ಮತ್ತೊಂದು ವಿವಾದಕ್ಕೆ ಮುನ್ನುಡಿ ಬರೆದ ಸಮಂತಾ..! ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಯ್ತು ಅದೊಂದು ಪೋಸ್ಟ್‌..?

Mon, 08 Jul 2024-9:33 am,

ಸಮಂತಾ ಇತ್ತೀಚೆಗೆ ಒಂದಲ್ಲಾ ಒಂದು ವಿಷಯದ ಕುರಿತ ವಿವಾದಕ್ಕೆ ಮುನ್ನುಡಿ ಬರೆಯುತ್ತಲೇ ಇರುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈಜ್ಞಾನಿಕ ಪೋಸ್ಟ್‌ ಹಾಕುವ ಮೂಲಕ ಸ್ಯಾಮ್‌ ವಿವಾದಕ್ಕೀಡಾಗಿದ್ದಾರೆ.

ವೈರಲ್‌ ಸೋಂಕು ನಿಮ್ಮನ್ನು ಆವರಿಸಿದಾಗ, ನೀರಿನೊಂದಿಗೆ ಹೈಡ್ರೋಜನ್ ಪೆರಾಕ್ಸೈಡ್‌ನ ನೆಬ್ಯುಲೈಸೇಶನ್ ಬಳಸಿ ಇದರಿಂದಾಗಿ ನಿಮಗೆ ಸೋಕಿನಿಂದ ಮುಕ್ತಿ ದೊರೆಯುತ್ತದೆ ಎಂದು ಸ್ಯಾಮ್‌ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದರು.   

ಈ ಪೋಸ್ಟ್‌ ಅನ್ನು ನೋಡಿದ ವೈದ್ಯರೊಬ್ಬರು ಇದಕ್ಕೆ ಪ್ರತಿಕ್ರಿಯಿಸಿ, ಸಮಂತಾ ಸುಳ್ಳು ಮಾಹಿತಿಯೊಂದಿಗೆ ಜನಸಾಮನ್ಯರ ಜೀವದೊಂದಿಗೆ ಆಟವಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದರು. ಸಮಂತಾ ಅವರನ್ನು ಈ ರೀತಿ ಜನರನ್ನು ದಾರಿ ತಪ್ಪಿಸುವ ಕಾರಣಕ್ಕಾಗಿ ಜೈಲಿಗೆ ಕಳಿಸಬೇಕು ಎಂದು ಆಕ್ರೋಶ ಹೊರಹಾಕಿದ್ದರು. ಇದೆಲ್ಲಾ ಅದ ನಂತರ ಸಮಂತಾ ವೈದ್ಯರಿಗೆ ಪ್ರತಿಕ್ರಿಸಿಸಿದ್ದರು, ನಂತರ ವೈದ್ಯರು ಕೂಡ ಸ್ಯಾಮ್‌ಗೆ ಕ್ಷಮೆ ಯಾಚಿಸಿದ್ದರು.  

ಇದೀಗ ಮತ್ತೊರ್ವ ಸೆಲೆಬ್ರಿಟಿ ಸಮಂತಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗ್ರ್ಯಾಮಿ ಪ್ರಶಸ್ತಿ ವಿಜೇತ, ಸಂಗೀತಗಾರ ರಿಕಿ ಕೇಜ್ ಪ್ರತಿಕ್ರಿಯಿಸಿದ್ದಾರೆ. ಸಮಂತಾ ಆರೋಗ್ಯ ಮತ್ತು ವಿಜ್ಞಾನದ ಬಗ್ಗೆ ಅನಕ್ಷರಸ್ಥೆ ಎಂದು ಹೇಳುವ ಮೂಲಕ ಬಿಸಿ ಬಿಸಿ ಕಾಮೆಂಟ್ ಮಾಡಿದ್ದಾರೆ.   

"ಈ ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಯು ಸಹ ಮಾರಕವಾಗಬಹುದು. ಇದು ಅತ್ಯಂತ ಬೇಜವಾಬ್ದಾರಿ ವಿಷಯ. ಈ ಔಷಧಿಯ ಪರ್ಯಾಯ ಮೂಲಗಳನ್ನು ನಿರಂತರವಾಗಿ ಹುಡುಕುತ್ತಿರುವ ಅನೇಕ ಜನರಿದ್ದಾರೆ. ಅವರು ಇದನ್ನು ಬಳಸಿದರೆ ಅವರ ಜೀವಕ್ಕೆ ಹಾನಿ ಉಂಟಾಗಬಹುದು" ಸೆಲಿಬ್ರಿಟಿಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ರಿಕಿ ಕೇಜ್‌ ಸ್ಯಾಮ್‌ ವಿರುದ್ಧ ಕಿಡಿ ಕಾರಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link