ಏಪ್ರಿಲ್ 1ರಿಂದ ಬದಲಾಗಲಿವೆ ಈ ಪ್ರಮುಖ 4 ನಿಯಮಗಳು; ಏನೆಂದು ತಿಳಿಯಿರಿ
ಏಪ್ರಿಲ್ 1ರಿಂದ ವಿದೇಶಿ ವಿನಿಮಯ-ವ್ಯಾಪಾರ ನಿಧಿಗಳಲ್ಲಿ (ETF) ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸುವಂತೆ ಬಂಡವಾಳ ಮಾರುಕಟ್ಟೆ ನಿಯಂತ್ರಕ ಸೆಬಿ ಮ್ಯೂಚುವಲ್ ಫಂಡ್ ಹೌಸ್‌ಗಳಿಗೆ ನಿರ್ದೇಶನ ನೀಡಿದೆ. ಮಾರ್ಚ್ 21ರ ಹೊತ್ತಿಗೆ ಫಂಡ್ ಉದ್ಯಮವು 8,311 ಕೋಟಿ ರೂ.ಗಳ ಮಿತಿಗಿಂತ ಹೆಚ್ಚು ಹೂಡಿಕೆಯಾಗಿದೆ.
ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಏಪ್ರಿಲ್ 1ರಂದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಖಾತೆಗಳಿಗೆ ಸುಧಾರಿತ ಭದ್ರತಾ ವ್ಯವಸ್ಥೆಯನ್ನು ತರುತ್ತಿದೆ. ಇದಕ್ಕಾಗಿ NPSನ ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಯನ್ನು ಪ್ರವೇಶಿಸುವ ಎಲ್ಲಾ ಪಾಸ್ವರ್ಡ್ ಆಧಾರಿತ ಚಂದಾದಾರರು 2 ಬಾರಿ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ. ಇದು ಇಲ್ಲದೆ ನೀವು ನಿಮ್ಮ ಖಾತೆಗೆ ಲಾಗಿನ್ ಮಾಡಲು ಸಾಧ್ಯವಾಗುವುದಿಲ್ಲ.
ವಿಮಾ ಪಾಲಿಸಿಗಳನ್ನು ಡಿಜಿಟಲೀಕರಣಗೊಳಿಸುವುದನ್ನು IRDA ಕಡ್ಡಾಯಗೊಳಿಸಿದೆ. ಇದರ ಪ್ರಕಾರ ಜೀವ, ಆರೋಗ್ಯ ಮತ್ತು ಸಾಮಾನ್ಯ ವಿಮೆ ಸೇರಿದಂತೆ ಎಲ್ಲಾ ಪಾಲಿಸಿಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ನೀಡಲಾಗುತ್ತದೆ. ಷೇರುಗಳನ್ನು ಖರೀದಿಸಲು ಡಿಮ್ಯಾಟ್ ಖಾತೆ ಹೇಗೆ ಬೇಕೋ ಅದೇ ರೀತಿ ಇದು ಕಾರ್ಯನಿರ್ವಹಿಸುತ್ತದೆ. ಇದು ಇಲ್ಲದೆ ಯಾವುದೇ ಪಾಲಿಸಿಯನ್ನು ನೀಡಲಾಗುವುದಿಲ್ಲ.
ಫಾಸ್ಟ್ಟ್ಯಾಗ್ ಗ್ರಾಹಕರಿಗೆ KYC ಅಪ್‌ಡೇಟ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31 ಆಗಿರುತ್ತದೆ. ಈ ದಿನಾಂಕದೊಳಗೆ ನೀವು KYCಯನ್ನು ಅಪ್‌ಡೇಟ್ ಮಾಡದಿದ್ದರೆ ಅದು ಏಪ್ರಿಲ್ 1ರಿಂದ ಕ್ಲೋಸ್ ಆಗಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ʼಒಂದು ವಾಹನ ಒಂದು ಫಾಸ್ಟ್ಯಾಗ್ʼ ಪ್ರಾರಂಭಿಸಿದೆ. ಇದರಡಿ KYC ಇಲ್ಲದ ಫಾಸ್ಟ್ಟ್ಯಾಗ್ಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ.