ವಿದ್ಯಾರ್ಥಿಗಳ ಗಮನಕ್ಕೆ..! ಶಾಲಾ ಸಮಯದಲ್ಲಿ ಭಾರೀ ಬದಲಾವಣೆ, ಇಲ್ಲಿದೆ ಮಹತ್ವದ ಮಾಹಿತಿ..
ಚಳಿಗಾಲದಲ್ಲಿ ತಾಪಮಾನವು ತೀವ್ರವಾಗಿ ಇಳಿಯುತ್ತದೆ. ಇದರಿಂದ ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ದಾಖಲಾಗಿದೆ.
ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಅತಿ ಕಡಿಮೆ ತಾಪಮಾನ ದಾಖಲಾಗಿರುವುದರಿಂದ ಜನ ಭೀಕರ ಚಳಿಗೆ ನಡುಗುತ್ತಿದ್ದಾರೆ.
ಹೈದರಾಬಾದ್ ಸೇರಿದಂತೆ ಅರಣ್ಯ ಪ್ರದೇಶದ ಕುಮಾರಂ ಭೀಮ್ ಆಸಿಫಾಬಾದ್, ಆದಿಲಾಬಾದ್, ನಿರ್ಮಲ್ ಜಿಲ್ಲೆಗಳಲ್ಲಿ ಚಳಿಯಿಂದ ಜನರು ನಡುಗುತ್ತಿದ್ದಾರೆ. ಇದರ ಪರಿಣಾಮ ಕರ್ನಾಟಕದ ಗಡಿಗೂ ತಟ್ಟಬಹುದು.
ಆದಿಲಾಬಾದ್ ಜಿಲ್ಲೆಯಲ್ಲಿ ವಿಪರೀತ ಚಳಿಯಿಂದಾಗಿ ಶಾಲಾ ಸಮಯದಲ್ಲಿ ತೀವ್ರ ಬದಲಾವಣೆಯಾಗಿದೆ.
ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಕೆಲಸದ ವೇಳೆಯಲ್ಲಿ ಬದಲಾವಣೆ ಮಾಡಿ ಆದಿಲಾಬಾದ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಶಾಲೆಯ ಕೆಲಸದ ಸಮಯವನ್ನು ಬೆಳಗ್ಗೆ 9.40ರಿಂದ ಸಂಜೆ 4.30ಕ್ಕೆ ಬದಲಾಯಿಸಲು ನಿರ್ಣಯ ಕೈಗೊಳ್ಳಲಾಯಿತು.
ಶಾಲೆಗಳ ಸಮಯವನ್ನು ಬದಲಿಸಿ ಆದಿಲಾಬಾದ್ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಚಳಿಯ ತೀವ್ರತೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕರು ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.