Tamannaah Bhatia : ಮಿಲ್ಕಿ ಬ್ಯೂಟಿ ತಮನ್ನಾ ಧರಿಸಿದ ಈ ಬಟ್ಟೆ ರೇಟ್ ಕೇಳಿದ್ರೆ ದಂಗಾಗ್ತೀರಾ!
ಹುಡುಗರ ಹಾಟ್ ಫೆವರಿಟ್ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ. ಸೌಂದರ್ಯದಿಂದ ಮಾತ್ರವಲ್ಲದೇ ತಮ್ಮ ಸ್ಟೈಲ್‌ನಿಂದಲೂ ತಮನ್ನಾ ಎಲ್ಲರ ಗಮನಸೆಳೆಯುತ್ತಾರೆ.
ನೀಳ ಕಾಯದ ಸುಂದರ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮನ್ನಾ ಹಂಚಿಕೊಳ್ಳುತ್ತಾರೆ.
ಇದೀಗ ತಮನ್ನಾ ಅವರ ಹೊಸ ನೀಲಿ ಬಣ್ಣದ ಉಡುಪು ನೋಡುಗರ ಮನಸೆಳೆಯುತ್ತಿದೆ. ಕೈಯಿಂದ ಹೆಣೆದ ತಿಳಿ ನೀಲಿ ಬಣ್ಣದ ಸ್ಟೈಲಿಶ್ ದಿರಿಸಿನಲ್ಲಿ ತಮನ್ನಾ ಬಲು ಮೋಹಕವಾಗಿ ಕಾಣುತ್ತಿದ್ದಾರೆ.
ಇದೀಗ ಎಲ್ಲರಿಗೂ ಈ ಬಟ್ಟೆಯ ಬೆಲೆ ತಿಳಿಯುವ ಕುತೂಹಲ ಹೆಚ್ಚಾಗಿದೆ.
ತಮನ್ನಾ ಧರಿಸಿರುವ ಬಟ್ಟೆಯ ಬ್ರಾಂಡ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಬಟ್ಟೆಯ ಬೆಲೆ ಬರೋಬ್ಬರಿ 45,700 ರೂಗಳಂತೆ.