ಈ ಸ್ಥಳದಲ್ಲಿ ಕೋತಿಗಳಿಗಾಗೇ ನಡೆಯುತ್ತೆ ವಿಶೇಷ ಉತ್ಸವ: ಮನಮೆಚ್ಚುವ ಫೋಟೋಗಳು ನೋಡಿ

Mon, 01 Aug 2022-1:18 pm,

ಪ್ರಪಂಚದಾದ್ಯಂತದ ಕೆಲವು ಜನರು ತಮ್ಮ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಶತಮಾನಗಳಿಂದ ಸಂರಕ್ಷಿಸಿಕೊಂಡು ಬಂದಿರುತ್ತಾರೆ. ಇಂದಿನವರೆಗೂ ಅವುಗಳನ್ನು ಅನುಸರಿಸುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ ಅಂತಹ ನಂಬಿಕೆಗಳು ಧರ್ಮಕ್ಕೆ ಸಂಬಂಧಿಸಿರುತ್ತವೆ. 

ಬೇರೆ ಯಾವುದೋ ಕಾರಣಕ್ಕಾಗಿ ಅವುಗಳನ್ನು ಹಲವಾರು ದಶಕಗಳಿಂದ ನಿರಂತರವಾಗಿ ಅನುಸರಿಸಿದಾಗ, ಅವು ಜನರ ಜೀವನದ ಪ್ರಮುಖ ಭಾಗವಾಗುತ್ತವೆ. ಇದೇ ರೀತಿಯ ಸಂಪ್ರದಾಯವು ಥಾಯ್ ನಗರದಲ್ಲಿದ್ದು, ಪ್ರತಿ ವರ್ಷ ಕೋತಿಗಳಿಗೆ ದೊಡ್ಡ ಬಫೆ ಪಾರ್ಟಿಯನ್ನು ಆಯೋಜಿಸಲಾಗುತ್ತದೆ. ಥಾಯ್ಲೆಂಡ್‌ನ ಮಂಕಿ ಬಫೆ ಫೆಸ್ಟಿವಲ್ ಹಬ್ಬಕ್ಕಿಂತ ಕಡಿಮೆಯಿಲ್ಲ ಎನ್ನಬಹುದು.   

 'ಡೈಲಿ ಮೇಲ್'ನಲ್ಲಿ ಪ್ರಕಟವಾದ ವರದಿಗಳ ಪ್ರಕಾರ, 1980 ರಿಂದ ಬ್ಯಾಂಕಾಕ್‌ನ ಲೋಪ್‌ಬುರಿನಲ್ಲಿ ಪ್ರತಿವರ್ಷ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು 'ಮಂಕಿ ಬಫೆ ಫೆಸ್ಟಿವಲ್' ಎಂದು ಕರೆಯಲಾಗುತ್ತದೆ. ಈ ಗ್ರ್ಯಾಂಡ್ ಮಂಕಿ ಪಾರ್ಟಿಯ ವಿಶೇಷತೆ ಏನೆಂದರೆ, ದೊಡ್ಡ ಮೆರವಣಿಗೆಯಂತೆ ಇದನ್ನು ತಯಾರಿಸಲಾಗುತ್ತದೆ. ಬಫೆಯಲ್ಲಿ ಆಹಾರದ ವ್ಯವಸ್ಥೆ, ಅಲಂಕಾರಗಳನ್ನು ಮಾಡಲಾಗುತ್ತದೆ.

ಈ ಪಾರ್ಟಿಯಲ್ಲಿನ ಆಹಾರವು ಹಣ್ಣುಗಳಿಂದ ಹಿಡಿದು ತಂಪು ಪಾನೀಯಗಳು, ಐಸ್ ಕ್ರೀಂವರೆಗೆ ಇರುತ್ತದೆ. ಆದರೆ ಇದೆಲ್ಲ ನಡೆಯುವುದು ಮನುಷ್ಯರಿಗಾಗಿ ಅಲ್ಲ, ಮಂಗಗಳಿಗೆ. ಮತ್ತು ಈ ಇಡೀ ಕಾರ್ಯಕ್ರಮಕ್ಕೆ ಲಕ್ಷಗಟ್ಟಲೆ ರೂ. ಖರ್ಚು ಮಾಡಲಾಗುತ್ತದೆ. 

