ಅಂದು ಖ್ಯಾತ ನಟಿಯಾಗಿ ಮಿಂಚಿದ್ದಾಕೆಗೆ ತುತ್ತು ಅನ್ನಕ್ಕೂ ಭಿಕ್ಷೆ ಬೇಡುವ ಸ್ಥಿತಿ! ಇರಲು ಜಾಗವಿಲ್ಲದೆ ರಸ್ತೆಬದಿಯಲ್ಲಿ ಮಲಗಿದ ಅಂದಿನ ಸೂಪರ್‌ ಸ್ಟಾರ್‌ ʼಸುಂದರಿʼ

Sun, 29 Dec 2024-6:47 pm,

ಬಾಲಿವುಡ್ ಜಗತ್ತು ಎಷ್ಟು ಗ್ಲಾಮರಸ್ ಆಗಿದೆಯೋ ಅಷ್ಟೇ ದುರಂತದಿಂದ ಕೂಡಿದೆ. ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಹಿಂದಿ ಚಿತ್ರರಂಗಕ್ಕೆ ಕಪ್ಪುಚುಕ್ಕೆಯೊಂದು ಕಾಣಿಸಿಕೊಂಡಿತ್ತು. ಬಾಲಿವುಡ್‌ಗೆ ಬರುವುದರಿಂದ ಅನೇಕರು ಹೆಸರು, ಕೀರ್ತಿ, ಹಣ ಮತ್ತು ಎಲ್ಲಾ ಐಷಾರಾಮಿ ಸೌಕರ್ಯಗಳನ್ನು ಪಡೆದಿದ್ದಾರೆ. ಆದರೆ ಗಮ್ಯ ಸ್ಥಾನ ಸಾಧಿಸಲು ಸಾಧ್ಯವಾಗದೆ ನೊಂದವರು ಕೂಡ ಇದ್ದಾರೆ

ಈ ಗ್ಲಾಮರ್ ಲೋಕದಲ್ಲಿ ಯಾರು ಯಾವಾಗ ಅಂತಸ್ತು ತಲುಪುತ್ತಾರೋ ಗೊತ್ತಿಲ್ಲ. ಕೆಲವರು ಪಿತೂರಿಗಳಿಗೆ ಬಲಿಯಾದರೆ, ಇನ್ನೂಕೆಲವರು ಕೆಟ್ಟ ಅಭ್ಯಾಸಗಳಿಗೆ ಬಲಿಯಾಗುತ್ತಾರೆ. ಇಂದು ನಾವು ನಿಮಗೆ ನಟಿ ಮಾಧುರಿ ಸೌಂದರ್ಯಕ್ಕೆ ಹೋಲಿಸಲ್ಪಟ್ಟ  ಸೂಪರ್ ಮಾಡೆಲ್ ಒಬ್ಬರ ಬಗ್ಗೆ ಹೇಳಲಿದ್ದೇವೆ. ಆಕೆ ಬೇರಾರು ಅಲ್ಲ, ಗೀತಾಂಜಲಿ ನಾಗ್ಪಾಲ್.

 

ಒಂದು ಕಾಲದಲ್ಲಿ, ಗೀತಾಂಜಲಿ ಉದಯೋನ್ಮುಖ ಕಲಾವಿದೆಯಾಗಿದ್ದರೂ ಸಹ ಕೆಟ್ಟ ಚಟಗಳಿಂದಾಗಿ ಎಲ್ಲವನ್ನೂ ಹಾಳುಮಾಡಿಕೊಂಡಳು. ಸಿಂಹಾಸನದಿಂದ ಬೀದಿಗೆ ಬಿದ್ದ ಈ ನಟಿಯ ಬಗ್ಗೆ ಮುಂದೆ ತಿಳಿಯೋಣ.

 

ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರೊಂದಿಗೆ ರ‍್ಯಾಂಪ್ ವಾಕ್ ಮಾಡಿದ 90ರ ದಶಕದ ವ್ಯಕ್ತಿತ್ವ ಗೀತಾಂಜಲಿ. ತನ್ನ ಸೌಂದರ್ಯದಿಂದಲೇ ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ಗೀತಾಂಜಲಿ, 90ರ ದಶಕದಲ್ಲಿ ಮಾಡೆಲಿಂಗ್ ಲೋಕದಲ್ಲಿ ಸುದ್ದಿ ಮಾಡಿದ್ದರು.

