ಟೀಂ ಇಂಡಿಯಾದ ಮಿ.360 ಸೂರ್ಯಕುಮಾರ್ ಯಾದವ್ ಪತ್ನಿ ಯಾರು ಗೊತ್ತಾ? ಈಕೆ ಕರ್ನಾಟಕದ ಖ್ಯಾತ ಡ್ಯಾನ್ಸರ್…
ಭಾರತದ ಪವರ್ ಫುಲ್ ಕ್ರಿಕೆಟಿಗ ಸೂರ್ಯಕುಮಾರ್ ಯಾರಿಗೆ ತಾನೆ ಗೊತ್ತಿಲ್ಲ? ಇವರು ಮೈದಾನಕ್ಕೆ ಎಂಟ್ರಿ ಕೊಟ್ಟರೆ ಸಾಕು ಸಿಕ್ಸರ್, ಬೌಂಡರಿಗಳದ್ದೇ ಕಾರುಬಾರು.
ಇನ್ನು ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ಸೂರ್ಯ ಅವರ ಪತ್ನಿ ಕರ್ನಾಟಕದ ಕರಾವಳಿ ಜಿಲ್ಲೆಯವರು. ಇವರು ಖ್ಯಾತ ನೃತ್ಯಗಾರ್ತಿಯೂ ಹೌದು. ಅಂದಹಾಗೆ ಇವರಿಬ್ಬರ ಪ್ರೇಮ ಚಿಗುರೊಡೆಯಲು ಈ ಡ್ಯಾನ್ಸ್ ಕಾರಣ.
ಸೂರ್ಯಕುಮಾರ್ ಪತ್ನಿಯ ಹೆಸರು ದೇವಿಶಾ ಶೆಟ್ಟಿ. ಇವರು ಜುಲೈ 7, 2016 ರಂದು ವಿವಾಹವಾದರು.
ಮುಂಬೈನಲ್ಲಿ ಬೆಳದರೂ ಸಹ, ದೇವಿಶಾ ಶೆಟ್ಟಿ ಪೋಷಕರು ಕರ್ನಾಟಕ ಮೂಲದವರು, ಇನ್ನು ಇವರು ಆಗಾಗ್ಗೆ ಉಡುಪಿ-ಮಂಗಳೂರು ಭಾಗಕ್ಕೆ ಭೇಟಿ ನೀಡುತ್ತಾ, ತಮ್ಮ ಆರಾಧ್ಯ ದೇವರಿಗೆ ಸೇವೆ ಸಲ್ಲಿಸುತ್ತಾರೆ.
ಇನ್ನು ದೇವಿಶಾ ನೃತ್ಯಗಾರ್ತಿ ಮತ್ತು ನೃತ್ಯ ತರಬೇತುದಾರರೂ ಹೌದು. ಇನ್ನು ಈ ಜೋಡಿಯ ಪ್ರೇಮಕಥೆ ಇಂದು ನಿನ್ನೆಯದಲ್ಲ. ಕಾಲೇಜು ದಿನಗಳಲ್ಲೇ ಚಿಗುರಿದ ಪ್ರೀತಿ ಇದಾಗಿದೆ.