Tongue Colors: ನಾಲಿಗೆ ಬಣ್ಣ ನೋಡ್ಕೊಂಡ್ರೆ ಆರೋಗ್ಯ ಹೇಗಿದೆ ಅಂತಾ ಗೊತ್ತಾಗುತ್ತೆ? ಯಾವ ಬಣ್ಣ ಏನು ಸೂಚಿಸುತ್ತೆ ಗೊತ್ತಾ?
ಸಾಮಾನ್ಯವಾಗಿ ಏನೇ ಆರೋಗ್ಯ ಸಮಸ್ಯೆ ಇದ್ದಾಗಲೂ ವೈದ್ಯರ ಬಳಿ ಹೋದಾಗ ಅವರು ಮೊದಲು ನಾಲಿಗೆ ತೋರಿಸುವಂತೆ ಕೇಳುತ್ತಾರೆ. ಅಷ್ಟಕ್ಕೂ ಇದಕ್ಕೆ ಪ್ರಮುಖ ಕಾರಣ ನಾಲಿಗೆಯ ಬಣ್ಣವೇ ನಿಮ್ಮ ಆರೋಗ್ಯ ಸ್ಥಿತಿಯನ್ನು ಸೂಚಿಸುತ್ತದೆ. ಹಾಗಿದ್ದರೆ, ಯಾವ ಬಣ್ಣದ ನಾಲಿಗೆ ಏನು ಸೂಚಿಸುತ್ತದೆ ಎಂದು ತಿಳಿಯೋಣ.
ನಾಲಿಗೆ ಪಿಂಕ್ ಅಥವಾ ಗುಲಾಬಿ ಬಣ್ಣದಲ್ಲಿದ್ದರೆ ಅದು ನೀವು ಆರೋಗ್ಯವಾಗಿದ್ದೀರಿ. ನಿಮಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದರ್ಥ.
ಬಿಳಿ ನಾಳಿಗೆಯು ಅಜೀರ್ಣದ ಸಮಸ್ಯೆಗಳು ಹಾಗೂ ದೇಹದಲ್ಲಿ ಹಿಮೋಗ್ಲೋಬಿನ್ ಎಂದರೆ ರಕ್ತ ಕಡಿಮೆ ಇದೆ ಎಂಬುದನ್ನು ಸೂಚಿಸುತ್ತದೆ.
ನಾಲಿಗೆ ಹಳದಿ ಬಣ್ಣದಲ್ಲಿದ್ದರೆ ಇದು ವೈರಲ್ ಇನ್ಫೆಕ್ಷನ್ ಅನ್ನು ಸೂಚಿಸುತ್ತದೆ. ಆದರೆ, ಹಳದಿ ಬಣ್ಣ ಗಾಢವಾಗಿದ್ದರೆ ಇದು ಜಾಂಡಿಸ್ ಸಮಸ್ಯೆಯ ಎಚ್ಚರಿಕೆಯ ಗಂಟೆಯೂ ಆಗಿರಬಹುದು.
ನಾಲಿಗೆ ಕೆಂಪು ಬಣ್ಣದಲ್ಲಿದ್ದರೆ ದೇಹದಲ್ಲಿ ವಿಟಮಿನ್ ಬಿ ಕೊರತೆಯಿದೆ ಎಂದರ್ಥ.
ನಾಲಿಗೆ ಪರ್ಪಲ್ ಎಂದರೆ ನೇರಳೆ ಬಣ್ಣದಲ್ಲಿದ್ದರೆ ದೇಹದಲ್ಲಿ ರಕ್ತ ಸಂಚಲನ ಸರಿಯಾಗಿ ಆಗುತ್ತಿಲ್ಲ. ಹೃದಯ ಸಂಬಂಧಿತ ಸಮಸ್ಯೆಗಳಿರಬಹುದು ಎಂಬುದನ್ನೂ ಸೂಚಿಸುತ್ತದೆ.
ನಾಲಿಗೆ ನೀಲಿ ಬಣ್ಣದಲ್ಲಿ ಇದ್ದರೆ ರಕ್ತದಲ್ಲಿ ಆಕ್ಸಿಜನ್ ಕಡಿಮೆ ಇದ್ದು, ಕಿಡ್ನಿ ಸಂಬಂಧಿತ ಸಮಸ್ಯೆಗಳಿರಬಹುದು ಎಂಬುದರ ಸಂಕೇತ.
ಫಂಗಲ್ ಸೋಂಕು ಹೆಚ್ಚಾದಾಗ ನಾಲಿಗೆಯು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಕೆಲವು ಸಮಯದಲ್ಲಿ ಇದು ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವೂ ಆಗಿರಬಹುದು.
ಹೆಚ್ಚು ಟೀ-ಕಾಫಿ ಕುಡಿಯುವವರ ನಾಲಿಗೆ ಕಂದು ಬಣ್ಣದಲ್ಲಿರುತ್ತದೆ. ಅಷ್ಟೇ ಅಲ್ಲ, ಅತಿಯಾಗಿ ಧೂಮಪಾನ ಮಾಡುವವರಲ್ಲಿಯೂ ನಾಲಿಗೆ ಬಣ್ಣ ಕಂದಾಗಿರುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.