ಈ ಬ್ಯಾಂಕ್ ನೀಡುತ್ತಿದೆ SBIಗಿಂತ ಹೆಚ್ಚು ಬಡ್ಡಿದರ , ಹೂಡಿಕೆ ಮಾಡುವ ಮುನ್ನ ತಿಳಿದಿರಲಿ ಪೂರ್ತಿ ಮಾಹಿತಿ

Wed, 01 Sep 2021-8:48 pm,

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಐದು ವರ್ಷಗಳ ಎಫ್‌ಡಿಗಳ ಮೇಲೆ 2 ಕೋಟಿ ರೂ.ಗಿಂತ ಕಡಿಮೆ ಠೇವಣಿಗಳ ಮೇಲೆ ವಾರ್ಷಿಕ ಶೇಕಡಾ 6.25 ರ ಬಡ್ಡಿದರವನ್ನು ನೀಡುತ್ತಿದೆ. ಬ್ಯಾಂಕಿನ ಈ ಬಡ್ಡಿದರಗಳು 16 ಆಗಸ್ಟ್ 2021 ರಿಂದ ಅನ್ವಯವಾಗುತ್ತವೆ. ಇದರಲ್ಲಿ, ಹಿರಿಯ ನಾಗರಿಕರು 0.50 ಶೇಕಡಾ ಹೆಚ್ಚು ಬಡ್ಡಿಯನ್ನು ಪಡೆಯುತ್ತಾರೆ.  

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಐದು ವರ್ಷಗಳ ಎಫ್‌ಡಿ ಮೇಲೆ 6.25 ಶೇಕಡಾ ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ . ಈ ಬಡ್ಡಿ ದರಗಳು 9 ಆಗಸ್ಟ್ 2021 ರಿಂದ ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತವೆ. ಈ ಬ್ಯಾಂಕ್ ಹಿರಿಯ ನಾಗರಿಕರಿಗೆ 0.25 ಶೇಕಡಾ ಹೆಚ್ಚು ಬಡ್ಡಿಯನ್ನು ನೀಡುತ್ತಿದೆ.  

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ 5 ವರ್ಷಗಳ FD ಗಳ ಮೇಲೆ 6.50 ಶೇಕಡಾ ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರು 7 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ. ಈ ಬಡ್ಡಿ ದರಗಳು ಮೇ 7  2021 ರಿಂದ ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತದೆ.

ಉತ್ಕರ್ಶ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗ್ರಾಹಕರಿಗೆ 5 ವರ್ಷಗಳ FD ಗಳ ಮೇಲೆ 6% ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ  ಶೇ. 6.50. ಬಡ್ಡಿ ಸಿಗುತ್ತದೆ. ಈ ಬಡ್ಡಿ ದರಗಳು 1 ಜುಲೈ 2021 ರಿಂದ ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತವೆ.

ನಾರ್ತ್ ಈಸ್ಟ್ ಸ್ಮಾಲ್ ಫೈನಾನ್ಸ್ ಬ್ಯಾಂಕ್  5 ವರ್ಷಗಳ ಎಫ್‌ಡಿಗಳಿಗೆ 6.25 ಶೇಕಡಾ ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರು 6.75 ಶೇಕಡಾ ವಾರ್ಷಿಕ ಬಡ್ಡಿಯನ್ನು ಪಡೆಯುತ್ತಾರೆ. ಈ ಬಡ್ಡಿ ದರಗಳು ಏಪ್ರಿಲ್ 17 2021 ರಿಂದ 2 ಕೋಟಿ ರೂ.ಗಳ ಠೇವಣಿಗಳಿಗೆ ಅನ್ವಯವಾಗುತ್ತದೆ. 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 5 ವರ್ಷಗಳ FD ಗಳ ಮೇಲೆ 5.50 ಶೇಕಡಾ ವಾರ್ಷಿಕ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರು 6.20 ಶೇಕಡಾ ಬಡ್ಡಿಯನ್ನು ಪಡೆಯುತ್ತಾರೆ. ಈ ಬಡ್ಡಿ ದರಗಳು 8 ಜನವರಿ 2021 ರಿಂದ ರೂ 2 ಕೋಟಿಗಿಂತ ಕಡಿಮೆ ಠೇವಣಿಗಳಿಗೆ ಅನ್ವಯವಾಗುತ್ತವೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link