ನೈಸರ್ಗಿಕವಾಗಿ ಮತ್ತು ಬುಡದಿಂದಲೇ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ ಈ ವಸ್ತುಗಳು
ಕಪ್ಪು ಎಳ್ಳು, ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸುತ್ತದೆ. ಕಪ್ಪು ಎಳ್ಳನ್ನು ಅರೆದು ಪೇಸ್ಟ್ ಮಾಡಿ ಅದನ್ನು ಕೂದಲಿಗೆ ಹಚ್ಚಬೇಕು. ಅಥವಾ ಕಪ್ಪು ಎಳ್ಳನ್ನು ವಾರಕ್ಕೆ ಎರಡು ಬಾರಿ ತಿನ್ನುವುದು ಕೂಡಾ ಕೂದಲು ಬಿಳಿಯಾಗುವ ಪ್ರಕ್ರಿಯೆ ನಿಧಾನವಾಗುತ್ತದೆ.
ನೆಲ್ಲಿಕಾಯಿ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುತ್ತದೆ.ನೆಲ್ಲಿಕಾಯಿ ಕುದಿಸಿದ ನೀರನ್ನು ಕೂದಲಿಗೆ ಹಚ್ಚುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ.ಅಲ್ಲದೆ ನೆಲ್ಲಿಕಾಯಿಯನ್ನು ಅರೆದು ತೆಂಗಿನೆಣ್ಣೆಯಲ್ಲಿ ಬೆರೆಸಿ ಕೂದಲಿಗೆ ಹಚ್ಚಿದರೂ ಬಿಳಿ ಕೂದಲು ಕಪ್ಪಾಗಿಸುವಲ್ಲಿ ಪರಿಣಾಮಕಾರಿಯಾಗಿರುತ್ತದೆ.
ಕರಿಬೇವಿನ ಎಲೆಗಳು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಅನ್ನು ಹೊಂದಿದ್ದು ಅದು ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಲು ಸಹಾಯ ಮಾಡುತ್ತದೆ
ಭೃಂಗರಾಜ್ ಎಣ್ಣೆ ಬಿಳಿ ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲ ಕೂದಲು ಉದುರುವಿಕೆಯನ್ನು ಕೂಡಾ ತಡೆಯುತ್ತದೆ. ಅಲ್ಲದೆ ಇದು ಬಿಳಿ ಕೂದಲು ಬೆಳೆಯದಂತೆ ತಡೆಯುತ್ತದೆ.
ದಾಸವಾಳದ ಎಲೆ ಮತ್ತು ಹೂವು ಎರಡೂ ಕೂದಲಿನ ಆರೋಗ್ಯಕ್ಕೆ ಬಹಳ ಸಹಕಾರಿ. ಇ(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ.)ದು ಸಣ್ಣ ವಯಸ್ಸಿನಲ್ಲಿಯೇ ಕೂದಲು ಬಿಳಿಯಾಗುವುದನ್ನು ತಡೆಯುತ್ತದೆ.