ಈ ರಾಶಿಯವರಿಗೆ ಗುರು ದೆಸೆ !ಬೆನ್ನ ಹಿಂದೆಯೇ ಇರುವಳು ಸಂಪತ್ತಿನ ಅಧಿದೇವತೆ ! ಹೋದಲೆಲ್ಲಾ ಒಲಿದು ಬರುವುದು ವಿಜಯ ಮಾಲೆ

Sat, 02 Mar 2024-9:14 am,

ಮೇಷ ರಾಶಿ : ಮೇಷ ರಾಶಿಯವರ ಜೀವನದಲ್ಲಿ ಅದೃಷ್ಟ ಒಲಿದು ಬರಲಿದೆ. ಕುಟುಂಬ ಜೀವನದಲ್ಲಿ ಸಂತೋಷ ಮನೆ ಮಾಡುತ್ತದೆ. ಗೌರವ ಹೆಚ್ಚಾಗಲಿದೆ.  ಏನೇ ಕೆಲಸ ಮಾಡಿದರೂ ಯಶಸ್ಸು ನಿಮ್ಮದಾಗುವುದು. ಹಣದ ಕೊರತೆ ನಿಮ್ಮನ್ನು ಕಾಡುವುದಿಲ್ಲ.  

ವೃಷಭ ರಾಶಿ : ವೃಷಭ ರಾಶಿಯವರು ಹೊಸ ಮನೆ ಅಥವಾ ನಾಲ್ಕು ಚಕ್ರದ ವಾಹನವನ್ನು ಖರೀದಿಸುವ ಯೋಗವಿದೆ. ದಾಂಪತ್ಯ ಜೀವನದಲ್ಲಿ ಉತ್ತಮವಾಗಿರಲಿದೆ.ಗುರುಯೋಗ ನಿಮ್ಮ ಜಾತಕದಲ್ಲಿ ರೂಪುಗೊಳ್ಳಲಿದೆ. ನೀವು ಕೇ ಹಾಕುವ ಎಲ್ಲಾ ಕೆಲಸಗಳೂ ಕೈ ಹಿಡಿಯುವುದು. 

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಸ್ವಂತ ಮನೆಯ ಕನಸು ನನಸಾಗುವುದು.ಇಲ್ಲಿಯವರೆಗೆ ನಿಮ್ಮನ್ನು ಬಾಧಿಸುತ್ತಿದ್ದ ಸಾಲದ ಸಮಸ್ಯೆ ಪರಿಹಾರವಾಗಲಿದೆ. ಸಾಲದಿಂದ ಮುಕ್ತರಾಗುವ ಕಾಲ ಸನಿಹವಾಗುತ್ತಿದೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ.

ಕರ್ಕಾಟಕ ರಾಶಿ: ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಜಯ ಒಲಿದು ಬರುತ್ತದೆ. ಯಾವುದಾದರೂ ಹೊಸ ಕೆಲಸ ಆರಂಭಿಸಬೇಕು ಎಂದು ಕೊಂಡಿದ್ದಲ್ಲಿ ಇದು ಉತ್ತಮ ಸಮಯ. ಮುಟ್ಟಿದ್ದೆಲ್ಲಾ ಚಿನ್ನವಾಗುವ ಕಾಲ. ಸೋಲಿನ ಭಯವಿಲ್ಲದೆ ಮುನ್ನಡೆಯಬಹುದು. 

ಸೂಚನೆ  :ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ಈ ಮಾಹಿತಿಯನ್ನು ಝೀ ಮೀಡಿಯಾ ಖಚಿತಪಡಿಸಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link