ಡಿಸೆಂಬರ್ 3 ರಿಂದ, ಈ ರಾಶಿಯವರು ಜಾಗರೂಕರಾಗಿರಬೇಕು.! ಸಣ್ಣ ತಪ್ಪು ಕೂಡಾ ದೊಡ್ಡ ನಷ್ಟಕ್ಕೆ ಕಾರಣವಾಗುತ್ತದೆ

Tue, 29 Nov 2022-3:43 pm,

ಧನು ರಾಶಿ : ಬುಧ ಸಂಕ್ರಮಣ ಈ ರಾಶಿಯವರಿಗೆ ಶುಭ ಫಲ ನೀಡುವುದಿಲ್ಲ. ಆರೋಗ್ಯ ಕೆಡಬಹುದು. ಅತಿಯಾದ ಓಡಾಟ ಮತ್ತು ವ್ಯರ್ಥ ಖರ್ಚಿನಿಂದಾಗಿ  ಆರ್ಥಿಕ ಬಿಕ್ಕಟ್ಟು ಎದುರಿಸಬೇಕಾಗಬಹುದು. ವೈವಾಹಿಕ ಜೀವನದಲ್ಲೂ ಸಮಸ್ಯೆಗಳು ಕಂಡು ಬರಬಹುದು. 

ಮಿಥುನ ರಾಶಿ : ಬುಧದ ಸಂಚಾರವು ಈ ರಾಶಿಯವರ ಜೀವನದಲ್ಲಿ ಅನಿರೀಕ್ಷಿತ ಏರಿಳಿತಗಳು ಎದುರಾಗುವಂತೆ ಮಾಡುತ್ತದೆ. ಇಷ್ಟೇ ಅಲ್ಲ, ವ್ಯಕ್ತಿಯು ಸಾಕಷ್ಟು ಓಡಾಟ ಮತ್ತು ಖರ್ಚುಗಳನ್ನು ಎದುರಿಸಬೇಕಾಗಬಹುದು. ಇದರಿಂದ ಆರ್ಥಿಕ ಬಿಕ್ಕಟ್ಟು ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಸ್ಥಾನಮಾನದಲ್ಲಿ ಕೂಡಾ ಏರುಪೇರು ಕಂಡು ಬರುತ್ತದೆ.   ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. 

ಮೇಷ ರಾಶಿ :ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧ ಗ್ರಹ ಸಂಕ್ರಮಿಸಿದಾಗ ಅದರ ಪರಿಣಾಮ ವ್ಯಕ್ತಿಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ, ಈ ರಾಶಿಚಕ್ರದ ಜನರು  ಮೆಡಿಸಿನ್ ರಿಯಾಕ್ಷನ್ ಮತ್ತು ಚರ್ಮ ರೋಗಗಳು ಇತ್ಯಾದಿಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಈ ಸಮಯದಲ್ಲಿ ಸಾಲ ನೀಡುವುದನ್ನು ತಪ್ಪಿಸಿ.  ಇಲ್ಲವಾದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link