Team India Players: ವಿಚ್ಛೇದಿತ ಮಹಿಳೆಯರನ್ನು ವಿವಾಹವಾಗಿರುವ ಟೀಮ್ ಇಂಡಿಯಾದ ಆಟಗಾರರು

Mon, 07 Jun 2021-9:20 am,

ಭಾರತದ ಆರಂಭಿಕ ಬ್ಯಾಟ್ಸ್‌ಮನ್ ಮುರಳಿ ವಿಜಯ್ (Murali Vijay) ನಿಕಿತಾ ವಂಜಾರ ಅವರನ್ನು ವಿವಾಹವಾದರು. ನಿಕಿತಾ ಟೀಮ್ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿ, ಆದರೆ ನಂತರ ಅವರು ಕಾರ್ತಿಕ್ ಜೊತೆ ವಿಚ್ಛೇದನ ಪಡೆದು ವಿಜಯ್ ಅವರನ್ನು ವಿವಾಹವಾದರು. ಇದಕ್ಕಾಗಿ ಅನೇಕ ಬಾರಿ ಜನರು ಈ ಇಬ್ಬರು ಆಟಗಾರರನ್ನು ಗೇಲಿ ಮಾಡುವುದೂ ಉಂಟು.

ಭಾರತೀಯ ಕ್ರಿಕೆಟ್ ತಂಡದ ಪ್ರಬಲ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ (Shikhar Dhawan) 2012 ರಲ್ಲಿ ಆಯೆಷಾ ಮುಖರ್ಜಿ ಅವರನ್ನು ವಿವಾಹವಾದರು. ಆಯೆಷಾ ತನ್ನ ಮೊದಲ ಮದುವೆಯ ನಂತರ ವಿಚ್ಛೇದನ ಪಡೆದರು. ಆಯೆಷಾ ಮುಖರ್ಜಿ ಅವರಿಗೆ ಮೊದಲ ಗಂಡನಿಂದ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಯೆಷಾ ಸಹ ಶಿಖರ್ ಗಿಂತ 10 ವರ್ಷ ದೊಡ್ಡವರು. ಆದರೆ ಇದರ ಹೊರತಾಗಿಯೂ  ಇಬ್ಬರೂ ಪರಸ್ಪರ ಸಂತೋಷದಿಂದ ಬದುಕುತ್ತಿದ್ದಾರೆ.

ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಅವರ ಹೆಸರೂ ಈ ಪಟ್ಟಿಯಲ್ಲಿ ಬರುತ್ತದೆ. ಶಮಿ 2014 ರಲ್ಲಿ ಹಸೀನ್ ಜಹಾನ್ ಅವರನ್ನು ವಿವಾಹವಾದರು. ಆದರೆ, ಪ್ರಸ್ತುತ ಇಬ್ಬರ ನಡುವಿನ ಸಂಬಂಧ ಅಷ್ಟಾಗಿ ಚೆನ್ನಾಗಿಲ್ಲ. ಇಬ್ಬರೂ ಪರಸ್ಪರ ಪ್ರತ್ಯೇಕವಾಗಿ ವಾಸಿಸುತ್ತಾರೆ. ಹಸೀನ್ ತನ್ನ ಮೊದಲ ಗಂಡನಿಂದ ವಿಚ್ಛೇದನ ಪಡೆದು ಶಮಿ ಅವರನ್ನು ಮದುವೆಯಾಗಿದ್ದಾರೆ. ಆದರೆ ವಿಶೇಷವೆಂದರೆ ಶಮಿ ಮತ್ತವರ ಕುಟುಂಬಕ್ಕೆ ಹಸೀನ್ ಜಹಾನ್ ಅವರು ಮೊದಲೇ ಮದುವೆಯಾಗಿದ್ದರು ಎಂಬ ವಿಷಯ ಮದುವೆಗೂ ಮೊದಲು ತಿಳಿದಿರಲಿಲ್ಲ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ - Mohammed Shami: ಫೋಟೋ ಶೇರ್ ಮಾಡಿ ಟ್ರೋಲ್‍ಗೆ ಗುರಿಯಾದ ಶಮಿ ಪತ್ನಿ Hasin Jahan

ಮಾಜಿ ವೇಗದ ಬೌಲರ್ ವೆಂಕಟೇಶ್ ಪ್ರಸಾದ್ (Venkatesh Prasad) ಕೂಡ ವಿಚ್ಛೇದಿತ ಮಹಿಳೆಯನ್ನು ಮದುವೆಯಾದರು. 1996 ರಲ್ಲಿ, ವೆಂಕಟೇಶ್ ಪ್ರಸಾದ್ ತನ್ನ ಮೊದಲ ಗಂಡನಿಂದ ವಿಚ್ಛೇದನ ಪಡೆದ ಜಯಂತಿ ಎಂಬ ಮಹಿಳೆಯನ್ನು ವಿವಾಹವಾದರು. 

ಇದನ್ನೂ ಓದಿ -  UAE ನಲ್ಲಿ T-20 ವಿಶ್ವಕಪ್ ನಡೆಸಲು ICC ನಿರ್ಧಾರ!

ಹಿರಿಯ ಭಾರತೀಯ ಲೆಗ್ ಸ್ಪಿನ್ ಬೌಲರ್ ಅನಿಲ್ ಕುಂಬ್ಳೆ (Anil Kumble) ಅವರ ಪತ್ನಿ ಸಹ ಮೊದಲ ಪತಿಯೊಂದಿಗೆ ವಿಚ್ಚೇದನ ಪಡೆದರು. ಚೇತನಾ ಎಂಬ ಈ ಮಹಿಳೆಯೊಂದಿಗೆ, ಕುಂಬ್ಳೆ 1999 ರಲ್ಲಿ ವಿವಾಹವಾದರು. ಈಗ ಈ ದಂಪತಿಗಳು ಸುಖ ದಾಂಪತ್ಯ ಜೀವನವನ್ನು ಅನುಭವಿಸುತ್ತಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link