ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಆಡಲಿದ್ದಾರೆ ಟೀಂ ಇಂಡಿಯಾದ ಈ ಆರು ಆಟಗಾರರು
ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತೀಯ ಐದು ದಿಗ್ಗಜ ಆಟಗಾರರು ಕೊನೆಯದಾಗಿ ವಿಶ್ವಕಪ್‌ನಲ್ಲಿ ಆಡುತ್ತಿದ್ದರೆ, ಆರು ಮಂದಿ ಟೀಮ್ ಇಂಡಿಯಾ ಆಟಗಾರರು ಇದೇ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ.
ಕಳೆದ 12 ತಿಂಗಳುಗಳಲ್ಲಿ ಎಲ್ಲಾ ಮಾದರಿಗಳಲ್ಲಿ ಅದ್ಭುತ ಪ್ರದರ್ಶನ ನೀಡಿರುವ 23 ವರ್ಷದ ಟೀಮ್ ಇಂಡಿಯಾ ಪ್ಲೇಯರ್ ಶುಭ್ಮನ್ ಗಿಲ್ ಇದೇ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ತಮ್ಮ ಕೈಚಳಕ ತೋರಿಸಲು ಸಜ್ಜಾಗಿದ್ದಾರೆ.
ಟೀಮ್ ಇಂಡಿಯಾದ ಖ್ಯಾತ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಭಾರತಕ್ಕಾಗಿ ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ. ಇದುವರೆಗೂ ಸಿಕ್ಕಿರುವ ಸೀಮಿತ ಅವಕಾಶಗಳಲ್ಲಿ ಟಾಪ್ ಹಾಗೂ ಮಧ್ಯಮ ಕ್ರಮಾಂಕ ಎರಡರಲ್ಲೂ ಮಿಂಚಿರುವ ಇಶಾನ್ ಕಿಶನ್ ಟೀಮ್ ಇಂಡಿಯಾದ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆದಿದ್ದಾರೆ.
ತಮ್ಮ ಶಕ್ತಿ, ಹೊಸ ಶಾಟ್‌ಗಳು ಮತ್ತು 360 ಡಿಗ್ರಿ ಶಾಟ್‌ಗಳನ್ನು ಆಡುವ ಸಾಮರ್ಥ್ಯದಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಖ್ಯಾತಿ ಪಡೆದಿರುವ ಸೂರ್ಯಾಕುಮಾರ್ ಯಾದವ್ ಸಹ ಭಾರತದ ಪರವಾಗಿ ಮೊದಲ ಬಾರಿಗೆ ವಿಶ್ವಕಪ್ ಆಡಲಿದ್ದಾರೆ.
ಶ್ರೇಯಸ್ ಅಯ್ಯರ್- 28ರ ಹರೆಯದ ಈ ಆಟಗಾರ ಸಹ ಭಾರತದ ಪರ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಆಡಲಿದ್ದಾರೆ. ಮುಕ್ತವಾಗಿ ಬ್ಯಾಟಿಂಗ್ ಮಾಡುವುದು ಅವರ ಸ್ಟ್ರಾಂಗ್ ಪಾಯಿಂಟ್.
ಮೊಹಮ್ಮದ್ ಸಿರಾಜ್ ಭಾರತದ ಪರ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಆಡಲಿದ್ದಾರೆ. ಹೊಸ ಚೆಂಡನ್ನು ಸ್ವಿಂಗ್ ಮಾಡುವ ಅವರ ಸಾಮರ್ಥ್ಯವು ಯಾವುದೇ ತಂಡಕ್ಕೆ ಅಪಾಯವನ್ನುಂಟುಮಾಡುತ್ತದೆ. ಆದರೆ, ಡೆತ್ ಓವರ್‌ಗಳಲ್ಲಿ ಅವರ ಬೌಲಿಂಗ್ ಎಂತಹವರಿಗೂ ಊಹಿಸಲು ಸಾಧ್ಯವಾಗುವುದಿಲ್ಲ.
ಶಾರ್ದೂಲ್ ಠಾಕೂರ್ ಮುಂಬೈನ ಆಲ್‌ರೌಂಡರ್. 'ಪಾಲ್ಘರ್ ಎಕ್ಸ್‌ಪ್ರೆಸ್' ಎಂಬ ಹೆಸರಿನಿಂದಲೇ ಪ್ರಸಿದ್ಧರಾಗಿರುವ ಇವರು ಭಾರತದ ಪರ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಆಡಲಿದ್ದಾರೆ.