65 ವರ್ಷದವರೆಗೂ ಐಟಂ ಡ್ಯಾನ್ಸ್ ಮಾಡಿ ಸೌತ್‌ ಸಿನಿರಂಗವನ್ನೇ ನಡುಗಿಸಿದ ನಟಿಯರಿವರು..!

Wed, 17 Jan 2024-4:02 pm,

TR ರಾಜಕುಮಾರಿ: 1953 ರ ದೇವದಾಸ್ ಚಿತ್ರದಿಂದ ಪಾದಾರ್ಪಣೆ ಮಾಡಿದ TR ರಾಜಕುಮಾರಿ ತಮಿಳು ಚಿತ್ರರಂಗದ ಮೊದಲ ಐಟಂ ಡ್ಯಾನ್ಸರ್. ತನ್ನ ನೃತ್ಯದ ಮೂಲಕ ತನ್ನ ಅಭಿಮಾನಿಗಳನ್ನು ಮೋಡಿ ಮಾಡಿದ ಕಾಲಿವುಡ್‌ನ ಮೊದಲ ಕನಸಿನ ಹುಡುಗಿ ಕೂಡ..  

ಜ್ಯೋತಿ ಲಕ್ಷ್ಮಿ: ಜ್ಯೋತಿಲಕ್ಷ್ಮಿ 1963 ರಲ್ಲಿ ಪೆರಿಯಾ ಇಡತು ಪೆನ್ ಚಿತ್ರದಲ್ಲಿ ಐಟಂ ಡ್ಯಾನ್ಸರ್ ಆಗಿ ಪಾದಾರ್ಪಣೆ ಮಾಡಿದರು. 65 ವರ್ಷ ವಯಸ್ಸಿನವರೆಗೂ ಐಟಂ ಡ್ಯಾನ್ಸ್ ಮಾಡಿದ ಏಕೈಕ ನಟಿ ಇವರು... ರಜನಿ ಜೊತೆ ಮುತ್ತು, ವಿಕ್ರಮ್ ಸೇತು ಮತ್ತು ಕಾರ್ತಿ ಅಭಿನಯದ ಸಿರುತೈ ಚಿತ್ರಗಳಲ್ಲಿ ಇವರು ಐಟಂ ಡ್ಯಾನ್ಸ್ ಮಾಡಿದ್ದಾರೆ..  

ಜಯಮಾಲಿನಿ: 1975ರಲ್ಲಿ ತೆರೆಕಂಡ ಡಾ.ಶಿವ ಚಿತ್ರದಲ್ಲಿ ಐಟಂ ಡ್ಯಾನ್ಸರ್ ಆಗಿ ಪಾದಾರ್ಪಣೆ ಮಾಡಿದ ಜಯಮಾಲಿನಿ, ನಟಿ ಜ್ಯೋತಿಲಕ್ಷ್ಮಿ ಅವರ ಸಹೋದರಿ. 1978 ರಲ್ಲಿ ಬಿಡುಗಡೆಯಾದ ಜಗನ್ಮೋಹಿನಿ ಚಿತ್ರದಲ್ಲಿ ಆಕರ್ಷಕ ಪಾತ್ರವನ್ನು ನಿರ್ವಹಿಸಿದ ನಂತರ ಅವರಿಗೆ ಗ್ಲಾಮರ್ ಪಾತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು..  

ಸಿಲ್ಕ್ ಸ್ಮಿತಾ: ಕಾಲಿವುಡ್ ನಲ್ಲಿ ಮರೆಯಲಾಗದ ಐಟಂ ಡ್ಯಾನ್ಸರ್ ಎಂದರೆ ಸಿಲ್ಕ್ ಸ್ಮಿತಾ. ಅವರು 1980 ರಲ್ಲಿ ಬಿಡುಗಡೆಯಾದ ವಂಡಿಚಕ್ಕರಂ ಚಿತ್ರದ ಮೂಲಕ ಪಾದಾರ್ಪಣೆ ಮಾಡಿ.. 1990 ರವರೆಗೆ ಕಾಲಿವುಡ್‌ನಲ್ಲಿ ಕನಸಿನ ಹುಡುಗಿಯಾಗಿದ್ದರು... ಇವರ ಐಟಂ ಡ್ಯಾನ್ಸ್ ಇದ್ದರೆ ಖಂಡಿತಾ ಚಿತ್ರ ಹಿಟ್ ಆಗುತ್ತೆ ಅನ್ನೋದು ಎಲ್ಲರ ಅಭಿಪ್ರಾಯ.. ಒಟ್ಟಿನಲ್ಲಿ ಸಿಲ್ಕ್ ಲಕ್ಕಿ ಹೀರೋಯಿನ್ ಆಗಿ ಸಿನಿರಂಗಕ್ಕೆ ಬಂದಿದ್ದರು.  

ಡಿಸ್ಕೋ ಶಾಂತಿ: ಡಿಸ್ಕೋ ಶಾಂತಿ 1983 ರ ವಸಂತಮ್ ವರುಗ ಚಿತ್ರದಲ್ಲಿ ಐಟಂ ಡ್ಯಾನ್ಸರ್ ಆಗಿ ಪಾದಾರ್ಪಣೆ ಮಾಡಿದರು. ಕಮಲ್, ರಜನಿಯಂತಹ ನಾಯಕ ನಟರೊಂದಿಗೆ ಕುಣಿದು ಕುಪ್ಪಳಿಸಿ ಸಿಲ್ಕ್ ಸ್ಮಿತಾ ಅವರಂತೆ  ದೊಡ್ಡ ಹೆಸರು ಮಾಡಿದ್ದಾರೆ..  

ನಮಿತಾ: ತಮಿಳು ಚಿತ್ರರಂಗದಲ್ಲಿ ತನ್ನ ಗ್ಲಾಮರ್‌ ಮೋಡಿಯಿಂದ ನಮಿತಾ ಕಡಿಮೆ ಅವಧಿಯಲ್ಲಿ ಪ್ರಸಿದ್ಧರಾದರು. ವಿಜಯ್ ಮತ್ತು ಅಜಿತ್‌ರಂತಹ ನಾಯಕ ನಟರ ಚಿತ್ರಗಳಲ್ಲಿನ ಅವರ ಅದ್ಭುತ ನೃತ್ಯವು ಹೆಚ್ಚು  ಹಲವಾರು ಚಲನಚಿತ್ರ ಅವಕಾಶಗಳನ್ನು ತಂದುಕೊಟ್ಟಿತು..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link