ಇನ್ನು ಈ ರಾಶಿಯವರು ಏನು ಮಾಡಿದರೂ ಇವರಿಗೆ ಜಯ ಕಟ್ಟಿಟ್ಟ ಬುತ್ತಿ! ಇವರ ಸಂತಸಕ್ಕೆ ಎಲ್ಲೆಯೇ ಇರುವುದಿಲ್ಲ !

Wed, 03 Jan 2024-8:02 am,

ಯಾರ ಮೇಲೆ ಬುಧನ ಆಶೀರ್ವಾದ ಇರುವುದೋ ಅವರು ಜೀವನದಲ್ಲಿ ಬಹಳ ಎತ್ತರಕ್ಕೆ ಬೆಳೆಯುತ್ತಾರೆ. ಅವರು ಮಾತಿನ  ಮಲ್ಲರಾಗಿರುತ್ತಾರೆ. ಮಾತಿನ ಮೂಲಕವೇ ಜಗತ್ತನ್ನು ಗೆಲ್ಲುತ್ತಾರೆ. ತುಂಬಾ ಬುದ್ಧಿವಂತರು ಮತ್ತು ಉತ್ತಮ ತಾರ್ಕಿಕ ಸಾಮರ್ಥ್ಯವನ್ನು ಹೊಂದಿರುತ್ತಾರೆ.  

ಮಿಥುನ ರಾಶಿ :  ಮಿಥುನ ರಾಶಿಯವರಿಗೆ ಬುಧ ಸಂಕ್ರಮಣವು ತುಂಬಾ ಶುಭಕರವಾಗಿರುತ್ತದೆ. ಮಿಥುನ ರಾಶಿಯ ಅಧಿಪತಿಯೇ ಬುಧ.ಆಸ್ತಿ ಮತ್ತು ವಾಹನವನ್ನು ಖರೀದಿಸುವ ಅವಕಾಶವಿರುತ್ತದೆ.ವಿವಾಹಿತರಿಗೆ ಈ ಸಮಯವು ವಿಶೇಷವಾಗಿ ಅನುಕೂಲಕರವಾಗಿರಲಿದೆ.ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವುದು. 

ಕನ್ಯಾ ರಾಶಿ : ಪೂರ್ವಿಕರ ಆಸ್ತಿಯಿಂದ ಲಾಭವನ್ನು ತರುತ್ತದೆ.ಹೊಸ ವಾಹನ ಅಥವಾ ಆಸ್ತಿಯನ್ನು ಖರೀದಿಸುವ ಅವಕಾಶವೂ ಇರುತ್ತದೆ. ಐಷಾರಾಮಿ ವಸ್ತುಗಳ ಖರೀದಿಗೆ ಖರ್ಚು ಮಾಡಬಹುದು. ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ. 

ಧನು ರಾಶಿ: ಈ ರಾಶಿಯವರಿಗೆ ಹೆಚ್ಚಿನ ಲಾಭವಾಗುವುದು. ಈ ಜನರ ವ್ಯಕ್ತಿತ್ವದಲ್ಲಿ ಸುಧಾರಣೆ ಇರುತ್ತದೆ.  ಪೂರ್ವಿಕರ ಆಸ್ತಿಯಿಂದ ಭರ್ಜರಿ ಲಾಭವಾಗುವುದು.ನೀವು ಅಂದುಕೊಳ್ಳದ ಆಸ್ತಿ ನಿಮ್ಮ ಕೈ ಸೇರಲಿದೆ.  ನಿಮ್ಮ ಮನಸ್ಸಿನ ಆಸೆ ಈಡೇರಬಹುದು.ಆರ್ಥಿಕ ಲಾಭದ ಸಾಧ್ಯತೆಗಳಿವೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link