ಈ 5 ಬೌಲರ್‌ಗಳು ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು No-ball ಹಾಕಿಲ್ಲ..!
ಪಾಕಿಸ್ತಾನದ ಅತ್ಯಂತ ಯಶಸ್ವಿ ನಾಯಕ ಇಮ್ರಾನ್ ಖಾನ್ ಅವರು ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ನೋಬಾಲ್ ಬೌಲ್ ಮಾಡದ ವಿಶ್ವದ 5 ಬೌಲರ್‌ಗಳಲ್ಲಿ ಒಬ್ಬರು. ಇಮ್ರಾನ್ ಖಾನ್ 1982ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕರಾದರು. 1992ರಲ್ಲಿ ಇಮ್ರಾನ್ ನಾಯಕತ್ವದಲ್ಲಿ ಪಾಕಿಸ್ತಾನ ತನ್ನ ಏಕೈಕ ಮತ್ತು ಮೊದಲ ODI ವಿಶ್ವಕಪ್ ಗೆದ್ದಿತು. ಪಾಕಿಸ್ತಾನ ಪರ 88 ಟೆಸ್ಟ್ ಪಂದ್ಯಗಳಲ್ಲಿ 3,807 ರನ್ ಗಳಿಸಿರುವ ಇವರು 362 ವಿಕೆಟ್ ಪಡೆದಿದ್ದಾರೆ.
ಈ ಪಟ್ಟಿಯಲ್ಲಿ ಇಂಗ್ಲೆಂಡ್‌ನ ದಿಗ್ಗಜ ಆಲ್‌ರೌಂಡರ್ ಇಯಾನ್ ಬೋಥಮ್ ಹೆಸರೂ ಸೇರಿದೆ. ಬೋಥಮ್ ತಮ್ಮ 16 ವರ್ಷಗಳ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್ ಅನ್ನು ಎಸೆದಿಲ್ಲ. ಬೋಥಮ್ ಅವರು 102 ಟೆಸ್ಟ್ ಪಂದ್ಯಗಳಲ್ಲಿ 383 ವಿಕೆಟ್‌ಗಳನ್ನು ಕಬಳಿಸಿದರು ಮತ್ತು ಅವರು ಬ್ಯಾಟಿಂಗ್ ನಲ್ಲಿ 5,200 ರನ್ ಗಳಿಸಿದ್ದಾರೆ. ಅದೇರೀತಿ 116 ಏಕದಿನ ಪಂದ್ಯಗಳಲ್ಲಿ ಬೋಥಮ್ ಅವರು 2,113 ರನ್ ಗಳಿಸಿದ್ದು, 145 ವಿಕೆಟ್ ಗಳನ್ನು ಪಡೆದಿದ್ದಾರೆ.
ಈ ಪಟ್ಟಿಯಲ್ಲಿ ಡೆನಿಸ್ ಲಿಲ್ಲಿ ಅವರ ಹೆಸರೂ ಬರುತ್ತದೆ. ಲಿಲ್ಲಿ ಕೂಡ ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ನೋ ಬಾಲ್ ಬೌಲ್ ಮಾಡಿಲ್ಲ. ಅವರು 70 ಟೆಸ್ಟ್ ಪಂದ್ಯಗಳಲ್ಲಿ 355 ವಿಕೆಟ್ ಪಡೆದಿದ್ದಾರೆ. ಅವರು ಆಸ್ಟ್ರೇಲಿಯ ಪರ 63 ODI ಪಂದ್ಯಗಳನ್ನು ಆಡಿದ್ದು, ಇದರಲ್ಲಿ 103 ವಿಕೆಟ್‌ಗಳನ್ನು ಪಡೆದಿದ್ದಾರೆ.
ವೆಸ್ಟ್ ಇಂಡೀಸ್ ನ ಮಾಜಿ ಕ್ರಿಕೆಟಿಗ ಲ್ಯಾನ್ಸ್ ಗಿಬ್ಸ್ ಕೂಡ ತಮ್ಮ ವೃತ್ತಿ ಜೀವನದಲ್ಲಿ ಒಂದೇ ಒಂದು ನೋ ಬಾಲ್ ಬೌಲ್ ಮಾಡಿಲ್ಲ. ಈ ಆಫ್-ಸ್ಪಿನ್ನರ್ ವೆಸ್ಟ್ ಇಂಡೀಸ್‌ಗಾಗಿ 79 ಟೆಸ್ಟ್ ಮತ್ತು 3 ODIಗಳನ್ನು ಆಡಿದ್ದಾರೆ. ಇದರಲ್ಲಿ ಅವರು ಒಟ್ಟು 311 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇವರು ಒಂದೇ ಒಂದು ನೋ ಬಾಲ್ ಬೌಲ್ ಮಾಡದ ವಿಶ್ವದ ಏಕೈಕ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
1983ರಲ್ಲಿ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದುಕೊಟ್ಟ ನಾಯಕ ಕಪಿಲ್ ದೇವ್ ಕೂಡ ತಮ್ಮ ವೃತ್ತಿಜೀವನದಲ್ಲಿ ಒಂದೇ ಒಂದು ನೋ ಬಾಲ್ ಅನ್ನು ಎಸೆಯಲಿಲ್ಲ. ಕಪಿಲ್ ಭಾರತ ಪರ 131 ಟೆಸ್ಟ್ ಮತ್ತು 225 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಬ್ಯಾಟಿಂಗ್‌ನಲ್ಲಿ ಕ್ರಮವಾಗಿ 5,248 ಮತ್ತು 3,783 ರನ್‌ಗಳನ್ನು ಅದೇ ಸಂಖ್ಯೆಯ ಪಂದ್ಯಗಳಲ್ಲಿ ಗಳಿಸಿದ್ದಾರೆ. ಅದೇ ರೀತಿ ಬೌಲಿಂಗ್ ನಲ್ಲಿ ಅವರು ಟೆಸ್ಟ್ ನಲ್ಲಿ 434 ಮತ್ತು ಏಕದಿನ ಪಂದ್ಯಗಳಲ್ಲಿ 253 ವಿಕೆಟ್ ಗಳನ್ನು ಪಡೆದಿದ್ದಾರೆ.