ಈ ಹಬ್ಬವನ್ನು ಇಲ್ಲಿನ ಉದ್ಯಮಿಯೊಬ್ಬರು ಆರಂಭಿಸಿದ್ದಾರೆ ಎಂದು ಹಿರಿಯರು ಹೇಳಿದ್ದಾರೆ. ಲೋಪ್‌ಬುರಿಯಲ್ಲಿ ಮಂಗಗಳ ಕಾಟ ಹೆಚ್ಚಾಗಿದ್ದರಿಂದ ಅವುಗಳಿಗಾಗಿ ಪ್ರತ್ಯೇಕ ಆಹಾರ ಹಬ್ಬವನ್ನು ಮಾಡಲು ನಿರ್ಧರಿಸಲಾಯಿತು. ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆ ವ್ಯಾಪಾರವೂ ಹೆಚ್ಚಿತು. ಅಂತಹ ಪರಿಸ್ಥಿತಿಯಲ್ಲಿ, ತನ್ನ ಲಾಭದ ಮೊತ್ತದಿಂದ ಕೋತಿಗಳಿಗೆ ಪಾರ್ಟಿಗಳನ್ನು ನೀಡಲು ಪ್ರಾರಂಭಿಸಲಾಯಿತು.  ಇದರಿಂದ ಹೆಚ್ಚು ಹೆಚ್ಚು ಮಂಗಗಳು ಎಂದಿನಂತೆ ಕಾಡಿನಂತೆ ಆ ನಗರದಲ್ಲಿ ನೆಲೆಸುತ್ತವೆ.

2019 ರವರೆಗೂ ಎಲ್ಲವೂ ಸರಿಯಾಗಿತ್ತು. ಆದರೆ 2020 ರಲ್ಲಿ ಕೊರೊನಾ ಲಾಕ್‌ಡೌನ್‌ನಿಂದಾಗಿ ಇಲ್ಲಿನ ಮಂಗಗಳು ಸಹ ಬಿಕ್ಕಟ್ಟನ್ನು ಎದುರಿಸಿದವು. 

ಈ ಹಬ್ಬ ಆಚರಿಸುವ ಸಂಪ್ರದಾಯವು 1980 ರ ದಶಕದ ಉತ್ತರಾರ್ಧದಲ್ಲಿ ಪ್ರಾರಂಭವಾಯಿತು. 42 ವರ್ಷಗಳ ಕಾಲ ಒಟ್ಟಿಗೆ ಇದ್ದ ಕಾರಣ, ಮಂಗಗಳು ಮತ್ತು ಮನುಷ್ಯರಿಗೆ ಉತ್ತಮ ಬಾಂಧವ್ಯ ರೂಪುಗೊಂಡಿದೆ. 

ಕೊರೊನಾ ಮಹಾಮಾರಿಯಿಂದ ಪರಿಸ್ಥಿತಿ ಸುಧಾರಿಸಲು ಆರಂಭಿಸಿದೆ. ಪ್ರವಾಸೋದ್ಯಮವನ್ನು ಆಧರಿಸಿದ ಥಾಯ್ಲೆಂಡ್‌ನ ಆರ್ಥಿಕತೆಯು ಸಹ ಅಭಿವೃದ್ಧಿ ಹೊಂದುತ್ತಿದೆ. ಈ ವರ್ಷ 2022 ಕ್ಕೆ ಈ ಬಾರಿ ಮಂಕಿ ಬಫೆ ಉತ್ಸವವು ಮೊದಲಿಗಿಂತ ಹೆಚ್ಚು ಪ್ರಚಂಡವಾಗಿರಬಹುದು ಎಂದು ನಂಬಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link