ಬೆಳಗಿನ ಉಪಾಹಾರಕ್ಕಾಗಿ ಸೇವಿಸುವ ಈ 5 ಆಹಾರಗಳು ಕರುಳನ್ನು ಸ್ವಚ್ಛವಾಗಿಡುತ್ತವೆ! ಆರೋಗ್ಯಕರ ಉಪಹಾರದೊಂದಿಗೆ ಆರಂಭವಾಗಲಿ ದಿನ

Mon, 08 Nov 2021-7:51 pm,

ಬೆಳಗಿನ ಉಪಹಾರ ಪ್ರಮಾಣದಲ್ಲಿ ಹೆಚ್ಚಾಗಿರುವುದು ಮಾತ್ರವಲ್ಲ, ಆರೋಗ್ಯಕರವಾಗಿರುವುದು ಸಹ ಮುಖ್ಯವಾಗಿದೆ.  ಆದ್ದರಿಂದ ಬೆಳಿಗ್ಗೆ ಆರೋಗ್ಯಕರ ಸಲಾಡ್ ಅನ್ನು ಆರಿಸಿಕೊಳ್ಳಬಹುದು. ಇದಕ್ಕಾಗಿ ಮೊಳಕೆ ಕಾಳು, ಮೆಂತ್ಯ, ಟೊಮೇಟೊ, ಸೌತೆಕಾಯಿ, ಒಣದ್ರಾಕ್ಷಿ, ಆಕ್ರೋಟ್, ಹಸಿರು ಮೆಣಸಿನಕಾಯಿ, ಒಂದು ಚಮಚ ಕುಂಬಳಕಾಯಿ ಸಿಪ್ಪೆ ಸುಲಿದ ಬೀಜಗಳು, ಪಾಲಕ್ ಮತ್ತು ಪುದೀನ ಎಲೆಗಳನ್ನು ಬೆರೆಸಿ ಆರೋಗ್ಯಕರ ಸಲಾಡ್ ತಯಾರಿಸಬಹುದು. ನೀವು ಬಯಸಿದರೆ, ಅರ್ಧ ಬೀಟ್ರೂಟ್ ಮತ್ತು ಕ್ಯಾರೆಟ್ ಅನ್ನು ಸಹ ತಿನ್ನಬಹುದು. ನಿಮ್ಮ ಕರುಳಿನ ಜೊತೆಗೆ, ಈ ಸಲಾಡ್ ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.  

ಒಂದೇ ರೀತಿಯ ಆಹಾದಿಂದ ಬೇಸರಗೊಂಡಿದ್ದರೆ ಆಹಾರದಲ್ಲಿ , ಬದಲಾವಣೆಗಳನ್ನು ಮಾಡುವುದು ಮುಖ್ಯವಾಗಿರುತ್ತದೆ. ಆದ್ದರಿಂದ ನೀವು ಪರ್ಯಾಯ ಆಯ್ಕೆಗಳಿಗೆ ಹೋಗಬೇಕು. ನೀವು ಒಂದು ದಿನ ಹೊರತುಪಡಿಸಿ ಒಂದು ದಿನ ಪೋಹಾ, ಉಪ್ಮಾ ಮತ್ತು ಗಂಜಿ ಸೇವಿಸಬಹುದು. ಇದರ ಹೊರತಾಗಿ, ಗೋಧಿ, ಜೋಳ ಮತ್ತು ರಾಗಿ ಗಂಜಿ ತಿಂದರೆ ಫಿಟ್ ಮತ್ತು ಆರೋಗ್ಯಕರವಾಗಿರುತ್ತೀರಿ.

ನೀವು ಬೆಳಿಗ್ಗೆ ಚಹಾವನ್ನು ಕುಡಿಯಲು ಇಷ್ಟಪಡುತ್ತಿದ್ದರೆ, ಈ ಅಭ್ಯಾಸವನ್ನು ಬದಲಾಯಿಸುವುದು ಒಳ್ಳೆಯದು.  ಇದರ ಬದಲಾಗಿ ಗ್ರೀನ್ ಟೀ, ಬ್ಲಾಕ್ ಕಾಫಿ, ಅರ್ಲ್ ಗ್ರೇ ಟೀಗಳನ್ನೂ  ಪ್ರಯತ್ನಿಸಬಹುದು. ಹಾಲು ಮತ್ತು ಸಕ್ಕರೆ ಇಲ್ಲದಿರುವುದರಿಂದ ಈ ಮೂರು ವಸ್ತುಗಳು ಆರೋಗ್ಯಕರವಾಗಿರುತ್ತವೆ. ಅವುಗಳನ್ನು ಡಿಟಾಕ್ಸ್ ಪಾನೀಯಗಳು ಎಂದೂ ಕರೆಯುತ್ತಾರೆ ಏಕೆಂದರೆ ಅವು ನಿಮ್ಮ ಕರುಳನ್ನು ಸ್ವಚ್ಛಗೊಳಿಸಲು ಸಹ ಕೆಲಸ ಮಾಡುತ್ತವೆ.

ನೀವು ಬೆಳಿಗ್ಗೆ ಎದ್ದ ನಂತರ ಹಾಲು ಕುಡಿಯಲು ಇಷ್ಟಪಡುವವರಾಗಿದ್ದರೆ, ನೀವು ಹಾಲನ್ನು ಮಾತ್ರ ಕುಡಿಯಬಾರದು ಎಂಬುದು \ತಿಳಿದಿರಲಿ. ಹಾಲು ಕುಡಿಯುವಾಗ ಅದಕ್ಕೆ ಸ್ವಲ್ಪ ಕೇಸರಿ ಮತ್ತು ಏಲಕ್ಕಿಯನ್ನು ಸೇರಿಸಬಹುದು ಅಥವಾ ಈ ಎರಡು ವಸ್ತುಗಳನ್ನು ಬೆರೆಸಿ ಕುಡಿಯಬಹುದು. ಸಕ್ಕರೆಯ ಬದಲಿಗೆ ಬೆಲ್ಲವನ್ನು ಸೇರಿಸಿದರೆ ಒಳ್ಳೆಯದು. ಬೆಲ್ಲವು  ಕರುಳನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link