ಪ್ರೇಯಸಿಯ ಮರಣ… ಬಳಿಕ ನಟಿಯ ಜೊತೆ ಡೇಟ್! ಕೊನೆಗೆ ಕಾಲೇಜ್ ವಿದ್ಯಾರ್ಥಿನಿ ಜೊತೆ ರಹಸ್ಯ ಮದುವೆಯಾದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನೀತ!

Mon, 25 Mar 2024-6:50 pm,

ಎಲ್ಲಾ ಪ್ರೇಮ ಕಥೆಗಳು ಯಶಸ್ವಿಯಾಗುವುದಿಲ್ಲ, ಕೆಲವೊಮ್ಮೆ ಅದೃಷ್ಟ ಪ್ರೇಮದ ಕೈಹಿಡಿಯುವುದಿಲ್ಲ ಎಂಬ ಮಾತಿದೆ. ಅಂತೆಯೇ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಜೀವನದಲ್ಲಿ ಒಂದು ದುರಂತ ಪ್ರೇಮಕಥೆ ಇದೆ.

ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದ್ದ ಸಮಯದಲ್ಲಿ ಧೋನಿಗೆ ಸರಿಪಡಿಸಲಾಗದ ಪೆಟ್ಟು ಬಿದ್ದಿತ್ತು. ಆ ನೋವಲ್ಲಿ ಸಿಕ್ಕಿಹಾಕಿಕೊಂಡ ಅವರು ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದರು. ಆದರೆ ಬದುಕಿನ ನೈಜತೆ ಅರಿತ ಅವರು, ಮತ್ತೆ ತಮ್ಮ ಆಟದತ್ತ ಗಮನ ಹರಿಸಿದರು. ಬಳಿಕ ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾದರು.

ಧೋನಿ ಪತ್ನಿ ಸಾಕ್ಷಿ. ಇವರ ಬಗ್ಗೆ ಗೊತ್ತಿರಲೇಬೇಕು…  ಸಾಕ್ಷಿ ಮತ್ತು ಧೋನಿ ಪ್ರೀತಿಸಿಯೇ ಮದುವೆಯಾದವರು. ಆದರೆ ಸಾಕ್ಷಿಗಿಂತ ಮೊದಲು ಧೋನಿ ಬೇರೊಬ್ಬ ಹುಡುಗಿಯ ಜೊತೆ ಪ್ರೀತಿ ಹಂಚಿಕೊಂಡಿದ್ದರು. ಆ ಪ್ರೇಮಕಥೆಯಿಂದ ಹೊರಬರಲು ಅವರು ಏಳು ವರ್ಷಗಳನ್ನು ತೆಗೆದುಕೊಂಡರು ಎಂದರೆ ನಂಬಲು ಅಸಾಧ್ಯ.

ಧೋನಿಯ ಮೊದಲ ಗೆಳತಿಯ ಹೆಸರು ಪ್ರಿಯಾಂಕಾ ಝಾ. ಎಂಎಸ್ ಧೋನಿ ಬಯೋಪಿಕ್ ಸಿನಿಮಾದಲ್ಲಿ ಈ ವಿಷಯ ಬಹಿರಂಗವಾಗಿದೆ. 2002-2003ರ ನಡುವೆ ಧೋನಿಯ ಲವ್ ಸ್ಟೋರಿ ಶುರುವಾಗಿತ್ತು. ಆಗಷ್ಟೇ ಭಾರತ ತಂಡದಲ್ಲಿ ಸ್ಥಾನ ಪಡೆಯುವ ಪ್ರಯತ್ನಗಳು ನಡೆಯುತ್ತಿತ್ತು.

2004ರಲ್ಲಿ ಭಾರತ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ವಿಕೆಟ್ ಕೀಪರ್ ಆಗಿ ಧೋನಿ ತಮ್ಮ ಕೈಚಳಕ ತೋರಿದ್ದರು. 7 ಕ್ಯಾಚ್‌ಗಳು ಮತ್ತು 4 ಸ್ಟಂಪಿಂಗ್‌ಗಳೊಂದಿಗೆ ಉತ್ತಮ ಸ್ಕೋರ್ ಮಾಡಿದ್ದರು. ಅಷ್ಟೇ ಅಲ್ಲದೆ, ಧೋನಿ ಎಲ್ಲರ ಗಮನ ಸೆಳೆದು ಭಾರತ ತಂಡವನ್ನು ಸೇರಿಕೊಂಡರು.

