ಕ್ರಿಕೆಟ್ ಇತಿಹಾಸದಲ್ಲಿ ಟೂರ್ನಿಯುದ್ದಕ್ಕೂ ಒಂದೇ ಒಂದು ಪಂದ್ಯ ಸೋಲದೆ ವಿಶ್ವಕಪ್ ಗೆದ್ದ ಏಕೈಕ ತಂಡ ಯಾವುದು?
ಕ್ರಿಕೆಟ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಜಗತ್ತಿನಲ್ಲಿ ಅತಿ ಹೆಚ್ಚು ಜನರು ಇಷ್ಟಪಟ್ಟು ವೀಕ್ಷಿಸುವ ಮತ್ತು ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಗಳಲ್ಲಿ ಕ್ರಿಕೆಟ್ ಎರಡನೇ ಸ್ಥಾನದಲ್ಲಿದೆ. ಅದರಲ್ಲೂ ಭಾರತದಲ್ಲಿ ಕ್ರಿಕೆಟ್ ಕೇವಲ ಕ್ರೀಡೆಯಾಗಿ ಉಳಿದಿಲ್ಲ. ಬದಲಾಗಿ ಅದೆಷ್ಟೋ ಜನರ ಭಾವನೆಯಾಗಿದೆ.
ಇನ್ನು ಈ ವರದಿಯಲ್ಲಿ, ಕ್ರಿಕೆಟ್ ಇತಿಹಾಸದಲ್ಲಿ ಟೂರ್ನಿಯುದ್ದಕ್ಕೂ ಒಂದೇ ಒಂದು ಪಂದ್ಯ ಸೋಲದೆ ಟಿ 20 ವಿಶ್ವಕಪ್ ಗೆದ್ದ ಏಕೈಕ ತಂಡ ಯಾವುದು ಎಂಬುದರ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಬಹುತೇಕ ಮಂದಿಗೆ ಈ ಪ್ರಶ್ನೆಗೆ ಈಗಾಗಲೇ ಉತ್ತರ ತಿಳಿದಿರಬಹುದು. ಇತ್ತೀಚೆಗೆಯಷ್ಟೇ ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದು ದಶಕಗಳ ಟ್ರೋಫಿ ಬರವನ್ನು ನೀಗಿತ್ತು. ಈ ಸಂದರ್ಭದಲ್ಲಿ ಭಾರತ ಕೇವಲ ವಿಶ್ವಕಪ್ ಗೆದ್ದಿರಲಿಲ್ಲ, ಕ್ರಿಕೆಟ್ ಜಗತ್ತಲ್ಲಿ ವಿಶೇಷ ದಾಖಲೆಯೊಂದನ್ನು ಸಹ ಬರೆದಿತ್ತು. ಅದೇ ಟೂರ್ನಿಯುದ್ದಕ್ಕೂ ಒಂದೇ ಒಂದು ಪಂದ್ಯ ಸೋಲದೆ ಟಿ 20 ವಿಶ್ವಕಪ್ ಗೆದ್ದಿರುವುದು.
2024 ರ T20 ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸಿತ್ತು. ಒಂದು ಕ್ಷಣದವರೆಗೆ ಸೋಲು ಎದುರಾಯಿತು ಎನ್ನುವಷ್ಟರಲ್ಲಿ ಸೂರ್ಯಕುಮಾರ್ ಯಾದವ್ ಹಿಡಿದ ಅದೊಂದು ಕ್ಯಾಚ್ ಇಡೀ ಪಂದ್ಯಕ್ಕೆ ತಿರುವು ನೀಡಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧ 2024ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಟೀಂ ಇಂಡಿಯಾ ಗೆದ್ದ ತಕ್ಷಣ ಇಡೀ ದೇಶ ಸಂಭ್ರಮದ ವಾತಾವರಣದಲ್ಲಿ ಮುಳುಗಿತ್ತು. ಇನ್ನು ಟ್ರೋಫಿ ಗೆದ್ದ ಭಾರತ ತಂಡ ಅಜೇಯರಾಗಿ ಉಳಿದುಕೊಂಡೇ ವಿಶೇಷ ಸಾಧನೆ ಬರೆದಿತ್ತು.
ಟೀಂ ಇಂಡಿಯಾ ಹೊರತಾಗಿ ಟಿ20 ವಿಶ್ವಕಪ್‌ನಲ್ಲಿ ಇಂತಹ ಸಾಧನೆ ಮಾಡಿದ ಮತ್ತೊಂದು ತಂಡವಿಲ್ಲ.ಆದರೆ ಏಕದಿನದಲ್ಲಿ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಈ ಸಾಧನೆ ಮಾಡಿದೆ.