Shash Mahapurush Rajyog: ಶನಿ ನಿರ್ಮಿಸಿರುವ ರಾಜಯೋಗದಿಂದ 2025ರವರೆಗೆ ಈ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯ ಯೋಗ!
ಸಿಂಹ ರಾಶಿ: ಶಶ ಮಹಾಪುರುಷ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಈ ಮಹಾಪುರುಷ ರಾಜಯೋಗ ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಬಾಳ ಸಂಗಾತಿಯ ಸಂಪೂರ್ಣ ಬೆಂಬಲ ಸಿಗಲಿದೆ. ಇದಲ್ಲದೆ ಬಾಳಸಂಗಾತಿಯ ಉನ್ನತಿ ಕೂಡ ಆಗಲಿದೆ. ಇದಲ್ಲದೆ ಕಾರ್ಯಸ್ಥಳದಲ್ಲಿ ನಿಮಗೆ ಪದೋನ್ನತಿಯ ಭಾಗ್ಯ ಹಾಗೂ ಆಧಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಆದಾಯದ ಮೂಲಗಳು ಕೂಡ ಹೆಚ್ಚಾಗಲಿವೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮಗೆ ಬಂಧು ಮಿತ್ರರ ಬೆಂಬಲ ಕೂಡ ಪ್ರಾಪ್ತಿಯಾಗಲಿದೆ. ಸಂತಾನ ಪಕ್ಷದ ವತಿಯಿಂದ ಕೂಡ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಪಾರ್ಟ್ನರ್ ಶಿಪ್ ನಲ್ಲಿ ಒಂದು ವೇಳೆ ನೀವು ವ್ಯಾಪಾರ ಮಾಡುತ್ತಿದ್ದರೆ, ಅದರಲ್ಲಿಯೂ ಕೂಡ ನಿಮಗೆ ಯಶಸ್ಸು ಪ್ರಾಪ್ತಿಯಾಗಲಿದೆ. 2025ವರೆಗೆ ನಿಮ್ಮ ಇಷ್ಟಾರ್ಥಗಳು ನೆರೆವೇರಲಿದ್ದು, ಏಲ್ಲಾ ಕೆಲಸಗಳಲ್ಲಿ ನಿಮಗೆ ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ.
ಮಿಥುನ ರಾಶಿ: ನಿಮ್ಮ ಪಾಲಿಗೆ ಶಶ ಮಹಾಪುರುಷ ರಾಜಯೋಗ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ಈ ರಾಜಯೋಗ ನಿಮ್ಮ ಜಾತಕದ ನವಮಭಾವದಲ್ಲಿ ರೂಪುಗೊಳ್ಳುತ್ತಿದ್ದು, 2025ರವರೆಗೆ ಇರಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಭಾರಿ ಬೆಂಬಲ ಸಿಗಲಿದೆ. ಜೊತೆಗೆ ಧರ್ಮ ಕಾರ್ಯಗಳಲ್ಲಿ ನಿಮ್ಮ ಅಭಿರುಚಿ ಹೆಚ್ಚಾಗಲಿದೆ. ಇದಲ್ಲದೆ ಧರ್ಮ ಕಾರ್ಯಗಳಿಗೆ ಹಣ ವೆಚ್ಚ ಕೂಡ ಮಾಡುವಿರಿ. ಈ ಸಮಯದಲ್ಲಿ ನೀವು ವಿದೇಶ ಯಾತ್ರೆಯನ್ನು ಕೂಡ ಕೈಗೊಳ್ಳುವ ಸಾಧ್ಯತೆ ಇದೆ. ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಲಘು ಯಾತ್ರೆಗಳು ಕೂಡ ಸಂಭವಿಸಲಿವೆ. ಕಾರ್ಯಸ್ಥಳದಲ್ಲಿ ಪದೋನ್ನತಿಯ ಜೊತೆಗೆ ಆದಾಯದಲ್ಲಿ ವೃದ್ಧಿಯನ್ನು ಕೂಡ ನೀವು ಕಾಣಬಹುದು. ಆದಾಯದ ಮೂಲಗಳು ಕೂಡ ಹೆಚ್ಚಾಗಳಿದ್ದು 2025ರವರೆಗೆ ನೀವು ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಸಾಧ್ಯತೆ ಇದೆ.
ಕುಂಭ ರಾಶಿ: ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಶನಿಯ ಈ ಸಂಚಾರದಿಂದ ಶಶ ಮಹಾಪುರುಷ ರಾಜಯೋಗ ನಿರ್ಮಾಣಗೊಂಡಿದ್ದು, ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಚೈತನ್ಯವನ್ನು ನೀವು ಕಾಣಬಹುದು. ಈ ರಾಜಯೋಗ ನಿಮ್ಮ ಜಾತಕದಲ್ಲಿ 2025ರವೆರೆಗೆ ಇರಲಿದೆ. ಇದರಿಂದ ನಿಮ್ಮ ವ್ಯವಹಾರದಲ್ಲಿ ಹೊಸ ಹುರುಪು ಇರಲಿದೆ, ಉನ್ನತ ಸ್ಥಾನದಲ್ಲಿರುವವರ ಜೊತೆಗೆ ನಿಮ್ಮ ಒಡನಾಟ ಹೆಚ್ಚಾಗಲಿದೆ. ಇದಲ್ಲದೆ 2025 ರಲ್ಲಿ ನಿಮಗೆ ಶನಿಯ ಜೊತೆಗೆ ದೇವಗುರು ಬೃಹಸ್ಪತಿಯ ಆಶೀರ್ವಾದ ಕೂಡ ಲಭಿಸಲಿದೆ. ಏಕೆಂದರೆ ಆ ವರ್ಷದಲ್ಲಿ ಗುರು ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ವಿದ್ಯಾರ್ಥಿಗಳಿಗೆ ಅಪಾರ ಯಶಸ್ಸು ಸಿಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವವರು ಪರೀಕ್ಷೆಯಲ್ಲಿ ಪಾಸಾಗುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯ ಕೂಡಿ ಬರಲಿದೆ. ಆದರೆ ನಿಮ್ಮ ಮೇಲೆ ಪ್ರಸ್ತುತ ಸಾಡೇಸಾತಿ ನಡೆಯುತಿದ್ದು, ನೀವು ಶನಿ ದೇವನ ಪೂಜೆ-ಅರ್ಚನೆಯನ್ನು ನಡೆಸಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)