ವಿದೇಶಿಯರಿಗೂ ಬಲು ಪ್ರಿಯ ಪನೀರ್‌ನ ಈ 8 ಫೇಮಸ್ ರೆಸಿಪೀಸ್
ಪನೀರ್ ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಾಗಾಗಿಯೇ ವೈದ್ಯರು ಪನೀರ್ ಸೇವಿಸುವಂತೆ ಶಿಫಾರಸ್ಸು ಮಾಡುತ್ತಾರೆ.
ಪನೀರ್‌ನಿಂದ ಹಲವು ಖಾದ್ಯಗಳನ್ನು ತಯಾರಿಸಲಾಗುತ್ತದೆ. ಅವುಗಳಲ್ಲಿ ಕೆಲವು ಖಾದ್ಯಗಳು ನಮ್ಮ ಭಾರತೀಯರನ್ನಷ್ಟೇ ಅಲ್ಲ ವಿದೇಶಿಯರನ್ನು ಸಹ ಮೋಡಿ ಮಾಡಿದೆ. ಅಂತಹ 8 ಖಾದ್ಯಗಳ ಬಗ್ಗೆ ಈ ಫೋಟೋ ಗ್ಯಾಲರಿಯಲ್ಲಿ ತಿಳಿಯೋಣ...
ಪನೀರ್ ಕೋಫ್ತಾ: ತಿನ್ನಲು ಬಲು ರುಚಿಯಾದ ಪನೀರ್ ಕೋಫ್ತಾವನ್ನು ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಷ್ಟೇ ತಯಾರಿಸಲಾಗುತ್ತದೆ.
ಪನೀರ್ ಸಲಾಡ್: ಪನೀರ್ ಸಲಾಡ್ ತುಂಬಾ ಆರೋಗ್ಯಕರ ಸಲಾಡ್ ಆಗಿದ್ದು, ಇದರ ಸೇವನೆಯು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ಪನೀರ್ ಪರಾಠ: ಪನೀರ್ ಪರಾಠವನ್ನು ಸಾಮಾನ್ಯವಾಗಿ ಹೆಚ್ಚಾಗಿ ಉತ್ತರ ಭಾರತದಲ್ಲಿ ಬೆಳಗಿನ ಉಪಹಾರವಾಗಿ ತಯಾರಿಸಲಾಗುತ್ತದೆ.
ಪನೀರ್ ಪುಲಾವ್: ಪನೀರ್‌ನ ಅನೇಕ ಪಾಕವಿಧಾನಗಳಲ್ಲಿ ಪನೀರ್ ಪುಲಾವ್ ಕೂಡ ಪ್ರಸಿದ್ಧ ಖಾದ್ಯವಾಗಿದೆ.
ಕಡಾಯಿ ಪನೀರ್: ಬಹುತೇಕ ಜನರ ನೆಚ್ಚಿನ ಪನೀರ್ ಖಾದ್ಯಗಳಲ್ಲಿ ಕಡಾಯಿ ಪನೀರ್ ಪ್ರಮುಖ ರೆಸಿಪಿಯಾಗಿದೆ.
ಪಾಲಕ್ ಪನೀರ್: ಪನೀರ್‌ನ ಅತ್ಯಂತ ಪ್ರಸಿದ್ಧ ಭಕ್ಷ್ಯಗಳಲ್ಲಿ ಪಾಲಕ್ ಪನೀರ್ ಕೂಡ ಒಂದು. ಇದರಲ್ಲಿ ಪೋಷಕಾಂಶ ಭರಿತ ಪಾಲಕ್ ಜೊತೆಗೆ ಪನೀರ್ ಬಳಸುವುದರಿಂದ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಪನೀರ್ ಟಿಕ್ಕಾ: ದೊಡ್ಡವರಿಗಿಂತ ಚಿಕ್ಕ ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಭಕ್ಷ್ಯ ಎಂದರೆ ಪನೀರ್ ಟಿಕ್ಕಾ. ನಮ್ಮಲ್ಲಿ ಹೆಚ್ಚಿನ ಮಂದಿ ಇದನ್ನು ಸ್ಟಾರ್ಟರ್ ಆಗಿ ತಿನ್ನಲು ಇಷ್ಟಪಡುತ್ತಾರೆ.
ಮಟರ್ ಪನೀರ್: ತುಂಬಾ ಸುಲಭವಾಗಿ ತಯಾರಿಸಬಹುದಾದ, ಮಕ್ಕಳ ನೆಚ್ಚಿನ ಖಾದ್ಯ ಮಟರ್ ಪನೀರ್. ಮಟರ್ ಎಂದರೆ ಹಸಿ ಬಟಾಣಿಯು ಮಕ್ಕಳ ಮೆದುಳಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ ಆಗಿದೆ.