2024ರ ಟಿ20 ವಿಶ್ವಕಪ್’ನಲ್ಲಿ ಯಾರಿಲ್ಲದಿದ್ದರೂ ಈ ನಾಲ್ವರು ಇದ್ದೇ ಇರ್ತಾರೆ… ಇವರಿಗೆ ಸ್ಥಾನ ಖಚಿತ!
ಹೊಸ ವರ್ಷ, ಹೊಸ ನಿರೀಕ್ಷೆಗಳ ಜೊತೆಗೆ ಕ್ರಿಕೆಟ್ ಮೈದಾನದಲ್ಲಿ ಹೊಸ ಇತಿಹಾಸವನ್ನು ಬರೆಯಲು ಟೀಂ ಇಂಡಿಯಾ ಸಿದ್ಧವಾಗುತ್ತಿದೆ. ಭಾರತವಲ್ಲದೆ ಈ ವರ್ಷ ಹಲವು ತಂಡಗಳು ಟಿ20 ವಿಶ್ವಕಪ್ ಆಡಲಿವೆ. ಅದರಲ್ಲೂ ಈ ವರ್ಷ ಎಲ್ಲರ ಕಣ್ಣು 4 ಭಾರತೀಯ ಆಟಗಾರರ ಮೇಲಿದೆ. ಅವಕಾಶ ಸಿಕ್ಕರೆ ಈ ನಾಲ್ವರು ಅಮೆರಿಕ ಮತ್ತು ವೆಸ್ಟ್ ಇಂಡೀಸ್’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್’ನಲ್ಲಿ ಸಂಚಲನ ಮೂಡಿಸೋದು ಪಕ್ಕಾ.
ಈ ನಾಲ್ವರಲ್ಲಿ ಮೊದಲ ಹೆಸರು ಶುಭ್ಮನ್ ಗಿಲ್. 2023ರಲ್ಲೂ ಶುಭ್‌ಮನ್ ಸಂಚಲನ ಮೂಡಿಸಿದ್ದರು. ಅಷ್ಟೇ ಅಲ್ಲದೆ, ಎಲ್ಲಾ ಸ್ವರೂಪಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದರು. 2023 ರಲ್ಲಿ ನಡೆದ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ಶುಭಮನ್ 13 ಪಂದ್ಯಗಳಲ್ಲಿ ಒಂದು ಶತಕ ಸೇರಿದಂತೆ ಒಟ್ಟು 312 ರನ್ ಸೇರಿಸಿದ್ದರು.
2023ರ ಟಿ20ಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ್ದ ಸೂರ್ಯಕುಮಾರ್ ಯಾದವ್ 2024ರಲ್ಲೂ ಅಬ್ಬರಿಸಲು ಸಿದ್ಧರಾಗಿದ್ದಾರೆ. ಕಳೆದ ವರ್ಷ 18 ಪಂದ್ಯಗಳಲ್ಲಿ 2 ಶತಕ ಮತ್ತು 5 ಅರ್ಧ ಶತಕಗಳ ಸಹಾಯದಿಂದ 733 ರನ್ ಗಳಿಸಿದ್ದರು.
'ಮಿಸ್ಟರ್ ಫಿನಿಶರ್' ಖ್ಯಾತಿಯ ರಿಂಕು ಸಿಂಗ್ ಅವರನ್ನು ಐಪಿಎಲ್’ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. 2023 ರಲ್ಲಿ, ರಿಂಕು ಭಾರತದ ಪರ 12 T20 ಪಂದ್ಯಗಳನ್ನು ಆಡಿದ್ದು, 180.68 ರ ಸ್ಟ್ರೈಕ್ ರೇಟ್’ನಲ್ಲಿ ಸುಮಾರು 65 ರ ಸರಾಸರಿಯಲ್ಲಿ 262 ರನ್ ಗಳಿಸಿದ್ದರು. ಈ ಅವಧಿಯಲ್ಲಿ ಅವರ ಅತ್ಯುತ್ತಮ ಸ್ಕೋರ್ ಔಟಾಗದೆ 68 ರನ್ ಆಗಿತ್ತು.