ಹಲ್ಲುಗಳನ್ನು ಬಿಳಿಯಾಗಿಸಬೇಕಾ..? ಹಾಗಾದರೆ ನಿಮ್ಮ ದೈನಂದಿನ ಬದುಕಿನಲ್ಲಿಈ ಆಹಾರ ಪದಾರ್ಥಗಳನ್ನು ರೂಢಿಸಿಕೊಳ್ಳಿ..!
White Teeth: ಏನೇ ಮಾಡಿದರು ಹಲ್ಲಿನ ಮೇಲಿನ ಕರೆ ಮಾಯವಾಗುತ್ತಿಲ್ಲವೇ? ಈ ಆಹಾರಗಳನ್ನ ಸೇವಿಸುವುದರಿಂದ ಬಿಳಿ ಹಲ್ಲು ಪಡೆಯಬಹುದು. ಹಾಗಾದರೆ ಯಾವುದು ಆ ಆಹಾರ? ಮುಂದೆ ಓದಿ...
ದಿನಕ್ಕೆ ಒಂದು ಸೇವು ಸೇವಿಸಿದರೆ ನಾವು ಆರೋಗ್ಯವಾಗಿ ಇರುತ್ತೇವೆ ಎನ್ನುವ ನಂಬೆಕೆ ಇದೆ. ಅದರೆ ಸೇಬು ಸೇವಿಸುವುದರಿಂದ ನಿಮ್ಮ ಹಲ್ಲನ್ನು ಬಿಳಿಯಾಗಿ ಇಡಬಹುದು. ಆಪಲ್‌ನಲ್ಲಿ ಸಮೃದ್ಧವಾಗಿರುವ ಮಲಿಕ್ ಆಮ್ಲ ಹಲ್ಲುಗಳಲ್ಲಿ ಇರುವ ಹಳದಿ ಕಲೆಯನ್ನು ಹೋಗಲಾಡಿಸರು ಸಹಾಯ ಮಾಡುತ್ತದೆ.
ಕ್ಯಾರಟ್‌ನಲ್ಲಿ ವಿಟಮಿನ್ ಎ ಅಂಶ ಹೆಚ್ಚಗಿರುವ ಕಾರಣ ಇದು ಹೆಚ್ಚು ಜೊಲ್ಲಿನ ಉತ್ಪತ್ತಿ ಮಾಡುತ್ತದೆ. ಇದರಿಂದ ಬಾಯಿ ಸದಾ ತೇವವಾಗಿ ಇರುತ್ತದೆ. ಅಷ್ಟು ಸುಲಭವಾಗಿ ಕಲೆ ಕೂಡ ಕಟ್ಟುವುದಿಲ್ಲ.
ಕಲ್ಲಂಗಡಿ ಹೆಚ್ಚು ನೀರಿನಾಂಶ ಉಳ್ಳ ಹಣ್ಣು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಸಮೃದ್ಧವಾಗಿದೆ. ಈ ವಿಟಮಿನ್ ಸಿ ಅಂಶ ಬಾಯನ್ನು ತೇವವಾಗಿ ಇಡಲು ಸಹಾಯ ಮಾಡುತ್ತದೆ. ಇದರಿಂದ ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದರಿಂದ ತಪ್ಪಿಸಬಹುದು.
ಸ್ಟ್ರಾಬೆರಿ ಹಣ್ಣಿನಲ್ಲಿ ಮಲಿಕ್ ಅಂಶವೂ ಸಮೃದ್ದವಾಗಿದೆ. ಅದರಿಂದಾಗಿ ಈ ಅಂಶ ಹಲ್ಲುಗಳನ್ನು ನೈಸರ್ಗಿಕವಾಗಿ ಸ್ವಾಚ್ಚ ಮಾಡಲು ಸಹಾಯ ಮಾಡುತ್ತದೆ.
ಹೆಚ್ಚು ಹಾಲು ಕುಡಿಯುವುದರಿಂದ ಇದು ಹಲ್ಲುಗಳನ್ನು ಗಟ್ಟಿಯಾಗಿ ಇಡಲು ಸಹಾಯ ಮಾಡುತ್ತದೆ. ಹಾಲಿನಲ್ಲಿ ಸಾಮಾನ್ಯವಾಗಿ ಕ್ಯಾಲ್ಸಿಯಂ ಅಂಶ ಸಮೃದ್ಧವಾಗಿರುತ್ತದೆ. ಹಲ್ಲುಗಳನ್ನು ಬಲಿಷ್ಠಗಿಲಿಸಲು ಕೂಡ ಕ್ಯಾಲ್ಸಲಿಯಂ ಅವಶ್ಯಕ. ಇದರಿಂದಾಗಿ ಹಾಲು ಹಲ್ಲುಗಳನ್ನು ಬಲಿಷ್ಠವಾಗಿ ಇಡುವುದು ಅಷ್ಟೇ ಅಲ್ಲದೆ. ನೈಸರ್ಗಿಕವಾಗಿ ಬಿಳಿಯಾಗಿ ಇರಿಸುತ್ತದೆ.
ಅನಾನಸ್ ಹಣ್ಣಿನಲ್ಲಿರುವ ನೈಸರ್ಗಿಕ ರಾಸಾಯನಿಕಗಳು ಹಲ್ಲುಗಳ ಮೇಲಿನ ಹಳದಿ ಕರೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.