ಈ ಐದು ರಾಶಿಯವರು ಕೋಪ ಕಂಟ್ರೋಲಿನಲ್ಲಿಡಬೇಕು.!, ಇಲ್ಲದಿದ್ದರೆ ಅಪಾಯ
ವೃಷಭ ರಾಶಿ :ಈ ರಾಶಿಚಕ್ರದವರು ಸಹಜವಾಗಿ ತುಂಬಾ ಹಠಮಾರಿ. ಕೋಪ ಬಂದಾಗ ಸಾಕಷ್ಟು ಆಕ್ರಮಣಕಾರಿ ಆಗುತ್ತಾರೆ. ಇವರ ಕೋಪ ಏರಿದಷ್ಟೇ ಬೇಗ ಇಳಿಯುತ್ತದೆ. ಆದರೆ ಈ ರಾಶಿಯ ಜನರು ಕೋಪದಿಂದ ಯಾರ ಮಾತನ್ನೂ ಕೇಳುವುದಿಲ್ಲ. ಸರಿಯಾದ ವಿಷಯದ ಮೇಲೆ ಇವರ ಕೋಪ ಏರುತ್ತದೆ. ಇವರು ಕೋಪವನ್ನು ಕಂಟ್ರೋಲಿನಲ್ಲಿಟ್ಟುಕೊಳ್ಳಬೇಕು.
ಸಿಂಹ : ಕೋಪ ಬಂದರೆ ಈ ರಾಶಿಯ ಜನ ಉಲ್ಟಾಪಲ್ಟ ಮಾತಾಡಿಬಿಡುತ್ತಾರೆ. ಕೋಪ ಬಂದಾಗ ಸಂಬಂಧ ಕೂಡಾ ಹಾಳು ಮಾಡಿಕೊಂಡು ಬಿಡುತ್ತಾರೆ. ತಮ್ಮ ತಪ್ಪನ್ನು ಸುಲಭದಲ್ಲಿ ಒಪ್ಪುವ ಜಾಯಮಾನದವರು ಇವರಲ್ಲ. ಇವರ ಕೋಪದಿಂದ ಪಾರಾಗಬೇಕಾದರೆ, ತುಂಬಾ ಚಾಲಾಕಿಯಿಂದ ಕೆಲಸ ಮಾಡಬೇಕು.
ವಶ್ಚಿಕ : ಈ ರಾಶಿಚಕ್ರದ ಜನ ತಮ್ಮ ಕೋಪವನ್ನು ಬೇಗನೇ ವ್ಯಕ್ತ ಪಡಿಸುವುದಿಲ್ಲ. ತಮ್ಮೆದುರು ಏನಾದರೂ ತಪ್ಪಾಗುತ್ತಿದ್ದರೆ ಈ ಜನರು ತಮ್ಮ ಸಂಯಮ ಕಳೆದುಕೊಳ್ಳುತ್ತಾರೆ. ಇವರಿಗೆ ಬೇಗ ಕೋಪ ಬರುವುದಿಲ್ಲ. ಬಂದರೆ ಅದರ ಮೇಲೆ ನಿಯಂತ್ರಣ ಸಾಧಿಸಲು ಇವರಿಗೆ ಸಾಧ್ಯವಾಗುವುದಿಲ್ಲ. ಇವರು ಯಾರನ್ನು ಇಷ್ಟ ಪಡುವುದಿಲ್ಲವೋ, ಅವರ ಮರ್ಯಾದೆ ಹರಾಜು ಮಾಡಿಬಿಡುತ್ತಾರೆ.
ಧನು ರಾಶಿ : ಈ ರಾಶಿಚಕ್ರದ ಜನರು ಕೋಪಗೊಂಡಾಗ, ಎಲ್ಲವನ್ನೂ ಹಾಳುಮಾಡುತ್ತಾರೆ. ಕೋಪದಲ್ಲಿ, ಯಾವುದೂ ಅವರ ನಿಯಂತ್ರಣದಲ್ಲಿರಲ್ಲ. ವಸ್ತುಗಳನ್ನು ಬರ್ಬಾದ್ ಮಾಡಿ ಬಿಡುತ್ತಾರೆ. ತಮ್ಮ ತಪ್ಪಿನ ಅರಿವು ಕೂಡಾ ಅವರಿಗೆ ಅತಿಬೇಗ ಉಂಟಾಗುತ್ತದೆ. ಕೋಪ ತಣ್ಣಗಾದ ಮೇಲೆ ಅವರೊಂದಿಗೆ ವ್ಯವಹರಿಸಬಹುದು.
ಮಕರ : ಈ ರಾಶಿಚಕ್ರದ ಜನರಿಗೆ ಕೋಪ ಬೇಗ ಬರುತ್ತದೆ. ಕೋಪ ಬಂದಾಗ ಯಾವುದೂ ಇವರ ಕೈಯಲ್ಲಿರುವುದಿಲ್ಲ. ಕೋಪ ಬಂದಾಗ ತೀರಾ ಅಪಾಯಕಾರಿ ಇವರು. ಇವರ ಅತಿದೊಡ್ಡ ವೀಕ್ನೆಸ್ ಕೋಪ. ಅತಿ ಬೇಗ ಕೋಪ ಶಮನ ಕೂಡಾ ಆಗುತ್ತದೆ. ಇವರು ಕೋಪ ಕಡಿಮೆ ಮಾಡಿಕೊಳ್ಳಲೇಬೇಕು.