ಅಡುಗೆ ಮಾಡುವಾಗ ಎಚ್ಚರಿಕೆಯಿಂದಿರಿ.. ಈ ಸಣ್ಣ ತಪ್ಪುಗಳನ್ನು ಮಾಡುವುದರಿಂದ ಕುಕ್ಕರ್ ಸ್ಫೋಟಗೊಳ್ಳುತ್ತದೆ! ಹುಷಾರ್
pressure cooker: ಪ್ರತಿಯೊಂದು ಮನೆಯಲ್ಲಿಯೂ ಅಡುಗೆ ಮಾಡಲು ನಾವು ಕುಕ್ಕರ್ ಅನ್ನು ಬಳಸುತ್ತೇವೆ. ಹೀಗೆ ಕುಕ್ಕರ್ ಅನ್ನು ಬಳಸುವುದರಿಂದ ಅಡುಗೆ ಬೇಗ ತಯಾರಾಗುತ್ತದೆ ಅಷ್ಟೆ ಅಲ್ಲದೆ ಸಮಯ ಹಾಗೂ ಗ್ಯಾಸ್ ಅನ್ನು ಇದು ಉಳಿಸುತ್ತದೆ.
ಆದರೆ, ಕುಕ್ಕರ್‌ನಿಂದ ಎಷ್ಟು ಸಹಾಯವಾಗುತ್ತದೆಯೋ, ಇದನ್ನು ಸರಿಯಾಗಿ ಬಳಸದೆ ಹೋದಲ್ಲಿ ಅಪಾಯ ಕೂಡ ಅಷ್ಟೆ ಕಟ್ಟಿಟ್ಟ ಬುತ್ತಿ. ಸರಿಯಾಗಿ ಕುಕ್ಕರ್ ಅನ್ನು ಬಳಸದೆ ಹೋದಲ್ಲಿ ಅದು ಸ್ಪಟ ಗೊಳ್ಳಬಹುದು.
ಈ ಕುಕ್ಕರ್‌ನೊಂದಿಗೆ ನಾವು ಮಾಡುವ ಸಣ್ಣದೊಂದು ತಪ್ಪು, ದೊಡ್ಡ ಅಪಾಯ ಹಾಗೂ ಅಪಘಾತವನ್ನು ಉಂಟು ಮಾಡಬಹುದು. ಅಉಗೆ ಮಾಡುವಾಗ ಕುಕ್ಕರ್‌ಗಳ ಸ್ಫೋಟಗೊಂಡ ಅನೇಕ ಉದಾಹರಣೆಗಳನ್ನು ನಾವು ನೋಡಿರಬಹುದು. ಆದ್ದರಿಂದ ಕುಕ್ಕರ್ ಬಳಸುವಾಗ ಅಗತ್ಯವಾದ ಎಚ್ಚರಿಗಳನ್ನು ತೆಗೆದುಕೊಳ್ಳುವುದು ಉತ್ತಮ.
ಕುಕ್ಕರ್‌ನಲ್ಲಿ ಅರ್ಧಕ್ಕಿಂತ ಹೆಚ್ಚು ಅಕ್ಕಿ, ಬೇಳೆ ಅಥವಾ ಕಾಳುಗಳನ್ನು ತುಂಬಿ ಬೇಯಿಸಬೇಡಿ. ಏಕೆಂದರೆ ಇವು ಬೇಯುತ್ತಿದ್ದಂತೆ ಕುಕ್ಕರ್‌ನ ಒಳಗೆ ಒತ್ತಡ ಹೆಚ್ಚಾಗುತ್ತದೆ. ಇದರಿಂದ ಕುಕ್ಕರ್ ಸ್ಪೋಟಗೊಳ್ಳುವ ಸಾಧ್ಯತೆಗಳು ಹೆಚ್ಚು.
ಕುಕ್ಕರ್ ಅನ್ನು ಮಧ್ಯಮ ಉರಿಯಲ್ಲಿ ಇರಿಸಿ ಮತ್ತು ಹೆಚ್ಚಿನ ಉರಿಯಲ್ಲಿ ಬೇಯಿಸುವುದನ್ನು ತಪ್ಪಿಸಿ. ಕುಕ್ಕರ್‌ನ ರಬ್ಬರ್‌ಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಿ.
ಕುಕ್ಕರ್ ಅನ್ನು ಸ್ವಚ್ಛಗೊಳಿಸುವಾಗ ಅನೇಕರು ಅದರ ಸೀಟಿಯನ್ನು ಸ್ವಚ್ಛಗೊಳಿಸುವುದನ್ನು ನಿರ್ಲಕ್ಷಿಸುತ್ತಾರೆ. ಹೀಗೆ ಇದನ್ನು ನಿರ್ಲಕ್ಷಿಸುವುದರಿಂದ ಅದರಲ್ಲಿ ಇರುವ ಸಣ್ಣ ತೂತಿನೊಳಗೆ ಆಹಾರ ಶೇಕರವಾದಾಗ ಕುಕ್ಕರ್ ತನ್ನ ಪ್ರಶರ್ ಅನ್ನು ಹೊರ ಹಾಕಲಾರದೆ. ಕುಕ್ಕರ್ ಸ್ಪಟ ಗೊಳ್ಳುತ್ತದೆ.
ಕುಕ್ಕರ್‌ನ ಮುಚ್ಚಳವನ್ನು ಮುಚ್ಚಿದ ನಂತರ, ಕುಕ್ಕರ್‌ನ ಮುಚ್ಚಳ ಸರಿಯಾಗಿ ಕೂತಿದೆಯಾ ಅಥವಾ ಇಲ್ವಾ ಎಂಬುದನ್ನು ಪರಿಶೀಲಿಸಬೇಕು. ಕುಕ್ಕರ್‌ನ ಮುಚ್ಚಳ ಸರಿಯಾಗಿ ಮುಚ್ಚದೆ ಹೋದರೆ, ಕುಕ್ಕರ್ ಸೋಟಗೊಳ್ಳುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.
ಕುಕ್ಕರ್‌ನಲ್ಲಿ ನೀರಿನ ಪ್ರಮಾಣವು ತುಂಬಾ ಕಡಿಮೆ ಅಥವಾ ಹೆಚ್ಚು ಇರಬಾರದು. ಕುಕ್ಕರ್‌ನಲ್ಲಿ ನೀರಿನ ಮಟ್ಟ ಕಡಿಮೆಯಿದ್ದರೆ, ಅದು ಹೆಚ್ಚು ಹೊಗೆಯನ್ನು ಉತ್ಪಾದಿಸುತ್ತದೆ. ಇದು ಕುಕ್ಕರ್ ಸ್ಫೋಟಗೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಪ್ರತಿ ಆಹಾರಕ್ಕೂ ವಿಭಿನ್ನ ಪ್ರಮಾಣದ ನೀರು ಬೇಕಾಗುವುದರಿಂದ ಯಾವಾಗಲೂ ಎಚ್ಚರಿಕೆಯಿಂದ ನೀರನ್ನು ಸೇರಿಸುವುದು ಅವಶ್ಯಕ.