ಟೇಬಲ್ ಟೆನಿಸ್ ಆಡುತ್ತಲೇ ಪತ್ನಿ ಜೊತೆ ಬಾಲಿವುಡ್ ಸಾಂಗ್ ಮರುಸೃಷ್ಟಿಸಿದ ಶಿಖರ್ ಧವನ್ ...!

ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ಪತ್ನಿ ಆಯೆಷಾ ತಮ್ಮ ಮನೆಯಲ್ಲಿ ಟೇಬಲ್ ಟೆನಿಸ್ ರಾಕೆಟ್‌ಗಳು ಮತ್ತು ಪಿಂಗ್ ಪಾಂಗ್ ಬಾಲ್ ಬಳಸಿ ಹಳೆಯ ಬಾಲಿವುಡ್ ಹಾಡನ್ನು ಮರುಸೃಷ್ಟಿಸಿದ್ದಾರೆ. 

Last Updated : Apr 3, 2020, 08:54 PM IST
ಟೇಬಲ್ ಟೆನಿಸ್ ಆಡುತ್ತಲೇ ಪತ್ನಿ ಜೊತೆ ಬಾಲಿವುಡ್ ಸಾಂಗ್ ಮರುಸೃಷ್ಟಿಸಿದ ಶಿಖರ್ ಧವನ್ ...! title=
Photo Courtsey : Instagram

ನವದೆಹಲಿ: ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಮತ್ತು ಪತ್ನಿ ಆಯೆಷಾ ತಮ್ಮ ಮನೆಯಲ್ಲಿ ಟೇಬಲ್ ಟೆನಿಸ್ ರಾಕೆಟ್‌ಗಳು ಮತ್ತು ಪಿಂಗ್ ಪಾಂಗ್ ಬಾಲ್ ಬಳಸಿ ಹಳೆಯ ಬಾಲಿವುಡ್ ಹಾಡನ್ನು ಮರುಸೃಷ್ಟಿಸಿದ್ದಾರೆ. 

ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಯಾವುದೇ ಅಂತರರಾಷ್ಟ್ರೀಯ ಅಥವಾ ದೇಶೀಯ ಕ್ರಿಕೆಟ್ ನಡೆಯುತ್ತಿಲ್ಲವಾದ್ದರಿಂದ, ಮಾಜಿ ಮತ್ತು ಪ್ರಸ್ತುತ ಕ್ರಿಕೆಟ್ ತಾರೆಗಳು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ತೊಡಗಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ.

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಕ್ರಿಯಾಶೀಲವಾಗಿರುವ ಶಿಖರ್ ಧವನ್ ಆಗಾಗ ವಿಭಿನ್ನ ರೀತಿಯ ವಿಡೀಯೋಗಳನ್ನು ಶೇರ್ ಮಾಡಿಕೋಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾರೆ. ಈಗ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಇಬ್ಬರು ವಿನೂತನ ಸ್ಟೆಪ್ ಮೂಲಕ ಗಮನ ಸೆಳೆದಿದ್ದಾರೆ.

 
 
 
 

 
 
 
 
 
 
 
 
 

Ho gayi shaam jaane do jaana hai 😉😜😘 @aesha.dhawan5 #JeetendraJi

A post shared by Shikhar Dhawan (@shikhardofficial) on

ವಿಶೇಷವೆಂದರೆ ಈಗ ಈ ಹಾಡು ಜೀತೇಂದ್ರ ಹಾಗೂ ಲೀನಾ ಚಂದಾವರಕರ್ ಅವರ ಅಭಿನಯಿಸಿದ  ಹಾಡನ್ನು ತಮ್ಮ ಆಟದಲ್ಲಿ ಮರು ಸೃಷ್ಟಿಸಿದ್ದಾರೆ. ಇದಕ್ಕೂ ಮೊದಲು ಅವರು ಈ ಹಿಂದೆ ಮನೆಯಲ್ಲಿ ಬಟ್ಟೆಗಳನ್ನು ಸ್ವಚ್ಛ ಮಾಡುವ ವೀಡಿಯೋವನ್ನು ಶೇರ್ ಮಾಡಿದ್ದರು. ಇದರಲ್ಲಿ ಪತ್ನಿ ಆರ್ಡರ್ ಮಾಡುವುದನ್ನು ನಾವು ಕಾಣಬಹುದಾಗಿತ್ತು.

ಕೊರೊನಾ ಭೀತಿ ಹಿನ್ನಲೆಯಲ್ಲಿ ಈಗ ಎಲ್ಲ ಅಂತರಾಷ್ಟ್ರೀಯ ಟೂರ್ನಿಗಳು ಸ್ಥಗಿತಗೊಂಡಿವೆ. ಈ ವರ್ಷದ ಐಪಿಲ್, ಒಲಂಪಿಕ್, ಹಾಗೂ ವಿಂಬಲ್ಡನ್ ಟೂರ್ನಿಗಳು ಜಾಗತಿಕವಾಗಿ ರದ್ದಾಗಿವೆ. 

Trending News