden Lake ಹೋಟೆಲ್ ನಲ್ಲಿ ಗೋಲ್ಡ್ ಪ್ಲೇಟೆಡ್ ಇನ್ಫಿನಿಟಿ ಸ್ವಿಮ್ಮಿಂಗ್ ಪೂಲ್, ಗೋಲ್ಡ್ ಲಾಬಿ, ಚಿನ್ನದ ಟೈಲ್ಸ್ ಗಳಿಂದ ನಿರ್ಮಾಣಗೊಂಡ ಮೇಲ್ಛಾವಣಿ ಇದೆ. ಅಷ್ಟೇ ಅಲ್ಲ ಇದರ ಲಿಫ್ಟ್ ಅನ್ನು ಕೂಡ ಸಂಪೂರ್ಣ ಚಿನ್ನದಿಂದ ತಯಾರಿಸಲಾಗಿದೆ.

ಈ ಹೋಟೆಲ್ ನ ಬಾತ್ ರೂಮ್ ನಲ್ಲಿಯೂ ಕೂಡ ಅಲ್ಲ ಪರಿಕ್ಕರಗಳನ್ನು ಚಿನ್ನದಿಂದ ತಯಾರಿಸಲಾಗಿದೆ. ಇದರಲ್ಲಿ ಗೋಲ್ಡ್ ಪ್ಲೇಟೆಡ್ ಬಾಥ್ ಟಬ್, ಸಿಂಕ್ಸ್, ಟಾಯ್ಲೆಟ್ ಗಳು ಶಾಮೀಲಾಗಿವೆ. ಇದಲ್ಲದೆ ಈ ಹೋಟೆಲ್ ನ ಫರ್ನಿಚರ್ ಹಾಗೂ ಅಪ್ಪೈನ್ಸೆಸ್ ಗಳನ್ನು ಕೂಡ ಚಿನ್ನದಿಂದ ತಯಾರಿಸಲಾಗಿದೆ.  

ರಾಯಿಟರ್ಸ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಈ ಯುನೀಕ್ ಹೋಟೆಲ್ ನಿರ್ಮಿಸಲು 11 ವರ್ಷಗಳ ಸಮಯಾವಕಾಶ ತೆಗೆದುಕೊಂಡಿದೆ. ಕಳೆದ ಗುರುವಾರ ಈ ಹೋಟೆಲ್ ಅನ್ನು ಉದ್ಘಾಟಿಸಲಾಗಿದ್ದು, ಇದರಲ್ಲಿ ಒಟ್ಟು 400 ಕೊಠಡಿಗಳಿವೆ.

24 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿರುವ ವಿಶ್ವದ ಮೊಟ್ಟಮೊದಲ ಹೋಟೆಲ್ ಇದಾಗಿದೆ. ಚಿನ್ನದಿಂಗ ತಯಾರಿಸಲಾಗಿರುವ ಈ ಹೋಟೆಲ್ ನ ಒಳಭಾಗ ಎಷ್ಟೊಂದು ಸುಂದರವಾಗಿದೆಯೋ ಅಷ್ಟೇ ಇದರ ಹೊರಭಾಗವೂ ಕೂಡ ಆಕರ್ಷಕವಾಗಿದೆ. ಈ ಹೋಟೆಲ್ ನಲ್ಲಿ ಒಟ್ಟು 25 ಮಹಡಿಗಳಿವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link