ಪಾನಿಪೂರಿಗೂ ಮಹಾಭಾರತಕ್ಕೂ ಇದೆಯಂತೆ ನಂಟು ; ಪಾನಿಪೂರಿಯ ಆವಿಷ್ಕಾರ ಮಾಡಿದ್ದೇ ದ್ರೌಪದಿಯಂತೆ

Thu, 13 May 2021-3:52 pm,

ದ್ರೌಪದಿ  (Draupadi) ಮೊದಲು ತನ್ನ ಗಂಡಂದಿರೊಂದಿಗೆ ಅತ್ತೆಯ ಮನೆಗೆ ಬಂದಾಗ, ಕುಂತಿ ಪಾಂಡವರಿಗಾಗಿ ಅಡುಗೆ ಮಾಡುವಂತೆ ದ್ರೌಪದಿಯಲ್ಲಿ ಕೇಳುತ್ತಾಳಂತೆ. ಆಗ ದ್ರೌಪದಿ ತನ್ನ ಪ್ರತಿಭೆಯನ್ನು ಉಪಯೋಗಿಸಿ, ಪಾನಿಪೂರಿ ಅಥವಾ ಗೋಲ್ ಗಪ್ಪಾವನ್ನು ಸಿದ್ದಪಡಿಸುತ್ತಾಳಂತೆ. ಇದನ್ನು ತಿಂದು ಪಾಂಡವರು ಕೂಡಾ ಬಹಳ ಸಂತೋಷಗೊಂಡಿದ್ದರಂತೆ. ಇದಾದ ನಂತರ ಕುಂತಿ ದ್ರೌಪದಿಗೆ ಅಮರತ್ವದ ವರವನ್ನು ನೀಡುತ್ತಾಳಂತೆ. (Mahabharata Facts) 

ಗ್ರೀಕ್ ಇತಿಹಾಸಕಾರರಾದ  Megasthenes ಮತ್ತು ಚೀನಾದ ಬೌದ್ಧ ಯಾತ್ರಿ Faxian ಮತ್ತು  Xuanzang ಅವರ ಪುಸ್ತಕಗಳಲ್ಲಿ, ಪಾನಿಪೂರಿಯನ್ನು ಮೊದಲು ಗಂಗಾ ತೀರದ ಮಗಧ ಸಾಮ್ರಾಜ್ಯದಲ್ಲಿ ತಯಾರಿಸಲಾಗಿತ್ತು. 

ಪಾನಿ ಪುರಿ ಮೊದಲಿಗೆ ಮಗಧದಿಂದ ಪ್ರಾರಂಭವಾಯಿತು ಎಂದು ಕೂಡಾ ಹೇಳಲಾಗುತ್ತದೆ. ಅಂದಿನ ಮಗಧವನ್ನು ಇಂದು ದಕ್ಷಿಣ ಬಿಹಾರ ಎಂದು ಕರೆಯಲಾಗುತ್ತದೆ. ಆ ಸಮಯದಲ್ಲಿ ಅದರ ಹೆಸರು ಏನೆಂದು ಯಾರಿಗೂ ತಿಳಿದಿಲ್ಲ. ಆದರೂ, ಅದರ ಪ್ರಾಚೀನ ಹೆಸರು  'ಫುಲ್ಕಿ' ಎಂದು ಉಲ್ಲೇಖಿಸಲಾಗಿದೆ.   

ಹೆಲ್ತ್ ಮೇನಿಯಾದ ಚೀಫ್ ಡಯಟೀಶಿಯನ್ ಮೇಘ ಮುಖಿಜಾ  ಪ್ರಕಾರ, ಗೋಲ್ಗಪ್ಪ ಮತ್ತು ಅದರ ನೀರನ್ನು ಮನೆಯಲ್ಲಿಯೇ ತಯಾರಿಸಿ ತಿಂದರೆ, ದೇಹ ತೂಕ ಕಡಿಮೆ (Weight Loss) ಮಾಡಬಹುದಂತೆ. ಒಂದು ಪಾನಿಪೂರಿಯಲ್ಲಿ, ಕೇವಲ 36 ಕ್ಯಾಲೊರಿಗಳಿವೆ. 6 ಗೊಲ್ಗಪ್ಪಗಳ 1 ತಟ್ಟೆಯಲ್ಲಿ 216 ಕ್ಯಾಲೊರಿಗಳಿರುತ್ತವೆ. ಪಾನಿಪೂರಿಯ ಮಸಾಲೆಯುಕ್ತ ನೀರು ಕುಡಿದ ನಂತರ, ಬಹಳ ಸಮಯದವರೆಗೆ  ಹಸಿವು ಇರುವುದಿಲ್ಲ. ಆದರೆ ನೆನಪಿಡಿ, ಪೂರಿ ಮತ್ತು ಪಾನಿ ಎರಡನ್ನೂ ಮನೆಯಲ್ಲಿಯೇ ತಯಾರಿಸಬೇಕಾಗುತ್ತದೆ.   (Golgappa Dieting For Weight Loss).

ZEENEWS TRENDING STORIES

By continuing to use the site, you agree to the use of cookies. You can find out more by Tapping this link