ಹೊಸ ವರ್ಷದಲ್ಲಿ ಈ ನಾಲ್ಕು ರಾಶಿಯವರು ಕಷ್ಟಗಳ ಸರಮಾಲೆಯನ್ನೇ ಎದುರಿಸಬೇಕಾಗುತ್ತದೆ .!

Wed, 14 Dec 2022-3:52 pm,

ವೃಷಭ ರಾಶಿ :ವೃಷಭ ರಾಶಿಯ ಜನರು ಮುಂಬರುವ ವರ್ಷದಲ್ಲಿ ಜಾಗರೂಕರಾಗಿರಬೇಕು. ಇವರ ಆರೋಗ್ಯ ಏರುಪೇರಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು.   

ಸಿಂಹ ರಾಶಿ  : 2023 ರಲ್ಲಿ ಸಿಂಹ ರಾಶಿಯವರು ಬಹಳ ಜಾಗರೂಕರಾಗಿರಬೇಕು. ಪತ್ನಿಯ ಆರೋಗ್ಯ ಕೆಡಬಹುದು. ಆದ ಕಾರಣ ನಿಮ್ಮ ಬಾಳ ಸಂಗಾತಿಯ ಆರೋಗ್ಯದ ಕಡೆ ಗಮನ ಹರಿಸುವ ಅಗತ್ಯವಿದೆ. ಆರ್ತಿಕ ಸ್ಥಿತಿ ಹದಗೆಡಬಹುದು. ಅನಗತ್ಯ ಖರ್ಚುಗಳಿಂದ  ಸಾಧ್ಯವಾದಷ್ಟು ದೂರವಿರಿ. ಇಲ್ಲವಾದಲ್ಲಿ ತೊಂದರೆ ಅನುಭವಿಸಬೇಕಾಗುತ್ತದೆ. 

ಕನ್ಯಾ ರಾಶಿ :ಹೊಸ ವರ್ಷ 2023 ರಲ್ಲಿ, ಕನ್ಯಾರಾಶಿಯ ಜನರು  ರಹಸ್ಯ ಶತ್ರುಗಳಿಂದ ತೊಂದರೆಗೊಳಗಾಗಬಹುದು. 2023 ರಲ್ಲಿ ಎಷ್ಟು ಎಚ್ಚರಿಕೆಯಿಂದ ಇದ್ದರೂ ಕಡಿಮೆಯೇ. ದಾಂಪತ್ಯ ಜೀವನದಲ್ಲಿ ಅನೇಕ ಏರಿಳಿತಗಳನ್ನು ನೋಡಬೇಕಾಗಿ ಬರಬಹುದು. ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. 

ಮೀನ ರಾಶಿ : 2023 ರ ವರ್ಷವು ಮೀನ ರಾಶಿಯವರ ಪಾಲಿಗೂ ನೋವಿನ ವರ್ಷವಾಗಿರಲಿದೆ. ಮಾನಸಿಕ ಮತ್ತು ದೈಹಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅನಾವಶ್ಯಕ ಖರ್ಚುಗಳಿಂದ ತೊಂದರೆಯಾಗುವುದು. ಕೆಲಸದ ಸ್ಥಳದಲ್ಲಿ ಸಮಸ್ಯೆಗಳು ಎದುರಾಗಲಿವೆ. 

(ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link