ಅದೇ ಸಂದರ್ಭದಲ್ಲಿ ಧೋನಿ ಪ್ರಿಯಾಂಕಾ ಝಾ ಎಂಬ ಹುಡುಗಿಯನ್ನು ಪ್ರೀತಿಸುತ್ತಿದ್ದರು. ಆ ಹುಡುಗಿ ಧೋನಿಗೆ ಉತ್ತಮ ಬೆಂಬಲ ನೀಡಿದ್ದರು ಸಹ. ಅಷ್ಟೇ ಅಲ್ಲದೆ, ಧೋನಿ ಪ್ರಿಯಾಂಕಾ ಜೊತೆ ಮದುವೆಯಾಗಲು ನಿರ್ಧರಿಸುತ್ತಾರೆ. ಆದರೆ ವಿಧಿಯ ವಿಚಿತ್ರ ನಾಟಕದಲ್ಲಿ ಪ್ರಿಯಾಂಕಾ ಝಾ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಆಗ ಧೋನಿ ವಿದೇಶದಲ್ಲಿ ಆಡುತ್ತಿದ್ದರು. ಭಾರತಕ್ಕೆ ಬಂದಾಗಲೇ ಧೋನಿಗೆ ಈ ಸುದ್ದಿ ತಿಳಿದಿತ್ತು.

ಒಂದೆಡೆ, ತಾನು ಬಯಸಿದ ಕ್ರಿಕೆಟ್ ವೃತ್ತಿಜೀವನವನ್ನು ಪಡೆಯುವ ಮತ್ತು ಅದರಲ್ಲಿ ಯಶಸ್ವಿಯಾಗುವ ಧೋನಿ ಕನಸು ಚಿಗುರೊಡೆಯುವ ಸಮಯ. ಮತ್ತೊಂದೆಡೆ ತಾನು ಪ್ರೀತಿಸಿದ ಹುಡುಗಿಯ ಸಾವು. ಈ ಎರಡೂ ಪರಿಸ್ಥಿತಿಗಳು ಧೋನಿಗೆ ತುಂಬಾ ನೋವುಂಟು ಮಾಡಿದವು. ಇದರಿಂದ ಚೇತರಿಸಿಕೊಳ್ಳಲು ಧೋನಿ ಸಾಕಷ್ಟು ಸಮಯ ತೆಗೆದುಕೊಂಡರು.

ಕೊನೆಗೆ ಆಟದತ್ತ ಗಮನ ಹರಿಸಿದ ಅವರು, ದೇಶಕ್ಕಾಗಿ ಆಡಿದರು ಜೊತೆಗೆ ಅನೇಕ ಯಶಸ್ಸನ್ನು ಸಾಧಿಸಿದರು. ಈ ಸಂದರ್ಭದಲ್ಲಿ ಕೆಲ ನಟಿಯರ ಜೊತೆ ಧೋನಿ ಡೇಟಿಂಗ್ ಮಾಡುತ್ತಿದ್ದರು ಎಂಬ ಸುದ್ದಿಯೂ ಹರಿದಾಡಿತ್ತು. ಅದರಲ್ಲಿ ಒಬ್ಬರು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ.

ಆದರೆ ಕೊನೆಗೆ ಹೋಟೆಲ್ ಮ್ಯಾನೆಜ್ಮೆಂಟ್ ಕಲಿಯುತ್ತಿದ್ದ ಸಾಕ್ಷಿಯನ್ನ ಪ್ರೀತಿಸಿ ಧೋನಿ ಮದುವೆಯಾದರು. ಇದೀಗ ಸುಖೀ ಸಂಸಾರ ನಡೆಸುತ್ತಿರುವ ಮಾಹಿ, ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ ಚೆನ್ನೈ ಪರ ಆಡುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link