ಮಿಲ್ಕಿ ಬ್ಯೂಟಿ ತಮನ್ನಾ ಸೌಂದರ್ಯ ನೋಡಿ ಮಿಡಿಯಿತು ಮನ ತಂನಂ.. ತಂನಂ..!

Sat, 01 Oct 2022-7:40 pm,

ಬಾಲಿವುಡ್‌, ಹಾಲಿವುಡ್‌, ಕಾಲಿವುಡ್‌ನಲ್ಲಿ ತಮ್ಮ ಸೌಂದರ್ಯ, ನಟನೆಯಿಂದಲೇ ಮಿಲ್ಕಿ ಬ್ಯೂಟಿ ಅಭಿಮಾನಿಗಳ ಮನದರಸಿಯಾಗಿದ್ದಾರೆ ತಮನ್ನಾ ಭಾಟಿಯಾ. 

ಕನ್ನಡದ ಕೆಜಿಎಫ್‌ 2ನಲ್ಲಿ ಸೊಂಟ ಬಳುಕಿಸುವ ಮೂಲಕ ಕನ್ನಡಿಗರಿಗೂ ತಮನ್ನಾ ತುಂಬಾ ಹತ್ತಿರವಾದರು. ಅಲ್ಲದೆ, ಬಾಹುಬಲಿಯಲ್ಲಿ ಅವಂತಿಕಾ ಪಾತ್ರದ ಮೂಲಕ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದ್ದರು. 

ಇದೀಗ ತಮನ್ನಾ ಅವರ ಹೊಸ ಉಡುಪು ನೋಡುಗರ ಮನಸೆಳೆಯುತ್ತಿದೆ. ಗೋಲ್ಡನ್‌ ಕಲರ್‌ ಹಾಗೂ ಬೂದು ಬಣ್ಣದ ಸ್ಟೈಲಿಶ್‌ ಡ್ರೇಸ್‌ನಲ್ಲಿ ತಮನ್ನಾ ಬಲು ಮೋಹಕವಾಗಿ ಕಂಗೊಳಿಸುತ್ತಿದ್ದಾರೆ.

ತಮನ್ನಾ ಭಾರತೀಯ ಚಲನಚಿತ್ರದಲ್ಲಿ ಮುಖ್ಯವಾಗಿ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. 

ಸದ್ಯ ತಮನ್ನಾ ಅಭಿನಯದ ಬಬ್ಲಿ ಬೌನ್ಸರ್‌ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಅಲ್ಲದೆ, ಮೆಗಾಸ್ಟಾರ್ ಚಿರಂಜೀವಿ ಅವರ ಮುಂದಿನ ಸಿನಿಮಾ ʼಭೋಲಾ ಶಂಕರ್ʼದಲ್ಲಿ ತಮನ್ನಾ ನಟಿಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link