ಪಿಎಫ್ ಬಡ್ಡಿ ಮೇಲೆ ವಿಧಿಸುವ ತೆರಿಗೆ ವಾಪಸ್ ಇಲ್ಲ..!

Thu, 18 Feb 2021-4:36 pm,

ಭವಿಷ್ಯ ನಿಧಿಯಲ್ಲಿ 2.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ  ಕೊಡುಗೆಯ ಮೇಲೆ ತೆರಿಗೆ ವಿಧಿಸಲಾಗುತ್ತದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದ್ದರು. ಈ ನಿಯಮವು 1 ಏಪ್ರಿಲ್ 2021 ರಿಂದ ಅನ್ವಯವಾಗುತ್ತದೆ. ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆಯಾದ ನಂತರ, ಸರ್ಕಾರವು ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಅಥವಾ ಮತ್ತೊಮ್ಮೆ  ಬಗ್ಗೆ ಪರಿಗಣಿಸಬೇಕು ಎಂಬ ಬೇಡಿಕೆ ಕೇಳಿ ಬಂದಿತ್ತು.  ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯುವುದು ಕಷ್ಟ ಎನ್ನಲಾಗಿದೆ. ಏಕೆಂದರೆ ಪಿಎಫ್  ನಲ್ಲಿ 2.5ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡುವವರನ್ನ ಗುರುತಿಸುವ ಕೆಲಸ ಈಗಾಗಲೇ ಆರಂಭವಾಗಿದೆ.

'ಸರ್ಕಾರದ ಮೂಲಗಳ ಪ್ರಕಾರ, ಕೆಲವರು ಪಿಎಫ್ ಕೊಡುಗೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಕೆಲವರು  ತಿಂಗಳಿಗೆ 1 ಕೋಟಿ ರೂಪಾಯಿಗಳನ್ನು ಪಿಎಫ್ ಖಾತೆಗಳಲ್ಲಿ ಜಮಾ ಮಾಡುತ್ತಿದ್ದು, ಈ  ಮೂಲಕ ತೆರಿಗೆ ವಿನಾಯಿತಿ ಮತ್ತು ಹೆಚ್ಚಿನ ಬಡ್ಡಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದರು.   ಪಿಎಫ್ ದುಡಿಯುವ ವರ್ಗದ  ಜೀವಿತಾವಧಿಯ ಉಳಿತಾಯವಾಗಿದೆ.  ಮತ್ತು  ಈ ವರ್ಗದ ಜನರಿಗೆ ಇದರ ಲಾಭ ದೊರಕಿಸಿಕೊಡುವ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನ ಕೈಗೊಳ್ಳಲಾಗುವುದು ಎಂದು, ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು  ಹೇಳಿದ್ದಾರೆ.    

ಪಿಎಫ್ ಖಾತೆಗಳಲ್ಲಿ ದೊಡ್ಡ ಮೊತ್ತದ ಠೇವಣಿ ಇಟ್ಟು, ತೆರಿಗೆ ವಿನಾಯಿತಿಯ ಲಾಭ ಪಡೆಯುತ್ತಿರುವವರನ್ನು ಗುರುತಿಸಲು ಸರ್ಕಾರ  ಈ ಹೆಜ್ಜೆ ಇಟ್ಟಿದೆ.  ಇಪಿಎಫ್ ಖಾತೆಗಳಲ್ಲಿ ತಿಂಗಳಿಗೆ 1 ಕೋಟಿ ಮತ್ತು 2 ಕೋಟಿ ಹಣವನ್ನು ಠೇವಣಿ ಇಡುವವರೂ ಇದ್ದಾರೆ. ಇದರ ಪರಿಣಾಮ ಇವರಿಗೆ ತೆರಿಗೆಯಿಂದ ವಿನಾಯಿತಿ ಸಿಗುತ್ತಿದೆ. ಈ ಕಾರಣದಿಂದಾಗಿ ಸರ್ಕಾರವು ನಷ್ಟದಲ್ಲಿದೆ. ಈ ಹಿನ್ನೆಲೆಯಲ್ಲಿ  ಪಿಎಫ್ ಖಾತೆಯಲ್ಲಿ ವಾರ್ಷಿಕವಾಗಿ 2.5 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಜಮಾ ಮಾಡುವವರ ಮೇಲೆ ತೆರಿಗೆ ವಿಧಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ.  

ಆದಾಯ ತೆರಿಗೆ ಮಿತಿ 80 ಸಿ ಅಡಿಯಲ್ಲಿ ಪಿಎಫ್‌ಗೆ ಕೊಡುಗೆ ನೀಡುವ ಜನರ ಮೇಲೆ ಇದು ಪರಿಣಾಮ ಬೀರುವುದಿಲ್ಲ, ಏಕೆಂದರೆ ಇದರ ಮಿತಿ ಕೇವಲ 1.5 ಲಕ್ಷ ರೂಪಾಯಿಗಲಾಗಿರುತ್ತವೆ. ಅವರು E-E-E ಪ್ರಯೋಜನವನ್ನು ಪಡೆಯುವುದನ್ನು ಮುಂದುವರೆಸುತ್ತಾರೆ, ಅಂದರೆ, ಹೂಡಿಕೆ, ಬಡ್ಡಿ ಮತ್ತು ಮೆಚ್ಯುರಿಟಿ ಮೊತ್ತಕ್ಕೆ ಯಾವುದೇ ತೆರಿಗೆ ಅನ್ವಯವಾಗುವುದಿಲ್ಲ. ಆದ್ದರಿಂದ ಅವರು ಚಿಂತೆ ಮಾಡುವ ಅಗತ್ಯವಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link