 

ಹರಿಯಾಣದ ಹಿಸಾರ್ ಮೂಲದ ಗೀತಾಂಜಲಿ ಅವರ ತಂದೆ ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗಿದ್ದರು ಮತ್ತು ತಾಯಿ ಗೃಹಿಣಿಯಾಗಿದ್ದರು. ಗೀತಾ ಅವರ ಆರಂಭಿಕ ಅಧ್ಯಯನಗಳು ಬೆಂಗಳೂರಿನ ಮೌಂಟ್ ಕಾರ್ಮೆಲ್‌ನಲ್ಲಿ ನಡೆದವು. ಇದರ ನಂತರ ದೆಹಲಿಯ ಲೇಡಿ ಶ್ರೀ ರಾಮ್ ಕಾಲೇಜಿನಲ್ಲಿ ಪದವಿ ಪಡೆದರು. ಗೀತಾಂಜಲಿ ತುಂಬಾ ಸುಂದರಿಯಾಗಿದ್ದ ಕಾರಣ ಫ್ಯಾಶನ್ ಡಿಸೈನಿಂಗ್ ಕೋರ್ಸ್ ಕೂಡ ಮಾಡಿದ್ದರು.

 

ಗೀತಾಂಜಲಿ ಗ್ಲಾಮರ್ ಜಗತ್ತಿನಲ್ಲಿ ಯಶಸ್ಸನ್ನು ಪಡೆದಾಗ, ತಮ್ಮ ಹೆತ್ತವರ ವಿರುದ್ಧವೇ ನಿಂತಿದ್ದರು. ನಂತರ ಜರ್ಮನ್‌ ಹುಡುಗನನ್ನು ವಿವಾಹವಾದರು. ಆದರೆ, ಆ ಸಂಬಂಧವನ್ನೂ ಮುರಿದು ಗೋವಾಗೆ ಆಗಮಿಸಿದರು ಅಲ್ಲಿ ಬ್ರಿಟಿಷ್ ಯುವಕನ ಜೊತೆ ಡೇಟಿಂಗ್‌ ಮಾಡಿ, ಆ ನಂತರ ದೆಹಲಿಯ ಅತಿಥಿಗೃಹದಲ್ಲಿ ವಾಸಿಸಲು ಪ್ರಾರಂಭಿಸಿದಳು. ಈ ದಿನಗಳಲ್ಲಿ ಗೀತಾಂಜಲಿ ಒಂದಷ್ಟು ಚಟಕ್ಕೆ ಬಲಿಯಾಗಿದ್ದರು.

 

ಬಾಲಿವುಡ್‌ನಲ್ಲಿ ಯಶಸ್ಸು ಎಷ್ಟು ವೇಗವಾಗಿ ಸಿಕ್ಕಿತ್ತೋ, ಅಷ್ಟೇ ಶೀಘ್ರದಲ್ಲಿ ದೂರವಾಯಿತು. ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆಯಿಂದ ಗೀತಾಂಜಲಿ ತನ್ನ ವೃತ್ತಿಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಿಕೊಂಡರು. 2007ರಲ್ಲಿ ಗೀತಾಂಜಲಿ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದರು ಎಂದು ಹೇಳಲಾಗುತ್ತದೆ

 

ಹಣಕಾಸಿನ ಅಡಚಣೆಯಿಂದ ತೊಂದರೆಗೊಳಗಾದ ಗೀತಾಂಜಲಿ ಮನೆಕೆಲಸಗಾರ್ತಿಯಾಗಿಯೂ ಕೆಲಸ ಮಾಡುತ್ತಿದ್ದರು. ನಂತರ ಈ ಕೆಲಸವನ್ನು ಸರಿಯಾಗಿ ಮಾಡಲಾಗದೆ ಅಸಹಾಯಕಳಾಗಿ ರಾತ್ರಿಗಳನ್ನು ಬೀದಿ, ಉದ್ಯಾನವನದಲ್ಲಿ ಕಳೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಅನೇಕರು ಗೀತಾಳನ್ನು ಸೈಕೋ ಎಂದು ಕರೆಯಲು ಪ್ರಾರಂಭಿಸಿದ್ದರು.

 

2007 ರಲ್ಲಿ, ಗೀತಾಂಜಲಿ ದೆಹಲಿಯ ಹೌಜ್ ಖಾಸ್ ಗ್ರಾಮದಲ್ಲಿ ಕಾಣಿಸಿಕೊಂಡರು. 2008 ರಲ್ಲಿ ಬಿಡುಗಡೆಯಾದ ಮಧುರ್ ಭಂಡಾರ್ಕರ್ ಅವರ ಚಲನಚಿತ್ರ ಫ್ಯಾಶನ್ ಕೂಡ ಗೀತಾಂಜಲಿ ನಾಗ್ಪಾಲ್ ಅವರ ಜೀವನವನ್ನು ಆಧರಿಸಿದೆ. ಈ ಚಿತ್ರದಲ್ಲಿ ಕಂಗನಾ ರಣಾವತ್ ಪಾತ್ರವು ಸಂಪೂರ್ಣವಾಗಿ ಗೀತಾಂಜಲಿ ನಾಗ್ಪಾಲ್ ಅವರ ಜೀವನವನ್ನು ಆಧರಿಸಿದೆ. ಇಷ್ಟೆಲ್ಲಾ ಸೋಲನ್ನು ಕಂಡ ಗೀತಾಂಜಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ.

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link