ಭಾರತ ತಂಡದಲ್ಲಿ ಬಾರಿ ಗೊಂದಲ.. ಗೌತಮ್ ಗಂಭೀರ್ ವಿರುದ್ಧ ಬಿಸಿಸಿಐಗೆ ದೂರು ಕೊಟ್ಟ ತಂಡದ ಆಟಗಾರರು..?
Team India: ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್‌ಗೆ ಮತ್ತೊಂದು ಸಮಸ್ಯೆ ಎದುರಾಗಿದೆ. ಭಾರತ ತಂಡದ ಕೆಲವು ಆಟಗಾರರು ಗೌತಮ್ ಗಂಭೀರ್ ಅವರ ಅಭಿಪ್ರಾಯಗಳಿಗೆ ವಿರುದ್ಧವಾಗಿದ್ದಾರೆ. ಈ ಬಗ್ಗೆ ಬಿಸಿಸಿಐಗೂ ದೂರು ನೀಡಿದ್ದಾರೆ ಎನ್ನುವ ಸುದ್ದಿ ಇದೀಗ ಹೊಬಿದ್ದಿದೆ.
ತವರು ನೆಲದಲ್ಲಿ ನ್ಯೂಜಿಲೆಂಡ್‌ನ ಹೀನಾಯ ಸೋಲಿಗೆ ಗಂಭೀರ್ ಹೊಣೆಯಾಗುತ್ತಿರುವ ಈ ಸಮಯದಲ್ಲಿ, ಗಂಭೀರ್ ಅವರ ಕೋಚ್ ಸ್ಥಾನಕ್ಕೆ ಧಕ್ಕೆ ಎದುರಾಗುವ ಸಾಧ್ಯತೆಯಿದೆ.
91 ವರ್ಷಗಳ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಟೀಂ ಇಂಡಿಯಾ ತವರಿನಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವೈಟ್ ವಾಶ್ ಆಗಿರುವ ವಿಚಾರ ಗೊತ್ತೆ ಇದೆ.
ಈ ಭೀಕರ ವೈಫಲ್ಯದ ಕುರಿತು ಬಿಸಿಸಿಐ ಸುದೀರ್ಘ ಆರು ಗಂಟೆಗಳ ಕಾಲ ಪರಿಶೀಲನೆ ನಡೆಸಲಾಗಿದ್ದು, ನಾಯಕ ರೋಹಿತ್ ಶರ್ಮಾ, ಕೋಚ್ ಗಂಭೀರ್ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಗರ್ಕರ್ ಅವರಿಗೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜೈ ಶಾ ಪ್ರಶ್ನೆಗಳನ್ನು ಕೇಳಿದ್ದಾರೆ.
ಎರಡನೇ ಟೆಸ್ಟ್‌ನಲ್ಲಿ ವಿಫಲವಾದರೂ ಮೂರನೇ ಟೆಸ್ಟ್‌ನಲ್ಲಿ ಸ್ಪಿನ್ ಪಿಚ್ ಅನ್ನು ಏಕೆ ಸಿದ್ಧಪಡಿಸಿದರು? ಆ ಪಂದ್ಯದಿಂದ ಬುಮ್ರಾ ಏಕೆ ಹೊರಗುಳಿದಿದ್ದರು? ಆಸ್ಟ್ರೇಲಿಯಾ ಪ್ರವಾಸದ ಯೋಜನೆಗಳೇನು? ಎಂದು ಗಂಭೀರ್-ರೋಹಿತ್ ಅವರನ್ನು ಬಿಸಿಸಿಐ ಪ್ರಶ್ನಿಸಿದೆ.
ಆದರೆ ವಿಮರ್ಶೆಯನ್ನು ಲೆಕ್ಕಿಸದೆ ಭಾರತ ತಂಡದ ಪ್ರಮುಖ ಆಟಗಾರರು ಗಂಭೀರ್ ವಿರುದ್ಧ ಬಿಸಿಸಿಐಗೆ ದೂರು ನೀಡಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.
ಗೌತಮ್ ಗಂಭೀರ್ ಅವರ ವಿರುದ್ದ ದೂರು ನೀಡಿರುವುದು ಬೇರಾರು ಅಲ್ಲ, ತಂಡದ ಹಿರಿಯ ಆಟಗಾರರು ಎಂಬ ಸುದ್ದಿ ಇದೀಗ ಹೊರಬಿದ್ದಿದೆ.
ತಂಡದ ತಂತ್ರಗಾರಿಕೆಯಲ್ಲಿ ಗಂಭೀರ್ ಜತೆ ಭಿನ್ನಾಭಿಪ್ರಾಯಗಳಿವೆ ಎಂದು ವರಿಷ್ಠರು ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ನವೆಂಬರ್ 22ರಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಬಿಸಿಸಿಐ ಗೌತಮ್ ಗಂಭೀರ್ ಗೆ ಕೊನೆಯ ಅವಕಾಶ ನೀಡಿದೆಯಂತೆ. ಕಾಂಗರೂ ನೆಲದಲ್ಲಿ ಆಸ್ಟ್ರೇಲಿಯವನ್ನು ಸೋಲಿಸದಿದ್ದರೆ ಗಂಭೀರ್ ಅವರನ್ನು ಕೋಚ್ ಆಗಿ ಟೆಸ್ಟ್ ಸ್ವರೂಪದಿಂದ ತೆಗೆದುಹಾಕುವ ನಿರೀಕ್ಷೆಯಿದೆ.
ಗಂಭೀರ್ ಸ್ಥಾನಕ್ಕೆ ಎನ್ ಸಿಎ ನಿರ್ದೇಶಕ ವಿವಿಎಸ್ ಲಕ್ಷ್ಮಣ್ ಅವರನ್ನು ನೇಮಿಸಲು ಚಿಂತನೆ ನಡೆಸಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ವಿಫಲವಾದರೆ ಕೋಚ್ ಹಾಗೂ ಹಿರಿಯ ಆಟಗಾರರನ್ನು ಶಿಕ್ಷಿಸಲು ಬಿಸಿಸಿಐ ಬಯಸಿದೆ ಎಂದು ವರದಿಯಾಗಿದೆ.