ಹುಡುಗರಲ್ಲಿರುವ ಈ ಗುಣಕ್ಕೆ ಬಹುಬೇಗ ಮನಸೋಲುತ್ತಾರಂತೆ ಹುಡುಗಿಯರು ..!
ಯಾವ ಹುಡುಗರು ಹುಡುಗಿಯರನ್ನು ಗೌರವದಿಂದ ನಡೆಸಿಕೊಳ್ಳುತ್ತಾರೆಯೋ ಅಂಥಹ ಹುಡುಗರತ್ತ ಹುಡುಗಿಯರು ಬಹಳ ಬೇಗ ಆಕರ್ಷಿತರಾಗುತ್ತಾರೆಯಂತೆ. ಮಾತ್ರವಲ್ಲ ಹೆಣ್ಣುಮಕ್ಕಳು ತಮ್ಮ ಸಂಗಾತಿ ತನ್ನ ಜೊತೆ ತನ್ನ ಕುಟುಂಬದ ಸದಸ್ಯರನ್ನೂ ಗೌರವಿಸಬೇಕು ಎಂದು ನಿರೀಕ್ಷಿಸುತ್ತಾರೆ. ಹಾಗಾಗಿ ಕುಟುಂಬ ಸದಸ್ಯರೊಂದಿಗೆ ಹುಡುಗನ ವರ್ತನೆ ಹೇಗಿರುತ್ತದೆ ಎಂಬುದನ್ನು ಕೂಡಾ ಹುಡುಗಿಯರು ಗಮನಿಸುತ್ತಾರೆ.
ಹುಡುಗಿಯರನ್ನು ಕಾಳಜಿ ವಹಿಸುವ ಹುಡುಗರು ತುಂಬಾ ಇಷ್ಟಪಡುತ್ತಾರೆ. ತನ್ನ ಸಂಗಾತಿ ತನ್ನ ಬಗ್ಗೆ ಅತಿ ಹೆಚ್ಚು ಕಾಳಜಿ ವಹಿಸಬೇಕು ಎಂದು ಪ್ರತಿ ಹುಡುಗಿ ಬಯಸುತ್ತಾಳೆ. ತನಗೆ ಅಗತ್ಯವಿದ್ದಾಗ ತನ್ನ ಸಂಗಾತಿ ತನ್ನ ಬಾಲಿ ಇರಬೇಕು ಎನ್ನುವುದು ಹುಡುಗಿಯರ ಮನದಾಸೆಯಾಗಿರುತ್ತದೆ.
ಇನ್ನು ಸಂಬಂಧದಲ್ಲಿ ನಂಬಿಕೆ ಎನ್ನುವುದು ಬಹಳ ಮುಖ್ಯ. ಯಾವುದೇ ಸಂಬಂಧದ ಆಧಾರವೆಂದರೆ ನಂಬಿಕೆ. ಅದಕ್ಕಾಗಿಯೇ ಹುಡುಗಿಯರು ನಂಬಲರ್ಹ ಹುಡುಗರನ್ನು ಹುಡುಕುತ್ತಿರುತ್ತಾರೆ. ತನ್ನಿಂದ ವಿಷಯಗಳನ್ನು ಮುಚ್ಚಿಡುವುದು, ಸುಳ್ಳು ಹೇಳುವುದು ಇಂಥ ಗುಣಗಳನ್ನು ಹುಡುಗಿಯರು ಇಷ್ಟಪಡುವುದಿಲ್ಲ. ಹುಡುಗಿಯರು ಹುಡುಗರ ಪ್ರಾಮಾಣಿಕತೆಯನ್ನು ಇಷ್ಟಪಡುತ್ತಾರೆ.
ಹುಡುಗಿಯರು ಹೆಚ್ಚಾಗಿ ತಮಾಷೆ ಸ್ವಭಾವದ ಮತ್ತು ನಗುವ ಹುಡುಗರನ್ನು ಇಷ್ಟಪಡುತ್ತಾರೆ. ಅಂಥಹ ಹುಡುಗರತ್ತ ಹುಡುಗಿಯರು ಹೆಚ್ಚು ಆಕರ್ಷಿತರಾಗುತ್ತಾರೆ. ಸಾಮಾನ್ಯವಾಗಿ ಹುಡುಗಿಯರಿಗೆ ಹಾಸ್ಯ ಪ್ರಜ್ಞೆಯ ಹುಡುಗರೆಂದರೆ ಇಷ್ಟವಾಗುತ್ತಾರೆ. ಆದರೆ ಕೆಲವು ಹುಡುಗಿಯರು ಶಾಂತವಾಗಿರುವ ಹುಡುಗರ ಕಡೆಗೂ ವಾಲುತ್ತಾರೆ.
ತಮ್ಮ ಜೀವನದ ಪ್ರತಿಯೊಂದು ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳುವ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ. ಇದಲ್ಲದೇ ಆತ್ಮವಿಶ್ವಾಸ ತುಂಬಿದ ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ.