Sandalwood: ಅತಿ ಹೆಚ್ಚು ಸಂಭಾವನೆ ಪಡೆಯುವ ‌ಕನ್ನಡದ ನಟಿಯರು ಇವರು

Sun, 23 Apr 2023-9:49 am,

ಕೊಡುಗು ಮೂಲದ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಗೀತಾ ಗೋವಿಂದಂ, ಪುಷ್ಪ ಮೂಲಕ ದಕ್ಷಿಣ ಭಾರತದಲ್ಲಿ ಹಿಟ್‌ ಆದರು. ಮಜ್ನು ಮತ್ತು ಗುಡ್‌ಬೈ ಸಿನಿಮಾದಿಂದ ಹಿಂದಿ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡರು. ಪ್ರತಿ ಸಿನಿಮಾಗೆ 8-10 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.  

ಕೆಜಿಎಫ್ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ಡಮ್‌ ಪಡೆದ ನಟಿ ಶ್ರೀನಿಧಿ ಶೆಟ್ಟಿ. ನಟಿ ಶ್ರೀನಿಧಿ ಪ್ರತಿ ಚಿತ್ರಕ್ಕೆ 4-5 ಕೋಟಿ ಸಂಭಾವನೆ ಪಡೆಯುತ್ತಾರೆ.   

ಸ್ಯಾಂಡಲ್‌ವುಡ್‌ ಮೋಸ್ಟ್ ಹ್ಯಾಪನಿಂಗ್ ಬ್ಯೂಟಿ ರಚಿತಾ ರಾಮ್. ಕ್ರಾಂತಿ, ಮಾನ್ಸೂನ್ ರಾಗ, ಲವ್ ಯೂ ರಚ್ಚು ಮತ್ತು ರನ್ನ ಮುಂತಾದ ಕನ್ನಡದ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರತಿ ಚಿತ್ರಕ್ಕೆ ಸುಮಾರು 3 ಕೋಟಿ ಸಂಭಾವನೆ ಪಡೆಯುತ್ತಾರೆ.   

ಕ್ರೇಜಿ ಬಾಯ್ ಚಿತ್ರದಿಂದ ಸಿನಿಪಯಣ ಆರಂಭಿಸಿದ ಆಶಿಕಾ ರಂಗನಾಥ್‌, ಮಾಸ್ ಲೀಡರ್, ಮುಗಳು ನಗೆ, ರಾಜು ಕನ್ನಡ ಮೀಡಿಯಂ ಸಿನಿಮಾಗಳಿಂದ ಖ್ಯಾತಿ ಪಡೆದರು. ಆಶಿಕಾ ರಂಗಂತ್ ಪ್ರತಿ ಚಿತ್ರಕ್ಕೆ 3 ಕೋಟಿ ಸಂಭಾವನೆ ಪಡೀತಾರೆ.   

2013 ರಲ್ಲಿ ಚಂದ್ರಲೇಖಾ ಸಿನಿಮಾ ಮೂಲಕ ಶಾನ್ವಿ ಶ್ರೀವಾಸ್ತವ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದರು. ಕನ್ನಡದಲ್ಲಿ ಭಲೇ ಜೋಡಿ, ತಾರಕ್, ಮಫ್ತಿ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದರು. ಅವರು ಪ್ರತಿ ಚಿತ್ರಕ್ಕೆ ಸುಮಾರು 2-3 ಕೋಟಿ ರೂ. ಚಾರ್ಜ್‌ ಮಾಡ್ತಾರೆ.   

ಕನ್ನಡ ಸಿನಿಮಾ ಮಾತ್ರವಲ್ಲ ಸೌತ್‌ ಇಂಡಸ್ಟ್ರಿಯಲ್ಲಿ ಅತ್ಯಂತ ಜನಪ್ರಿಯರಾಗಿರುವ ನಟಿ ಶ್ರೀಲೀಲಾ. ಕಿಸ್, ಭಾರತೀ, ಬೈ ಟು ಲವ್, ಜೇಮ್ಸ್ ಮತ್ತು ಧಮ್ಕಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು 2-3 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link