Symptoms Of Kidney Disease: ಈ ರೋಗಲಕ್ಷಣಗಳು ದುರ್ಬಲ ಮೂತ್ರಪಿಂಡದ ಸಂಕೇತವಾಗಿರಬಹುದು!
ಕಿಡ್ನಿ ದುರ್ಬಲವಾದಾಗ ಮೂತ್ರದಲ್ಲಿ ತೊಂದರೆ ಉಂಟಾಗುತ್ತದೆ. ಇದರಿಂದ ಮೂತ್ರದ ಬಣ್ಣವೂ ಬದಲಾಗತೊಡಗುತ್ತದೆ. ಅದೇ ರೀತಿ ಮೂತ್ರದಿಂದ ವಾಸನೆ ಬರಲು ಪ್ರಾರಂಭಿಸುತ್ತದೆ. ಏಕೆಂದರೆ ಮೂತ್ರಪಿಂಡದಲ್ಲಿ ಸಮಸ್ಯೆ ಉಂಟಾದಾಗ, ಮೂತ್ರಪಿಂಡದ ಮೇಲೆ ಒತ್ತಡವಿರುತ್ತದೆ. ಇದರಿಂದಾಗಿ ಮೂತ್ರದಲ್ಲಿ ಹೆಚ್ಚಿನ ಪ್ರೋಟೀನ್ ಬರಲು ಪ್ರಾರಂಭಿಸುತ್ತದೆ. ಆದ್ದರಿಂದ ಈ ಸಮಸ್ಯೆ ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ.
ಹಸಿವು ಅನೇಕ ರೋಗಗಳ ಲಕ್ಷಣವಾಗಿದೆ. ಆದರೆ ಮೂತ್ರ ವಿಸರ್ಜನೆಯಲ್ಲಿ ತೊಂದರೆಯ ಜೊತೆಗೆ ಹಸಿವು ಕಡಿಮೆಯಾಗಿದ್ದರೆ, ಅದು ಮೂತ್ರಪಿಂಡದ ದುರ್ಬಲತೆಯ ಸಂಕೇತವಾಗಿದೆ. ಹೌದು ಕಿಡ್ನಿಯಲ್ಲಿ ಸಮಸ್ಯೆ ಉಂಟಾದಾಗ ಹಸಿವು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಮೂತ್ರಪಿಂಡವು ದುರ್ಬಲಗೊಳ್ಳಲು ಪ್ರಾರಂಭಿಸಿದರೆ ನೀವು ಅಧಿಕ ರಕ್ತದೊತ್ತಡ ಕಾಯಿಲೆಗೆ ಒಳಗಾಗುತ್ತೀರಿ. ನೀವು ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೆ, ಮೂತ್ರಪಿಂಡವನ್ನು ಪರೀಕ್ಷಿಸಬೇಕು.
ಕಿಡ್ನಿ ಸಮಸ್ಯೆ ಹೆಚ್ಚಾದಾಗ ಎದೆನೋವಿನ ಕೂಡ ಬರುತ್ತದೆ. ಏಕೆಂದರೆ ಕಿಡ್ನಿಯಲ್ಲಿ ಸಮಸ್ಯೆ ಉಂಟಾದಾಗ ಕಿಡ್ನಿಯು ರಕ್ತವನ್ನು ಸರಿಯಾಗಿ ಶೋಧಿಸಲು ಸಾಧ್ಯವಾಗದೆ ಅದು ಹೃದಯದ ಒಳಪದರದ ಬಳಿ ಶೇಖರಣೆಗೊಂಡು ಎದೆನೋವು ಶುರುವಾಗುತ್ತದೆ. ಆದ್ದರಿಂದ ಎದೆ ನೋವು ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ.