ಶರೀರದಲ್ಲಿ ಕಂಡು ಬರುವ Vitamin B12 ಕೊರತೆಯನ್ನು ಪೂರೈಸುತ್ತದೆ ಈ ಆಹಾರ
ಮೊಸರು ವಿಟಮಿನ್ ಬಿ 12 ನ ಉತ್ತಮ ಮೂಲವಾಗಿದೆ. ಮೊಸರು ಸೇವನೆಯು ವಿಟಮಿನ್ ಬಿ 12 ಮಟ್ಟವನ್ನು ಸುಧಾರಿಸಲು ಮತ್ತು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಪ್ರೋಟೀನ್‌ಗಳ ನೈಸರ್ಗಿಕ ಭಬ್=ಭಂಡಾರವಾಗಿರುವ ಸಾಲ್ಮನ್ ವಿಟಮಿನ್ ಬಿ 12 ನ ಉತ್ತಮ ಮೂಲವಾಗಿದೆ. ಸಾಲ್ಮನ್ ಹೃದಯ, ಮೂಳೆಗಳು, ಮೆದುಳಿನ ಆರೋಗ್ಯ ಮತ್ತು ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಮೊಟ್ಟೆಗಳನ್ನು ಆರೋಗ್ಯಕರ ಆಹಾರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವು ಪ್ರೋಟೀನ್ ಮತ್ತು ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿವೆ. ಮಾತ್ರವಲ್ಲ ಮೊಟ್ಟೆ ವಿಟಮಿನ್ ಬಿ 12 ನ ಅತ್ಯುತ್ತಮ ಮೂಲವಾಗಿದೆ. ಮೊಟ್ಟೆಯ ಹಳದಿ ಲೋಳೆಯು ವಿಟಮಿನ್ ಬಿ 12 ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ನೀವು ಸಸ್ಯಾಹಾರಿಗಳಾಗಿದ್ದರೆ ಮತ್ತು ವಿಟಮಿನ್ ಬಿ 12 ಮಟ್ಟವನ್ನು ನೈಸರ್ಗಿಕವಾಗಿ ಹೆಚ್ಚಿಸಲು ಸೋಯಾ ಪನೀರ್, ಧಾನ್ಯಗಳು, ಹಾಲು ಒಇವುಗಳನ್ನು ಸೇವಿಸಬಹುದು. ಇವೆಲ್ಲವೂ ವಿಟಮಿನ್ ಬಿ 12 ನ ಉತ್ತಮ ಮೂಲಗಳಾಗಿವೆ.
ಪ್ರಾಣಿಗಳಿಂದ ತಯಾರಿಸಿದ ಆಹಾರಗಳು ಹೆಚ್ಚಿನ ಪ್ರಮಾಣದ ವಿಟಮಿನ್ ಬಿ 12 ನೊಂದಿಗೆ ಸಮೃದ್ಧವಾಗಿವೆ. ಉದಾಹರಣೆಗೆ ಮೊಟ್ಟೆ, ಕೋಳಿ ಮಾಂಸ ಇತ್ಯಾದಿ. ಕ್ಲೀವ್‌ಲ್ಯಾಂಡ್ ಕ್ಲಿನಿಕ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಟರ್ಕಿ, ಕೋಳಿ ಮಾಂಸವನ್ನು ಸೇವಿಸಿದರೆ, ನೈಸರ್ಗಿಕವಾಗಿ ವಿಟಮಿನ್ ಬಿ 12 ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.