ಈ 5 ಆಹಾರಗಳ ಸೇವನೆಯಿಂದ ದೇಹದಲ್ಲಿ Keratin ಉತ್ಪತ್ತಿ ಹೆಚ್ಚಾಗುತ್ತೆ, ದಟ್ಟ ಹಾಗೂ ನೀಳ ಕೇಶರಾಶಿ ನಿಮ್ಮದಾಗುತ್ತೆ!
ಮೊಟ್ಟೆ ಒಂದು ಸೂಪರ್ ಫುಡ್ ಆಗಿದ್ದು ಇದನ್ನು ಬೆಳಗಿನ ಉಪಾಹಾರದಿಂದ ರಾತ್ರಿಯವರೆಗೂ ಸೇವಿಸಬಹುದು. ಇದು ಕೆರಾಟಿನ್ ಉತ್ಪಾದನೆಗೆ ಸಹಾಯ ಮಾಡುವ ಪ್ರೋಟೀನ್ ಅನ್ನು ಹೊಂದಿರುತ್ತದೆ, ಇದು ನಿಮ್ಮ ಕೂದಲನ್ನು ಆರೋಗ್ಯಕರವಾಗಿಸುತ್ತದೆ.
ಈರುಳ್ಳಿ ಎಂತಹ ಒಂದು ತರಕಾರಿ ಎಂದರೆ ಅದು ದುಬಾರಿಯಾದರೆ ವ್ಯಕ್ತಿಯ ಬಾಯಿಯ ರುಚಿ ಕೆಡುತ್ತದೆ. ಇದನ್ನು ಎಲ್ಲಾ ರೀತಿಯ ಪಾಕವಿಧಾನಗಳಲ್ಲಿ ಬಳಸಲಾಗುತ್ತದೆ. ನಿತ್ಯವೂ ಹಸಿ ಈರುಳ್ಳಿ ತಿಂದರೆ ಕೆರಾಟಿನ್ ಉತ್ಪಾದನೆ ಹೆಚ್ಚುತ್ತದೆ.
ಸಾಲ್ಮನ್ ಸಾಕಷ್ಟು ಕೊಬ್ಬಿನಾಂಶಗಳನ್ನು ಹೊಂದಿರುವ ಒಂದು ಮೀನಾಗಿದೆ, ಇದು ಯಾವಾಗಲೂ ಆರೋಗ್ಯಕ್ಕೆ ಅತ್ಯುತ್ತಮವೆಂದು ಪರಿಗಣಿಸಲ್ಪಟ್ಟಿದೆ.ಇದು ಬಯೋಟಿನ್ ಅನ್ನು ಹೊಂದಿರುತ್ತದೆ, ಇದು ಕೆರಾಟಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಾಕಷ್ಟು ಸಹಾಯ ಮಾಡುತ್ತದೆ.
ನೆಲದಡಿಯಲ್ಲಿ ಬೆಳೆಯುವ ಗೆಣಸು ಕೂಡ ಒಂದು ಅತ್ಯುತ್ತಮವಾದ ಆಹಾರವಾಗಿದ್ದು, ಇದರಲ್ಲಿ ಪೋಷಕಾಂಶಗಳ ಕೊರತೆ ಇಲ್ಲ ಎಂದರೆ ತಪ್ಪಾಗಲಾರದು, ಇದು ಕೆರಾಟಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದನ್ನು ನೀವುಕುದಿಸಿ ತಿನ್ನಬಹುದು, ಕೆಲವರು ಇದನ್ನು ಹಾಲಿನೊಂದಿಗೆ ಬೆರೆಸಿ ತಿನ್ನಲು ಇಷ್ಟಪಡುತ್ತಾರೆ.
ಈರುಳ್ಳಿಯಂತೆಯೇ, ಬೆಳ್ಳುಳ್ಳಿಯನ್ನು ಅನೇಕ ಪಾಕವಿಧಾನಗಳಲ್ಲಿ ಬೆರೆಸಲಾಗುತ್ತದೆ, ಇದು ಎಲ್-ಸಿಸ್ಟೈನ್ ಆಗಿ ಪರಿವರ್ತನೆಗೊಳ್ಳುವ ಎನ್-ಅಸಿಟೈಲ್ಸಿಸ್ಟೈನ್ ಅನ್ನು ಸಮೃದ್ಧ ಪ್ರಮಾಣದಲ್ಲಿ ಹೊಂದಿರುತ್ತದೆ, ಇದು ಕೆರಾಟಿನ್ನಲ್ಲಿ ಕಂಡುಬರುವ ಒಂದು ರೀತಿಯ ಅಮೈನೋ ಆಮ್ಲವಾಗಿದೆ. ಇದರಿಂದಾಗಿ ಬೆಳ್ಳುಳ್ಳಿ ನಮ್ಮ ಕೂದಲಿಗೆ ಉತ್ತಮ ಆಹಾರವಾಗಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)