Tata Punch EV: ದೇಶದಲ್ಲಿ ಅತಿಹೆಚ್ಚು ಮಾರಾಟವಾಗುತ್ತಿರುವ 26KM ಮೈಲೇಜ್ ನೀಡುವ ಟಾಟಾದ ಕಾರು!

Sun, 07 Jul 2024-11:03 am,

ದೇಶೀಯವಾಗಿ ಟಾಟಾ ಪಂಚ್ ಮೈಕ್ರೋ-SUV ಇಂಧನ ಹಾಗೂ ವಿದ್ಯುತ್ ಚಾಲಿತ ಆಯ್ಕೆಯಲ್ಲಿ ಖರೀದಿಗೆ ಸಿಗುತ್ತದೆ. ಇಂಧನ ಚಾಲಿತ ಪಂಚ್ ಕಾರು 6.13 ಲಕ್ಷದಿಂದ 10.20 ಲಕ್ಷ ರೂ. ಎಕ್ಸ್ ಶೋರೂಂ ಬೆಲೆ ಹೊಂದಿದೆ. ಪ್ಯೂರ್ & ಅಡ್ವೆಂಚರ್ ಸೇರಿದಂತೆ ವಿವಿಧ ರೂಪಾಂತರ (ವೇರಿಯೆಂಟ್)ಗಳ ಆಯ್ಕೆಗಳಿವೆ. ಅಟಾಮಿಕ್ ಆರೆಂಜ್, ಟ್ರಾಪಿಕಲ್ ಮಿಸ್ಟ್, ಡೇಟೋನಾ ಗ್ರೇ ಒಳಗೊಂಡಂತೆ ವಿವಿಧ ಬಣ್ಣಗಳಲ್ಲಿ ಈ ಕಾರು ಲಭ್ಯವಿದೆ.

ಈ ಪಂಚ್ SUVಯು 1.2-ಲೀಟರ್ ಸಾಮರ್ಥ್ಯದ ಪೆಟ್ರೋಲ್ & CNG ಎಂಜಿನ್‌ ಒಳಗೊಂಡಿದ್ದು, ರೂಪಾಂತರಗಳಿಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಅಥವಾ 5-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ ಹೊಂದಿದೆ. ಪೆಟ್ರೋಲ್ ಚಾಲಿತ ಮಾದರಿಗಳು 18.8 ರಿಂದ 20.09 KMPL, CNG ಚಾಲಿತ ರೂಪಾಂತರಗಳು 26.99 KM/KG ಮೈಲೇಜ್ ನೀಡುತ್ತವೆ.

ನೂತನ ಟಾಟಾ ಪಂಚ್ ಕಾರಿನಲ್ಲಿ 5 ಮಂದಿ ಆರಾಮವಾಗಿ ದೂರದ ಊರುಗಳಿಗೆ ಪ್ರಯಾಣಿಸಬಹುದು. ಹೆಚ್ಚಿನ ಲಗೇಜ್ ಸಾಗಿಸಲು ದೊಡ್ಡದಾದ ಬೂಟ್ ಸ್ಪೇಸ್ ಸಹ ಹೊಂದಿದೆ. ಈ ಕಾರು 7-ಇಂಚಿನ ಟಚ್‌ಸ್ಕ್ರೀನ್ ಡಿಸ್ಪ್ಲೇ, ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಯ ದೃಷ್ಟಿಯಿಂದ ಡುಯಲ್ ಫ್ರಂಟ್ ಏರ್‌ಬ್ಯಾಗ್, TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಮತ್ತು ರೇರ್-ವ್ಯೂ ಕ್ಯಾಮೆರಾವನ್ನು ಸಹ ಹೊಂದಿದೆ.

ಟಾಟಾ ಪಂಚ್ ಇವಿ 10.99 ಲಕ್ಷದಿಂದ 15.49 ಲಕ್ಷ ರೂ. (ಎಕ್ಸ್ ಶೋರೂಂ) ಬೆಲೆ ಇದೆ. ಸ್ಮಾರ್ಟ್, ಸ್ಮಾರ್ಟ್ ಪ್ಲಸ್, ಅಡ್ವೆಂಚರ್, ಎಂಪವರ್ಡ್ ಸೇರಿದಂತೆ ಹಲವು ರೂಪಾಂತರಗಳಲ್ಲಿ ಇದು ದೊರೆಯುತ್ತದೆ. ಸ್ಮಾರ್ಟ್ ಸಿಂಗಲ್ ಟೋನ್, ಫಿಯರ್‌ಲೆಸ್ ರೆಡ್ ಡುಯಲ್ ಟೋನ್, ಡೇಟೋನಾ ಗ್ರೇ ಡುಯಲ್ ಟೋನ್ ಒಳಗೊಂಡಂತೆ 1 ಮೊನೊಟೋನ್ ಹಾಗೂ 5 ಡುಯಲ್ ಟೋನ್ ಬಣ್ಣಗಳನ್ನು ಇದು ಹೊಂದಿದೆ.

ನೂತನ ಪಂಚ್ ಇವಿ 25 ಮತ್ತು 35 KWH ಬ್ಯಾಟರಿ ಆಯ್ಕೆಯನ್ನು ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ ಕ್ರಮವಾಗಿ 315 ರಿಂದ 421KM ಓಡುತ್ತದೆ. ಇದರ ಬ್ಯಾಟರಿ ಪ್ಯಾಕ್ ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಶೇ.10-80% ಚಾರ್ಜ್ ಆಗುವುದಕ್ಕೆ 56 ನಿಮಿಷ ತೆಗೆದುಕೊಳ್ಳುತ್ತದೆ. ಈ ಎಲೆಕ್ಟ್ರಿಕ್ ಕಾರಿನಲ್ಲಿ 5 ಜನರು ಓಡಾಡಬಹುದು.  

ಟಾಟಾ ಪಂಚ್ ಇವಿ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ ಪ್ಲೇ, ಫುಲ್-ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ, ಸನ್‌ರೂಫ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ 6 ಏರ್‌ಬ್ಯಾಗ್‌, ESP (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್) ಅನ್ನು ಸಹ ಒಳಗೊಂಡಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link