ಈ ಪ್ರಾಣಿಗಳನ್ನು ಮನೆಯಲ್ಲಿ ಸಾಕಿದರೆ ಮನೆ ಮಂದಿಯ ಕೈ ಹಿಡಿಯುವುದಂತೆ ಅದೃಷ್ಟ
ವಾಸ್ತು ಪ್ರಕಾರ, ಆಮೆಯನ್ನು ಅದೃಷ್ಟದ ಸಂಕೇತವೆಂದು ಹೇಳಲಾಗುತ್ತದೆ. ಮನೆಯಲ್ಲಿ ಆಮೆ ಇಟ್ಟರೆ ಲಕ್ಷ್ಮೀ ದೇವಿ ಸದಾ ಮನೆಯಲ್ಲಿ ನೆಲೆಸುತ್ತಾಳೆ. ಈ ಮೂಲಕ ನಿಮ್ಮ ಅದೃಷ್ಟ ಯಾವಾಗಲೂ ನಿಮ್ಮೊಂದಿಗೆ ಇರುತ್ತದೆ.
ಮೀನನ್ನು ಸಾಕುವುದರಿಂದ ಮನೆಯ ಋಣಾತ್ಮಕ ಶಕ್ತಿ, ದಾರಿದ್ರ್ಯ ನಿವಾರಣೆಯಾಗಿ, ಧನಾತ್ಮಕ ಶಕ್ತಿ ನೆಲೆಸುತ್ತದೆ ಎನ್ನುವುದು ನಂಬಿಕೆ.
ಮೊಲವನ್ನು ಮನೆಯ ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ.ಈ ಕಾರಣದಿಂದಾಗಿ, ಮನೆಯ ನಕಾರಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ ಮತ್ತು ಧನಾತ್ಮಕ ಶಕ್ತಿಯು ನೆಲೆಸುತ್ತದೆ.
ಕುದುರೆ ಸಾಕುವುದಕ್ಕೆ ಬದಲಾಗಿ ಮನೆಯಲ್ಲಿ ಕುದುರೆ ಅಥವಾ ಓಡುವ ಕುದುರೆಯ ಫೋಟೋ ಹಾಕಬಹುದು.
ನಾಯಿ ಸಾಕುವುದರಿಂದ ಜೀವನದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಜಾತಕದಲ್ಲಿ ಶನಿ ಮತ್ತು ಕೇತುವನ್ನು ಬಲಪಡಿಸಲು ಕಪ್ಪು ನಾಯಿ ಮಂಗಳಕರ ಎನ್ನಲಾಗಿದೆ.
(ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. Zee News ಅದನ್ನು ಖಚಿತಪಡಿಸುವುದಿಲ್ಲ.)