ಗರ್ಲ್’ಫ್ರೆಂಡ್ ಆತ್ಮಹತ್ಯೆ ನೋವು ಕಾಡುತ್ತಿದ್ದರೂ ದೇಶಕ್ಕಾಗಿ ಆಡುತ್ತಾ ಮಿಂಚುತ್ತಿದ್ದಾನೆ ಟೀಂ ಇಂಡಿಯಾದ ಈ ಕ್ರಿಕೆಟಿಗ! ಆತ ಬೇರಾರು ಅಲ್ಲ…

Tue, 09 Jul 2024-7:23 pm,

ಇತ್ತೀಚೆಗೆ ಐಪಿಎಲ್’ನಲ್ಲಿ ಅಬ್ಬರಿಸಿದ್ದ ಅಭಿಷೇಕ್ ಶರ್ಮಾ, ಆ ಬಳಿಕ ಟೀಂ ಇಂಡಿಯಾಗೆ ಎಂಟ್ರಿ ಪಡೆದಿದ್ದರು, ಅಷ್ಟೇ ಅಲ್ಲದೆ, ಜಿಂಬಾಬ್ವೆ ವಿರುದ್ಧ ನಡೆದ 2 ನೇ ಟಿ20 ಪಂದ್ಯದಲ್ಲಿ ಚೊಚ್ಚಲ ಶತಕ ಬಾರಿಸಿ ದಾಖಲೆ ಬರೆದಿದ್ದರು.

ಐಪಿಎಲ್ ಮತ್ತು ದೇಶೀಯ ಕ್ರಿಕೆಟ್‌’ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅಭಿಷೇಕ್ ಶರ್ಮಾಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ. ಆದರೆ ಈ ಆಲ್‌ರೌಂಡರ್‌ ಪ್ರಯಾಣ ಸುಲಭವಾಗಿರಲಿಲ್ಲ. ಅಭಿಷೇಕ್ ಶರ್ಮಾ ಅವರ ವೈಯಕ್ತಿಕ ಜೀವನವು ಅನೇಕ ಏರಿಳಿತಗಳಿಂದ ಕೂಡಿದೆ.

ಈ ವರ್ಷದ ಫೆಬ್ರವರಿಯಲ್ಲಿ ಅಭಿಷೇಕ್ ಶರ್ಮಾ ಗೆಳತಿ ತಾನ್ಯಾ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ನಂತರ ಅಭಿಷೇಕ್ ಶರ್ಮಾ ಸಂಕಷ್ಟ ಹೆಚ್ಚಾಗಿದ್ದಲ್ಲದೆ, ಈ ಆಟಗಾರನ ಕ್ರಿಕೆಟ್ ಜೀವನ ಅಪಾಯವನ್ನೇ ಎದುರಿಸಿತ್ತು.

ಆದರೆ ಈ ಆಟಗಾರ ಛಲ ಬಿಡದೆ, ಐಪಿಎಲ್ 2024ರಲ್ಲಿ ಸಾಕಷ್ಟು ಸಾಧನೆ ಮಾಡಿ ಕಡೆಗೆ ಟೀಂ ಇಂಡಿಯಾಗೆ ಎಂಟ್ರಿ ಪಡೆದರು.

ಜಿಂಬಾಬ್ವೆ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಅಭಿಷೇಕ್ ಶರ್ಮಾ 47 ಎಸೆತಗಳಲ್ಲಿ 100 ರನ್ ಸಿಡಿಸಿದ್ದರು. ಈ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಮತ್ತು 8 ಸಿಕ್ಸರ್‌ ಕೂಡ ಸೇರಿತ್ತು. ಜೊತೆಗೆ ಈ ಅದ್ಭುತ ಇನ್ನಿಂಗ್ಸ್‌’ಗಾಗಿ ಅಭಿಷೇಕ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

ಅಭಿಷೇಕ್ ಶರ್ಮಾ ಐಪಿಎಲ್‌’ನಲ್ಲಿ ಸನ್‌’ರೈಸರ್ಸ್ ಹೈದರಾಬಾದ್‌ ಪರವಾಗಿ ಆಡುತ್ತಾರೆ. ಇದಲ್ಲದೆ ಅಭಿಷೇಕ್ ಶರ್ಮಾ ಅಂಡರ್-19 ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link