ಟೀಂ ಇಂಡಿಯಾದ unlucky ಆಟಗಾರರು ಇವರೇ ! ಎದುರಾಳಿಗಳ ಬೆವರಿಳಿಸುವಲ್ಲಿ ಎತ್ತಿದ ಕೈಯಾದರೂ ವಿಶ್ವ ಕಪ್‌ನಿಂದ ಹೊರಕ್ಕೆ

Fri, 22 Sep 2023-12:23 pm,

ಅಕ್ಟೋಬರ್ 5 ರಿಂದ ನಡೆಯುವ ODI ವಿಶ್ವಕಪ್ (ODI World Cup-2023)ಆತಿಥ್ಯವನ್ನು ಭಾರತ ವಹಿಸಲಿದೆ. ಬಿಸಿಸಿಐ ಈ ಜಾಗತಿಕ ಕ್ರಿಕೆಟ್ ಟೂರ್ನಿಗೆ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದೊಂದಿಗೆ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಏತನ್ಮಧ್ಯೆ, ವಿಶ್ವಕಪ್ ಮಾತ್ರವಲ್ಲದೆ ಏಷ್ಯನ್ ಕ್ರೀಡಾಕೂಟಕ್ಕೂ ಅರ್ಹತೆ ಪಡೆಯದ ಮೂವರು ಆಟಗಾರರಿದ್ದಾರೆ.

ಪಟ್ಟಿಯಲ್ಲಿ ಮೊದಲ ಹೆಸರು ಶಿಖರ್ ಧವನ್ ಅವರದ್ದು. ಧವನ್ ವಿಶ್ವಕಪ್‌ಗೆ ಮಾತ್ರವಲ್ಲ ಏಷ್ಯನ್ ಗೇಮ್ಸ್‌ಗೆ ಆಯ್ಕೆ ಮಾಡಿದ ತಂಡದಲ್ಲಿಯೂ ಸ್ಥಾನ ಪಡೆದಿಲ್ಲ. ಏಷ್ಯನ್ ಗೇಮ್ಸ್‌ನಲ್ಲಿ ಅವರು ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ  ಆ ನಿರೀಕ್ಷೆ ಸುಳ್ಳಾಗಿದೆ. 

37 ವರ್ಷದ ಧವನ್ ಇದುವರೆಗೆ 167 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 17 ಶತಕಗಳ ನೆರವಿನಿಂದ 6793 ರನ್ ಗಳಿಸಿದ್ದಾರೆ. ಇದಲ್ಲದೆ, ಅವರು ಭಾರತಕ್ಕಾಗಿ 68 ಟಿ20 ಮತ್ತು 34 ಟೆಸ್ಟ್ ಪಂದ್ಯಗಳನ್ನು ಸಹ ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 7 ಶತಕ ಮತ್ತು 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಡಿಸೆಂಬರ್ 2022 ರಲ್ಲಿ ಅವರು ಕೊನೆಯ ಬಾರಿಗೆ ಟೀಂ ಇಂಡಿಯಾ ಪರ ಮೈದಾನಕ್ಕೆ ಇಳಿದಿದ್ದರು. 

ಪಟ್ಟಿಯಲ್ಲಿ ಎರಡನೇ ಹೆಸರು ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಅವರದ್ದು. ಚಹಲ್ ಅವರನ್ನು ವಿಶ್ವಕಪ್ ಅಥವಾ ಏಷ್ಯನ್ ಗೇಮ್ಸ್‌ಗಾಗಿ ಆಯ್ಕೆ ಮಾಡಲಿಲ್ಲ. ಚಹಾಲ್‌ ಬದಲಿಗೆ ಬೌಲರ್ ಕುಲದೀಪ್ ಯಾದವ್‌ಗೆ ಆದ್ಯತೆ ನೀಡಲಾಗಿದೆ. 

ಚಹಲ್ ಅವರ ವೃತ್ತಿಜೀವನದ ದಾಖಲೆಯ ಬಗ್ಗೆ ಮಾತನಾಡುವುದಾದರೆ,  ಅವರು ಇಲ್ಲಿಯವರೆಗೆ 72 ODI ಮತ್ತು 80 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಮಾದರಿಯಲ್ಲಿ ಆಡುವ ಅವಕಾಶ ಅವರಿಗೆ ಸಿಗಲಿಲ್ಲ. ಹರಿಯಾಣ ಮೂಲದ ಚಹಾಲ್, ಏಕದಿನ ಪಂದ್ಯದಲ್ಲಿ ಒಟ್ಟು 121 ಮತ್ತು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 96 ವಿಕೆಟ್‌ಗಳನ್ನು ಪಡೆದಿದ್ದಾರೆ.  

ಭಾರತದ ವೇಗಿ ಭುವನೇಶ್ವರ್ ಕುಮಾರ್ ಸ್ಥಿತಿಯೂ ಇದೇ. ತಮ್ಮ ಅತ್ಯುತ್ತಮ ಸ್ವಿಂಗ್‌ನಿಂದ ಬ್ಯಾಟ್ಸ್‌ಮನ್‌ಗಳ ಬೆವರಿಳಿಸಿದ ಭುವನೇಶ್ವರ್ ಕುಮಾರ್,   ಏಷ್ಯನ್ ಗೇಮ್ಸ್ ಅಥವಾ ವಿಶ್ವಕಪ್ ಟೀಂ ನಲ್ಲಿ ಸ್ಥಾನ ಪಡೆದಿಲ್ಲ. 

ಯುಪಿ ಮೂಲದ  ಭುವನೇಶ್ವರ್ 21 ಟೆಸ್ಟ್, 121 ಏಕದಿನ ಮತ್ತು 87 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 63, ಏಕದಿನ ಪಂದ್ಯದಲ್ಲಿ 141 ಮತ್ತು ಟಿ20 ಅಂತರರಾಷ್ಟ್ರೀಯ ಸ್ವರೂಪದಲ್ಲಿ 90 ವಿಕೆಟ್‌ಗಳನ್ನು ಪಡೆದಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link